Ticker

6/recent/ticker-posts

Ad Code

Responsive Advertisement

ನವಜಾತ ಶಿಶುಗಳಿಗೆ ಅಂಗನವಾಡಿ ಕೇಂದ್ರಗಳು ಎರಡನೇ ತಾಯಿ ಇದ್ದಂತೆ

ನವಜಾತ ಶಿಶುಗಳಿಗೆ ಅಂಗನವಾಡಿ ಕೇಂದ್ರಗಳು ಎರಡನೇ ತಾಯಿ ಇದ್ದಂತೆ ಎಂದು ಶಾಸಕ ವೀರಭದ್ರಯ್ಯ ಅಭಿಪ್ರಾಯಪಟ್ಟರು. ತಾಲೂಕಿನ ದೊಡ್ಡೇರಿ ಹೋಬಳಿಯ ಬಡಿಗೊಂಡನಹಳ್ಳಿ, ವಿಡಿಜಿ ಪಾಳ್ಯ, ಬೊಮ್ಮೆ ತಿಮ್ಮನಹಳ್ಳಿ, ಚಿಕ್ಕ ತಿಮ್ಮನಹಳ್ಳಿ, ಬಿಎಂ ಪಾಳ್ಯ, ಬಡವನಹಳ್ಳಿಯಲ್ಲಿ ಜಿ.ಪಂ. ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗು ನರೇಗಾ ಯೋಜನೆಯಡಿ ನಿರ್ಮಾಣವಾದ 48 ಲಕ್ಷ ವೆಚ್ಚದ 6 ಅಂಗನವಾಡಿಗಳ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.    

ಹುಟ್ಟಿದ ನವಜಾತ ಶಿಶುವಿಗೆ ತಾಯಿಯೇ ಮೊದಲ ಗುರು ವಾಗಿದ್ದಾರೆ ಅಂಗನವಾಡಿ ಕೇಂದ್ರಗಳ ಮಾತೆಯರು ಎರಡನೇ ತಾಯಿಯಿದ್ದಂತೆ, ಇಲ್ಲಿ ಸಿಗುವ ಪೌಷ್ಟಿಕ ಆಹಾರ, ಹಾಗೂ ತಳಮಟ್ಟದ ಶಿಕ್ಷಣವು ಮಕ್ಕಳಿಗೆ ಭೌತಿಕ ಶಕ್ತಿಯ ಜೊತೆಗೆ ಉತ್ತಮ ಆರೋಗ್ಯವನ್ನು ನೀಡುತ್ತದೆ. ಇಂತಹ ಅಂಗನವಾಡಿ ಕ್ಷೇತ್ರಗಳಲ್ಲಿ ಸಿಬ್ಬಂದಿಗಳು ಯಾವುದೇ ತಾರತಮ್ಯ ಮಾಡದೆ ಪ್ರಮಾಣಿಕವಾಗಿ ಮಕ್ಕಳ ಸೇವೆ ಮಾಡಬೇಕು, ಇಂದು ಕವನ ಮೂರನೇ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದ್ದು ಮಕ್ಕಳ ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. 

ಈಗ ಉದ್ಘಾಟನೆಯಾದ 6 ಕಟ್ಟಡಗಳು ಸಹ ಗುಣಮಟ್ಟದಿಂದ ಕೂಡಿದ್ದು ಮುಂದೆಯೂ ಇದೇ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಜಿ.ಪಂ.ಎಇಇ ಸುರೇಶ್ ರೆಡ್ಡಿ ಅವರಿಗೆ ತಿಳಿಸಿದರು.            

ತುಮಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್, ತಾ.ಪಂ. ಇಓ.ದೊಡ್ಡ ಸಿದ್ಧಯ್ಯ, ಸಿಡಿಪಿಓ ಅನಿತಾ, ಎಇಇ‌ ಸುರೇಶ್ ರೆಡ್ಡಿ, ಎಸಿಡಿಪಿಓ ಸ್ವಾಮಿ, ಸೂಪರ್ವೈಸರ್ ನೇತ್ರಾವತಿ, ಗ್ರಾಮ ಪಂಚಾಯಿತಿ ಪಿಡಿಓ ಶಿಲ್ಪ, ಅಧ್ಯಕ್ಷರು, ಸದಸ್ಯರು ಮತ್ತಿತರಿದ್ದರು.

Post a Comment

0 Comments

Ad Code

Responsive Advertisement