ಶ್ರೀ ದಿಗ್ವಿಜಯರಾಮೋವಿಜಯತೇ
ಶ್ರೀ ಆನಂದತೀರ್ಥಭಗವತ್ಪಾದಾಚಾರ್ಯ ಗುರುಭ್ಯೋ ನಮಃ
ಶ್ರೀ ಜಯತೀರ್ಥ ಗುರುಭ್ಯೋ ನಮಃ
ಶ್ರೀ ರಘುವರ್ಯತೀರ್ಥ ಗುರುಭ್ಯೋ ನಮಃ
ಶ್ರೀ ರಘುತ್ತಮತೀರ್ಥ ಗುರುಭ್ಯೋ ನಮಃ
ಮಹಾ ತಪಸ್ವಿಗಳು ಶ್ರೀ ರಘುವರ್ಯ ತೀರ್ಥರು.
ಅವರ ಸ್ತೋತ್ರದಲ್ಲಿ ಹೇಳಿದಂತೆ ಮಹಾ ಪ್ರವಾಹಿನೀ ಭೀಮಾ ಯಸ್ಯ ಮಾರ್ಗೋಮದಾನ್ಮುದಾ, ಮಹಾ ಪ್ರವಾಹದಲ್ಲಿ ಇದ್ದ ಭೀಮಾ ನದೀ, ರಘುವರ್ಯ =ಶ್ರೀರಾಮ ದೇವರನ್ನು ಸದಾ ತಮ್ಮ ತಲೆಯ ಒಳಗೆ ಇಟ್ಟುಕೊಂಡು, ಆಗ ತಲೆಯಮೇಲೆಯೂ ಹೊತ್ತುಕೊಂಡು ಬರ್ತಾ ಇದ್ದ ಶ್ರೀ ರಘುವರ್ಯ ತೀರ್ಥರಿಗೆ ಮಾರ್ಗ ಬಿಟ್ಟಿತು ಅಂತ. ಇಂಥಾ ಮಹಾನುಭಾವರು ಶ್ರೀ ರಘುವರ್ಯ ತೀರ್ಥರು. ಸಂಸಾರ ಸಾಗರವನ್ನೇ ದಾಟಿಸುವ ತೀರ್ಥ -ಶಾಸ್ತ್ರದ ಮಹಿಮೆ ಏನು ಅನ್ನೋದರ ನಿದರ್ಶನ ಈ ಘಟನೆ..
ಶ್ರೀಮದಾಚಾರ್ಯರ ಇಂಥಾ ಶಾಸ್ತ್ರಗಳನ್ನು ಎಲ್ಲಾ ಕಡೆ ದಿಗ್ವಿಜಯ ಮಾಡಲಿಕ್ಕೆ ಈ ಜಗತ್ತಿಗೆ ಶ್ರೀ ರಘೂತ್ತಮ ತೀರ್ಥರಂಥ ಮಹಾನುಭಾವರನ್ನು ನೀಡಿದ ಕೀರ್ತಿ -ಶ್ರೇಯಸ್ಸು ಶ್ರೀ ರಘುವರ್ಯ ತೀರ್ಥರದ್ದು. ಕೇವಲ ತಮ್ಮ ಅನುಗ್ರಹ -ಸ್ವಪ್ನದಲ್ಲಿ ಬಂದು ನಾಲಿಗೆಯ ಮೇಲೆ ಬೀಜಾಕ್ಷರ ಬರೆದಿದ್ದರ ಫಲವಾಗಿ ಪುಟ್ಟ ಬಾಲಕರಿದ್ದಾಗಲೇ ಶ್ರೀ
ರಘೂತ್ತಮ ತೀರ್ಥರು ಯಾವ ವಿಶೇಷ ಅಧ್ಯಯನ ಇಲ್ಲದೇ ಶ್ರೀಮನ್ಯಾಯಸುಧಾದಂಥ ಉದ್ಗ್ರಂಥದ ಪಾಠ ಹೇಳುವವರಾದರು ಅಂದ್ರೆ ಶ್ರೀ ರಘುವರ್ಯ ತೀರ್ಥರ ಮಹಿಮೆ, ಗುರು ಪ್ರಸಾದದ ಮಹಿಮೆ ಏನು ಅನ್ನೋದು ಗೊತ್ತಾಗ್ತದೆ.
Once on his tour, he visited a village called Manipura near Bhimarathi River, which was under the control of a mlecha ruler. The king's army started attacking the swAmIji and his group. He ran with the rAma dEvara pUjA box on his shoulders and reached the banks of the river. All of a sudden, Bhimarathi river gave way to the SwAmIji to reach the other side of the river. Swamiji crossed the river along with his disciples safely, to the surprise of one and all.
ಮಹಾಪ್ರವಾಹಿನೀ ಭೀಮಾ ಯಸ್ಯ ಮಾರ್ಗಮದಾನ್ಮುದಾ |
ರಘುವರ್ಯೋ ಮುದಂ ದದ್ಯಾತ್ಕಾಮಿತಾರ್ಥಪ್ರದಾಯಕಃ ||
महाप्रवाहिनी भीमा यस्य मार्गमदान्मुदा ।
रघुवर्यो मुदं दद्यात्कामितार्थप्रदायकः ॥

0 Comments