Ticker

6/recent/ticker-posts

Ad Code

Responsive Advertisement

ಶ್ರೀಸುಜ್ಞಾನೇಂದ್ರತೀರ್ಥರ ಆರಾಧನೆ, ಶ್ರೀರಾಘವೇಂದ್ರರ ಕೃಪಾಪಾತ್ರರಾದ ಯತಿವರೇಣ್ಯರ ಪುಣ್ಯಸ್ಮರಣೆ

ಶ್ರೀಸುಜ್ಞಾನೇಂದ್ರತೀರ್ಥರ ಆರಾಧನೆ, ಶ್ರೀರಾಘವೇಂದ್ರರ ಕೃಪಾಪಾತ್ರರಾದ ಯತಿವರೇಣ್ಯರ ಪುಣ್ಯಸ್ಮರಣೆಯಲ್ಲಿ ( ಹಿಂದೆ ಮಧ್ವಮತದ ಮಹಿತಚರಿತರು ಲೇಖನ *ಮಾಲಿಕೆಯಲ್ಲಿ ಪ್ರಕಟ)

 ಶ್ರೀಸುಜ್ಞಾನೇಂದ್ರತೀರ್ಥರು


ಶ್ರೀಸುಜನೇಂದ್ರತೀರ್ಥರ ಕರಕಮಲಸಂಜಾತರಾಗಿ ಶ್ರೀಪೂರ್ಣಪ್ರಜ್ಞರ ಪರಿಮಳಾಚಾರ್ಯರ ಪರಮಪವಿತ್ರವಾದ /ಪರಂಪರೆಯನ್ನು *ಅಲಂಕರಿಸಿದ ಪುಣ್ಯಚರಿತರು ಶ್ರೀಸುಜ್ಞಾನೇಂದ್ರತೀರ್ಥರು ಶ್ರೀಧೀರೇಂದ್ರತೀರ್ಥರ ಪೂರ್ವಾಶ್ರಮದ ಪ್ರಪೌತ್ರರಾದ *ಶ್ರೀಸುಜ್ಞಾನೇಂದ್ರತೀರ್ಥರ ಪೂರ್ವಾಶ್ರಮದ ಹೆಸರು ಶ್ರೀರಾಘವೇಂದ್ರಾಚಾರ್ಯರೆಂದು.ಚತು:ಶ್ಯಾಸ್ತ್ರಗಳಲ್ಲಿ ಅದ್ವಿತೀಯ ಪಂಡಿತರಾಗಿದ್ದ ಶ್ರೀ ಸುಜ್ಞಾನೇಂದ್ರತೀರ್ಥರು ಶ್ರೀಮಧ್ವಭಗವತ್ಪಾದರ ಸರ್ವಮೂಲಗ್ರಂಥಗಳನ್ನು ಶ್ರೀರಾಘವೇಂದ್ರತೀರ್ಥರ ಪರಿಮಳ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಚಂದ್ರಿಕಾಪ್ರಕಾಶಾದಿ ಮಾಧ್ವವಾಙ್ಮಯದ ಉದ್ಗ್ರಂಥಗಳನ್ನು ಹತ್ತೊಂಬತ್ತು ಬಾರಿ ಪಾಠ ಹೇಳಿ ಅನೇಕ ಶ್ರೇಷ್ಠವಿದ್ವಾಂಸರನ್ನು ಸಿದ್ಧಗೊಳಿಸಿ ಮಾಧ್ವಸಿದ್ಧಾಂತದ ಪ್ರಸಾರದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಪಾದರು ಮಹಾನ್ ಯೋಗಸಿದ್ಧರೂ ತಪಶ್ಯಕ್ತಿಯುಳ್ಳವರೂ ಆಗಿದ್ದರು. ಒಂದು ದಿನ ಶ್ರೀಗಳು ತಮ್ಮ ದೈನಂದಿನ ಚರ್ಯೆಯಂತೆ ಮಹಾಮಂತ್ರಗಳ ಜಪವನ್ನು ಮುಗಿಸಿ ಕಣ್ಣು ತೆರೆದಾಗ ಅವರ ದೃಷ್ಟಿ ಅಚಾನಕ್ಕಾಗಿ ಶ್ರೀಗಳ ಎದುರಿಗೆ ಕುಳಿತಿದ್ದ ಗುಬ್ಬಚ್ಚಿಯೊಂದರ ಮೇಲೆ ಬಿದ್ದು ಆ ಪಕ್ಷಿಯು ಧಗಧಗನೇ ಉರಿದು ಭಸ್ಮವಾಯಿತು.