ಬಹುದಿನಗಳ ಬೇಡಿಕೆ ಯಾಗಿದ್ದ ಹೊಸ ಟ್ರಾನ್ಸ್ಫಾರ್ಮರ್ ಅಳವಡಿಸಿದ ಎಂ.ಎಸ್.ಸಿದ್ದಪ್ಪ
-ಸಂತಸ ವ್ಯಕ್ತ ಪಡಿಸಿದ ಗ್ರಾಮಸ್ಥರು
ಬಳ್ಳಾರಿ ಆ 17.ಸಿರುಗುಪ್ಪ ತಾಲೂಕಿನ ಮೈಲಾಪುರ ಗ್ರಾಮದ ರೈತರು ಮತ್ತು ಊರಿನ ಜನರ ಬಹಳ ದಿನಗಳ ಬೇಡಿಕೆಯಾಗಿದ್ದ ಕುಡಿಯುವ ನೀರು ಮತ್ತು ಬಳಕೆಯ ನೀರಿನ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಮೈಲಾಪುರ ಗ್ರಾಮದ ಜನರು ಇದನ್ನು ಸರಿಪಡಿಸುವಂತೆ ಸಿರುಗುಪ್ಪ ಬಿಜೆಪಿ ಯುವಮೋರ್ಚ ತಾಲೂಕಿನ ಅಧ್ಯಕ್ಷ ಹಾಗು ಜನಪ್ರಿಯ ನಾಯಕನಾದ ಎಂ.ಎಸ್ ಸಿದ್ದಪ್ಪನವರಿಗೆ ಕರೆ ಮಾಡಿ ತಿಳಿಸಿದಾಗ ಅವರು ತಕ್ಷಣ ಅದಕ್ಕೆ ಸ್ಪಂದಿಸಿ ಏಇಃ ಎಇ ಅವರಿಗೆ ಕರೆಮಾಡಿ ಸಮಸ್ಯೆಯನ್ನು ತಿಳಿಸಿದಾಗ ಎಇ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಹೊಸ(ಖಿಅ) ಮತ್ತು ವಿದ್ಯುತ್ ಕಂಬಗಳನ್ನು ನೀಡುವುದರ ಮುಖಾಂತರ ಈ ಸಮಸ್ಯೆಯನ್ನು ಸರಿಪಡಿಸಿದರು.
ಇದನ್ನು ಕಂಡು ಮೈಲಾಪುರ ಗ್ರಾಮದ ಹಿರಿಯರು ಮತ್ತು ರೈತರು ಸಂತೋಷವನ್ನು ವ್ಯಕ್ತ ಪಡಿಸಿ ಜನಪ್ರಿಯ ನಾಯಕ ಸಿದ್ದಪ್ಪನವರನ್ನು ಶುಭಹಾರೈಸಿದ್ದಾರೆ. ಈಸಂಧರ್ಭದಲ್ಲಿ ಗ್ರಾಮದ ಹಿರಿಯರು,ಬಿಜೆಪಿ ಮುಖಂಡರು,ಕಾAiÀiðಕರ್ತರು ಇನ್ನಿತರರು ಉಪಸ್ಥಿತರಿದ್ದರು.

0 Comments