Ticker

6/recent/ticker-posts

Ad Code

Responsive Advertisement

ಹಿಂದೂ ದೇವರುಗಳಿಗೆ ಅಪಮಾನ; ಸಚಿವ ಮುರುಗೇಶ ನಿರಾಣಿ ವಿರುದ್ಧ ಎಫ್ಐಆರ್!

 ಹಿಂದೂ ದೇವತೆಗಳ ವಿರುದ್ಧ ಅಕ್ಷೇಪಾರ್ಹ ಸಂದೇಶವನ್ನು ಕಳಿಸಿದ ಆರೋಪ ಸಂಬಂಧ ಸಚಿವ ಮುರುಗೇಶ್ ನಿರಾಣಿ ವಿರುದ್ಧ ತನಿಖೆಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.ಹಿಂದೂ ದೇವತೆಗಳ ಬಗ್ಗೆ ಅಕ್ಷೇಪಾರ್ಹ ಬರಹವನ್ನು ವಾಟ್ಸಪ್ ಮೂಲಕ ಸಂದೇಶ ಕಳುಹಿಸಿದ್ದರು. ಇದು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡಿತ್ತು. ಸಚಿವ ಮುರುಗೇಶ್ ನಿರಾಣಿ ವಿರುದ್ಧ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಸಂಬಂಧ ತನಿಖೆ ನಡೆಸಿ ಸೆ. 23 ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ. ಹಿಂದೂ ದೇವತೆಗಳ ಬಗ್ಗೆ ಅವಹೇಳನ ಸಂದೇಶ ರವಾನಿಸಿದ ಮುರುಗೇಶ್ ನಿರಾಣಿ ವಿರುದ್ಧ ಐಪಿಸಿ ಸೆ.153A, 295, 295-A. ಅಡಿ ಕ್ರಮ ಕೋರಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಿರಾಣಿ ವಿರುದ್ಧ ಎಫ್ಐಆರ್ ದಾಖಲಿಸಿ ಕೊಡುಗೇಹಳ್ಳಿ ಪೊಲೀಸರು ತನಿಖೆ ನಡೆಸಲಿದ್ದಾರೆ.

Post a Comment

0 Comments

Ad Code

Responsive Advertisement