Ticker

6/recent/ticker-posts

Ad Code

Responsive Advertisement

ಬುಡಾ ಅಧ್ಯಕ್ಷ ಸ್ಥಾನದ ಅಧಿಕಾರ ಸ್ವೀಕರಿಸಿದ ಸಾಯಿವರ್ಮ ಪಾಲನ್ನ

ಬಳ್ಳಾರಿ ಆ . ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಪಿ.ಪಾಲನ್ನ ಅವರು ವರಮಹಾಲಕ್ಷಿö್ಮ ಹಬ್ಬದ ದಿನದಂದು ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಸಾಕಷ್ಟು ಹೈ ಡ್ರಾಮ ಮಧ್ಯೆ ವರಮಹಾಲಕ್ಷ್ಮಿ ಹಬ್ಬದ ದಿನದಂದು ಅಧಿಕಾರ ಸ್ವಿಕರಿಸಿದ್ದು, ನೂತನ ಅಧ್ಯಕ್ಷ ಪಾಲನ್ನ ಅವರ ಅಭಿಮಾನಿಗಳು, ಬೆಂಬಲಿಗರು ಸಿಹಿ ಹಂಚಿ,ಪಟಾಕಿಗಳು ಸಿಡಿಸಿ ಸಂಭ್ರಮ ಆಚರಿಸಿದರು.

ಬುಧವಾರವೇ ಆದೇಶ ಹೊರಬಿದ್ದಿದ್ದರೂ, ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದ ಜನಾರ್ಶಿವಾದ ಯಾತ್ರೆ ಸೇರಿದಂತೆ ರಾಜಕೀಯ ನಾನಾ ಬೆಳವಣಿಗೆಗಳಿಂದ ಗುರುವಾರ ಅಧಿಕಾರ ಸ್ವೀಕರಿಸಲಿಕ್ಕೆ ಸರಕಾರ ಬ್ರೇಕ್ ಹಾಕಿತ್ತು. ಶುಕ್ರವಾರ ಬೆಳಿಗ್ಗೆ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರ ಉಪಸ್ಥಿಯಲ್ಲಿ ನಡೆದ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಸಾಯಿವರ್ಮ ಎಂಟರ್‌ಪ್ರೆöÊಸಸ್ ಪಿ.ಪಾಲನ್ನ ಅವರು ಬೂಡಾ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಶಾಸಕರು ಸೇರಿದಂತೆ ಅನೇಕ ಗಣ್ಯರು ನೂತನ ಅಧ್ಯಕ್ಷರಿಗೆ ಶುಭಾಷಯಗಳನ್ನು ತಿಳಿಸಿದರು. ತಂಡೂಪ ತಂಡವಾಗಿ ಅವರ ಬೆಂಬಲಿಗರು ಕಚೇರಿಗೆ ಆಗಮಿಸಿ ಹೂಗುಚ್ಛ ನೀಡಿ, ಸಿಹಿ ಹಂಚಿ ಸಂಭ್ರಮಿಸಿದರು. ಅಧ್ಯಕ್ಷ ಪಿ.ಪಾಲನ್ನ ಅವರು ಮಾತನಾಡಿ, ವರಮಹಾಲಕ್ಷ್ಮಿ ಹಬ್ಬದ ದಿನದಂದು ಬೂಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು, ಸಂತಸ ಮೂಡಿಸಿದೆ. 

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಭಾಜಪ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಸೇರಿದಂತೆ ಪಕ್ಷದ ಎಲ್ಲ ಗಣ್ಯರ ಸಹಕಾರದಿಂದ ಅಧಿಕಾರ ಸ್ವೀಕರಿಸಿರುವೆ. ಎಲ್ಲರ ನಿರೀಕ್ಷೆಯಂತೆ ಅವಧಿಯಲ್ಲಿ ಮಾದರಿ ರೀತಿಯಲ್ಲಿ ಕೆಲಸ ನಿರ್ವಹಿಸುವೆ, ನಾನು ಎಲ್ಲರಂತೆ ಬಣ್ಣದ ಮಾತುಗಳನ್ನು ಆಡೋಲ್ಲ, ನನ್ನ ಅಭಿವೃದ್ಧಿ ಕೆಲಸಗಳೇ ಮಾತಾಡಲಿವೆ ಎಂದರು. 

ಬಳ್ಳಾರಿ ನಗರವನ್ನು ಅವಧಿಯಲ್ಲಿ ರಾಜ್ಯದಲ್ಲೇ ಮಾದರಿನಗರವನ್ನಾಗಿ ಮಾಡುವೆ, ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರ ಮಾರ್ಗದರ್ಶನ, ಮುಂದಾಳತ್ವದಲ್ಲಿ ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವೆ. ನಾಗರಿಕರಿಗೆ ಶುದ್ಧ ಕುಡಿವ ನೀರಿನ ಸೌಲಭ್ಯ, ಸ್ವಚ್ಛತೆ, ಚರಂಡಿ ವ್ಯವಸ್ಥೆ, ರಸ್ತೆ, ಉದ್ಯಾನವನಗಳ ಅಭಿವೃದ್ಧಿಗೆ ಆದ್ಯತೆ ನೀಡುವೆ, ನಾಗರಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅವ್ವಾರು ಮಂಜುನಾಥ್, ಎಪಿಎಂಸಿ ಸದಸ್ಯರು, ಎಪಿಎಂಸಿ ಅಧ್ಯಕ್ಷ ಉಮೇಶ್, ಭಾಜಪಾ ಹಿರೀಯ ಮುಖಂಡ ತಿಮ್ಮಪ್ಪ, ಯಶವಂತರಾಜ್, ಕಾಂಡ್ರಾ ಬಾಬು, ವೀರಶೇಖರ್ ರೆಡ್ಡಿ, ಶ್ರೀನಿವಾಸ್ ಮೋತ್ಕರ್, ಚೇಂಬರ್ ಆಫ್ ಕಾಮರ್ಸ್ ಅದ್ಯಕ್ಷ ರವಿಕುಮಾರ್, ಮುಖಂಡರಾದ ಡಾ.ರಮೇಶ್ ಗೋಪಾಲ್, ನಾಗೇಶ್, ಬೂಡಾ ಎಂಜಿನೀಯರ್ ರವಿ ಶಂಕರ್, ಆಯುಕ್ತರಾದ ವೀರೇಂದ್ರ ಕುಂದಗೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು.


Post a Comment

0 Comments

Ad Code

Responsive Advertisement