ತಾವು ನಿಷ್ಪಾಪಿಯಾದ ಜೀವಿಯೊಂದರ ಮರಣಕ್ಕೆ ಕಾರಣರಾದೆವಲ್ಲಾ ಎಂದು ನೊಂದು ಕೊಂಡ ಶ್ರೀಗಳು ಅಂದು ಭಿಕ್ಷೆಯನ್ನು ಸ್ವೀಕರಿಸಿದೇ ಅಪಾರವಾಗಿ ದು:ಖಿಸಿದರು. ರಾತ್ರಿ ಸ್ವಪ್ನದಲ್ಲಿ ಶ್ರೀಗುರುರಾಜರೇ ಕಾಣಿಸಿಕೊಂಡು 'ಯೋಗಭ್ರಷ್ಟನಾಗಿದ್ದ ಸಾತ್ವಿಕಜೀವಿಯೊಬ್ಬ ನಮ್ಮನ್ನು ಸದ್ಗತಿಗಾಗಿ ಪ್ರಾರ್ಥಿಸಿದಾಗ, ನಿನ್ನಿಂದ ಆತನಿಗೆ ಸದ್ಗತಿಯಾಗುವುದೆಂದು ನಾವೇ ತಿಳಿಸಿದ್ದೆವು, ಇನ್ನು ಮುಂದೆ ತೆರೆಯ ಮರೆಯಲ್ಲಿ ನಿನ್ನ ಜಪತಪಾನುಷ್ಠಾನಗಳನ್ನು ನಡೆಸು' ಎಂದು ಸೂಚಿಸಿದರು ಶ್ರೀಗುರುರಾಜರ ಅನುಗ್ರಹದಿಂದ ಯೋಗಸಿದ್ಧಿಯನ್ನು ಪಡೆದಿದ್ದ ಶ್ರೀಗಳ ಪ್ರಭಾವದಿಂದ ಮೈಸೂರಿನ ಮಹಾರಾಜರೂ ಶ್ರೀರಾಘವೇಂದ್ರಸ್ವಾಮಿಗಳಲ್ಲಿ ಭಕ್ತ್ಯಾತಿಶಯವನ್ನು ಉಳ್ಳವರಾಗಿ *ಶ್ರೀರಾಘವೇಂದ್ರಸ್ವಾಮ್ಯಷ್ಟೋತ್ತರಮಎಂಬ* ಕೃತಿಯನ್ನು ರಚಿಸಿ ಶ್ರೀಗಳ ದ್ವಾರ* ಶ್ರೀಗುರುರಾಜರಿಗೆ ಸಮರ್ಪಿಸಿದ್ದರ ಶ್ರೀಸುಜ್ಞಾನೇಂದ್ರತೀರ್ಥರ ಯೋಗಸಿದ್ಧಿ ಎಂತಹುದು ಎಂದರೆ ಮೈಸೂರಿನ ಮಹಾರಾಜರು ಕಳುಹಿಸಿದ್ದ ಮೈಸೂರಿನ ಡೆಪ್ಯುಟಿ ಕಮೀಶನರ್ ಆಗಿದ್ದ ಆಂಗ್ಲ ಅಧಿಕಾರಿಯೊಬ್ಬ ಶ್ರೀಗಳನ್ನು ದರ್ಶನ ಮಾಡಲು ಅಪೇಕ್ಷಿಸಿದ. ಶ್ರೀಗಳಿಗೆ ಆತನನ್ನು ಭೇಟಿಯಾಗಲು ಯಾಕೋ ಮನಸ್ಸಿರಲಿಲ್ ಹಾಗಿದ್ದಾಗ್ಯೂ ಮಠದ ಹಿರಿಯ ಅಧಿಕಾರಿಗಳ ಬಲವಂತಕ್ಕೆ ಭೇಟಿಯಾಗಲು ಒಪ್ಪಿದ್ದ ಆತ ಬಂದಾಗ ತಮ್ಮ ಪೀಠದಲ್ಲಿ ಕುಳಿತಿದ್ದ ಶ್ರೀಗಳು ಉಳಿದವರಿಗೆ ಕಾಣುತ್ತಿದ್ದರೂ, ಆಂಗ್ಲ ಅಧಿಕಾರಿಗೆ ಮಾತ್ರ ಕಾಣುತ್ತಲೇ ಇರಲಿಲ್ಲ, ಸಜ್ಜನನಾದ ಆತನೂ ಶ್ರೀಗಳ ಮಹಿಮೆಗೆ ಮಣಿದು ರಾಷ್ಟ್ರಾದ್ಯಂತ ಇದ್ದ ಶ್ರೀಮಠದ ಸಮಸ್ತ ಆಸ್ತಿಯನ್ನೂ ಶ್ರೀಮಠಕ್ಕೆ *ಶಾಶ್ವತವಾಗಿ ನಡೆದು ಬರುವಂತೆ ಆಜ್ಞೆಯನ್ನು ಹೊರಡಿಸಿದ. ತಮ್ಮ ತಪಸ್ಸಿದ್ಧಿಯ ಹಿಂದೆ *ಶ್ರೀಮೂಲರಾಮ,ಮುಖ್ಯಪ್ರಾಣ,ಗುರುರಾಜರ ಅಪಾರವಾದ ಕಾರುಣ್ಯವಿದ್ದು, ತಪಸ್ಸಿದ್ಧಿ ಲೌಕಿಕ ಕಾರ್ಯಗಳಿಗೆ ವಿನಿಯೋಗವಾಗುತ್ತಿದೆಯಲ್ಲ ಎಂಬ ನೋವಿನಿಂದ ಮಂತ್ರಾಲಯಕ್ಕೆ ತೆರಳಿ ಶ್ರೀಗುರುರಾಜರನ್ನು ಸೇವಿಸಿದರು. ಶ್ರೀರಾಘವೇಂದ್ರರ ಪರಮಮಂಗಳವಾದ ಸಾನ್ನಿಧ್ಯವುಳ್ಳ ಮಂತ್ರಾಲಯಕ್ಷೇತ್ರದಲ್ಲಿಯೇ ಬೃಂದಾವನ ಪ್ರವೇಶಮಾಡಲು ಗುರುರಾಜರ ಅಪ್ಪಣೆ ಕೇಳಿದರು.ಶ್ರೀಗುರುರಾಜರು "ನಂಜನಗೂಡಿನಲ್ಲಿಯೇ ನಿಮಗಾಗಿ ಒಂದು ರೂಪದಿಂದ ನಾವು ಪ್ರಕಟರಾಗುತ್ತೇವೆ ಅಲ್ಲಿಯೇ ನಿಮ್ಮ ಪರಲೋಕದ ಯಾತ್ರೆ, ಬೃಂದಾವನ' ಎಂದು ಸೂಚಿಸಿದರ ಶ್ರೀಸುಜ್ಞಾನೇಂದ್ರತೀರ್ಥರು ನಂಜನಗೂಡಿಗೆ ಮರಳಿದ ಮೇಲೆ ಶ್ರೀಗುರುರಾಜರು ತಾವು ನೀಡಿದ ಸೂಚನೆಗೆ ಅನುಸಾರವಾಗಿ ಮೈಸೂರಿನ ಮಹಾರಾಜರಿಗೆ,ಒಬ್ಬ ರಜಕನಿಗೆ ಹಾಗೂ ಶ್ರೀರಂಗಪಟ್ಟಣದ ವಿಪ್ರರಿಗೆ ಸ್ವಪ್ನದಲ್ಲಿ ಗೋಚರರಾಗಿ ಕಾವೇರಿದಂಡೆಯಲ್ಲಿ ಶಿಲೆಯಲ್ಲಿ ಪ್ರಕಟವಾಗಿರುವ *ತಮ್ಮನ್ನು ನಂಜನಗೂಡಿನಲ್ಲಿರುವ ಶ್ರೀಸುಜ್ಞಾನೇಂದ್ರತೀರ್ಥರಿಗೆ ತಲುಪಿಸಿ ಎಂಬುದಾಗಿ ತಿಳಿಸಿದರು. ತತ್ಸಂಬಂಧದ ವಿಚಾರವನ್ನು ಶ್ರೀಗಳಿಗೂ ಶ್ರೀಗುರುರಾಜರು ಸ್ವಪ್ನಮುಖೇನ ತಿಳಿಸಿದರು. 

ಶ್ರೀರಂಗಪಟ್ಟಣದಲ್ಲಿ ರಜಕನಿಂದ ಬ್ರಾಹ್ಮಣನಿಗೆ ನೀಡಲ್ಪಟ್ಟ ಶಿಲಾರೂಪದಲ್ಲಿರುವ ಶ್ರೀರಾಘವೇಂದ್ರರನ್ನು ಮೈಸೂರಿನಲ್ಲಿ ಮಹಾರಾಜರು ಅತ್ಯಂತ ಗೌರವಾದರಗಳಿಂದ ಪೂಜಿಸಿ ರಾಜಗೌರವದೊಂದಿಗೆ ನಂಜನಗೂಡಿಗೆ ಕಳುಹಿಸಿದ ಶ್ರೀಸುಜ್ಞಾನೇಂದ್ರರು ಶ್ರೀಗುರುರಾಜರ ಪ್ರತೀಕವನ್ನು ಭಕ್ತ್ಯಾತಿಶಯಗಳಿಂದ ಪ್ರತಿಷ್ಠಾಪಿಸಿ, ನಂತರ ಶ್ರೀಸುಧರ್ಮೇಂದ್ರತೀರ್ಥರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಕಮಾಡಿದರು. ನಂಜನಗೂಡಿನಲ್ಲಿಯೇ ಚಾತುರ್ಮಾಸ್ಯ ಸಂಕಲ್ಪವನ್ನು ಮಾಡಿದ ಶ್ರೀಸುಜ್ಞಾನೇಂದ್ರರು ಶ್ರಾವಣ ಮಾಸದ ಬಹುಳ ಪಾಡ್ಯ,ದ್ವಿತೀಯ ದಿನಗಳಲ್ಲಿ ಶ್ರೀರಾಘವೇಂದ್ರರ ಗುರುಸಾರ್ವಭೌಮರ ಪೂರ್ವ ಹಾಗೂ ಆರಾಧನೆಯನ್ನು ವಿಜೃಂಭಣೆಯಿಂದ ನೆರವೇರಿಸಿ ತೃತೀಯಾ ಉಪರೀ ಚತುರ್ಥಿದಿನದಂದು ಶ್ರೀಮೂಲರಾಮ,ಮುಖ್ಯಪ್ರಾಣ, ಗುರುರಾಜರ ಸ್ಮರಣೆ ಮಾಡುತ್ತಾ ತಮ್ಮ ಭೌತಿಕ ಕಾಯವನ್ನು ತ್ಯಜಿಸಿದರು. ಈ ರೀತಿ ಶ್ರೀಗುರುರಾಜರ ಉತ್ತರಾರಾಧನೆ ಹಾಗೂ ಶ್ರೀಸುಜ್ಞಾನೇಂದ್ರರ ಆರಾಧನೆ ಒಂದೇ ದಿನ ಸನ್ನಿಹಿತವಾಯಿತು. ನಂತರದ ದಿನಗಳಲ್ಲಿಯೂ ಚತುರ್ಥಿಯ ಕಾರಣದಿಂದಾಗಿ ಶ್ರೀಗುರುರಾಜರ ಉತ್ತರಾರಾಧನೆಯ ದಿನ ಶ್ರೀಸುಜ್ಞಾನೇಂದ್ರರ ಪೂರ್ವಾರಾಧನೆ ನಡೆಯುತ್ತಾ ಬಂದಿದೆ. ಶ್ರೀಗುರುರಾಜರು ಶಿಲೆಯಲ್ಲಿ ಪ್ರತಿಮಾರೂಪದಿಂದ ಪ್ರಕಟವಾಗಲು ತಮ್ಮ* ಭಕ್ತ್ಯಾತಿಶಯಗಳಿಂದ ಕಾರಣರಾದ ಶ್ರೀಸುಜ್ಞಾನೇಂದ್ರರು ಪಂಡಿತರೊಬ್ಬರು ಶ್ರೀವ್ಯಾಸರಾಜಗುರುಸಾರ್ವಭೌಮರ 'ಚಂದ್ರಿಕಾ'ಗ್ರಂಥವನ್ನು ಖಂಡಿಸಿ ಗ್ರಂಥವನ್ನು ರಚಿಸಿದ ಸಂದರ್ಭದಲ 'ಚಂದ್ರಿಕಾಭೂಷಣ* ಕೃತಿಯನ್ನು ರಚಿಸಿ ಶ್ರೀವ್ಯಾಸರಾಜರ ಗ್ರಂಥದ ನಿರ್ದುಷ್ಟತ್ವವನ್ನು ಎತ್ತಿಹಿಡಿದ ಮಹಾನುಭಾವರು. ತಮ್ಮ ಉಪಾಸ್ಯಮೂರ್ತಿ ಶ್ರೀರಾಮಚಂದ್ರದೇವರನ್ನು ಕುರಿತು 'ಶ್ರೀರಾಮಪಂಚಕಮ್' *ಸ್ತೋತ್ರವನ್ನೂ ಸಹಾ ರಚಿಸಿರುವ ಶ್ರೀಸುಜ್ಞಾನೇಂದ್ರರು ಶ್ರೀಗುರುರಾಜರ, ಶ್ರೀಮಧ್ವಭಗವತ್ಪಾದರ,ಶ್ರೀರಮಚಂದ್ರದೇವರಲ್ಲಿ ನಿರ್ವ್ಯಾಜ ಭಕ್ತಿಯನ್ನು ಕರುಣಿಸಲಿಸುಧಾಸಾರಾರ್ಥತತ್ತ್ವಜ್ಞಂ ಸುರದ್ರುಮಸಮಂ* ಸತಾಮ್

ಸುರಾಧಿಪಗುರುಪ್ರಖ್ಯಂ ಸುಜ್ಞಾನೇಂದ್ರ ಗುರುಂ ಭ

ಡಾ.ವೇಣುಗೋಪಾಲ ಬಿ.ಎನ್

Post a Comment

0 Comments

Ad Code

Responsive Advertisement