Ticker

6/recent/ticker-posts

Ad Code

Responsive Advertisement

BJP ಅತ್ಯಾಚಾರಿಗಳ ಪರವೋ ಅಥವಾ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಪರವೋ.?

ಅತ್ಯಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಎಂದಿರುವ ಗೃಹ ಸಚಿವರೆ, 

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಪರ ನ್ಯಾಯಕ್ಕಾಗಿ ಹೋರಾಡುವುದು ನಿಮಗೆ ರಾಜಕೀಯದಂತೆ ಕಾಣುತ್ತಿದೆಯೆ? ಹಾಗಾದರೆ ನಿಮ್ಮ ಪಕ್ಷ ಅತ್ಯಾಚಾರಿಗಳ ಪರವೋ ಅಥವಾ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಪರವೋ.?

ಕಾಂಗ್ರೆಸ್‌ಗೆ ರಾಜಕೀಯದ ಪಾಠ ಮಾಡುವ ಅರಗ ಜ್ಞಾನೇಂದ್ರರವರು,ಇವರದ್ದೇ ಕ್ಷೇತ್ರ ತೀರ್ಥಹಳ್ಳಿಯಲ್ಲಿ 2015 ರಲ್ಲಿ ನಡೆದ ನಂದಿತಾ ಸಾವಿನ ಪ್ರಕರಣದಲ್ಲಿ ಪೊಲೀಸರಿಂದ ಜಾರ್ಜ್‌ಶೀಟ್ ಹಾಕಿಸಿಕೊಂಡಿದ್ಯಾಕೆ.? ಅಂದು ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಗಲಭೆ ಎಬ್ಬಿಸಿದ್ದು ಸತ್ಯವಲ್ಲವೆ.? ಸಾವಿನಲ್ಲಿ,ಅತ್ಯಾಚಾರದ ವಿಷಯದಲ್ಲಿ ರಾಜಕೀಯ ಮಾಡುವುದರಲ್ಲಿ BJPಯವರನ್ನು ಮೀರಿಸುವರುಂಟೆ.?

ಮೈಸೂರಲ್ಲಿ ನಡೆದ ಗ್ಯಾಂಗ್ ರೇಪ್ ಇಡೀ ಸಮಾಜ ನಾಚುವ ವಿಷಯ. ಗಾಂಧಿ ಕಂಡ ನಡುರಾತ್ರಿ ಹೆಣ್ಣು ಧೈರ್ಯದಿಂದ ತಿರುಗುವ ದಿನ, ಬಾಬಾಸಾಹೇಬರ ಸಮಾನತೆಯ ಕನಸು, ಬಸವಣ್ಣನ ಲಿಂಗಭೇದ ಇಲ್ಲದ ನಾಡೊಂದನ್ನು ಕಟ್ಟಬೇಕಿದ್ದ ನಾವುಗಳು ಎತ್ತ ಸಾಗುತ್ತಿದ್ದೇವೆ? ಸರ್ಕಾರಗಳು, ವ್ಯವಸ್ಥೆಗಳು ಹೆಣ್ಣಿನ ಮೇಲಾಗುವ ಅತ್ಯಾಚಾರ ತಡೆಯಲು ವಿಫಲವಾಗಿದೆ, ಆದ ಅತ್ಯಾಚಾರಕ್ಕೆ ನ್ಯಾಯ ಕೊಡಿ ಎಂದರೆ ಜವಬ್ದಾರಿ ಸ್ಥಾನದಲ್ಲಿರುವ ನಮ್ಮ ಗೃಹಮಂತ್ರಿ ಅರಗ ಜ್ಞಾನೇಂದ್ರ ಅತ್ಯಾಚಾರ ಆಗುವ ಜಾಗಕ್ಕೆ ಹೋಗಿದ್ದು ಇವಳದ್ದೇ ತಪ್ಪು ಎನ್ನುತ್ತಾರೆ. 

ಅತ್ಯಾಚಾರ ನಿಮಗೆ ಇಷ್ಟು ಹಗುರಾಯಿತೆ? ನಿಮ್ಮ ವ್ಯವಸ್ಥೆಯ ವೈಫಲ್ಯವನ್ನು ನಮ್ಮ ಮೇಲೆ ಹಾಕಿ ಕೂರುವಷ್ಟು ದುರ್ಬಲವಾಯಿತೆ ನಿಮ್ಮ ಸರ್ಕಾರ? ಇಷ್ಟು ಸಾಲದು ಎಂಬಂತೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳು ಇನ್ನೊಂದು ಆದೇಶ ಹೊರಡಿಸಿಬಿಟ್ಚರು. 6.30 ರ ನಂತರ ಹೆಣ್ಣು ಮಕ್ಕಳು ಹೊರಗಡೆ ಹೋಗಲೇಬಾರದಂತೆ?!! ನಾವೆಂತ ಕಾಲದಲ್ಲಿದ್ದೇವೆ, ನಾವು ಯಾವ ಸ್ವಾತಂತ್ರ್ಯ ಸಮಾನತೆಗೆ ಹೋಗುತ್ತಿದ್ದೇವೆ. ಅಷ್ಟಿದ್ದರೆ ಗಂಡಿಗೆ ನಿರ್ಬಂಧ ಹೇರಬಹುದಲ್ಲಾ? ಹಾಗೂ ಅತ್ಯಾಚಾರ ನಿಲ್ಲಿಸಬಹುದಲ್ಲ! ಬಹುಷಃ ಹೆಣ್ಣಿನ ಶಿಕ್ಷಣವನ್ನೇ ನಿರ್ಬಂಧ ಮಾಡಬಹುದು ಇಂತಹ ಬೇಜವಾಬ್ದಾರಿ ವ್ಯಕ್ತಿಗಳು. ಅಷ್ಟಕ್ಕೂ ಹೆಣ್ಣಿನ ಸ್ವಾತಂತ್ರ್ಯ, ಬಟ್ಟೆ, ಸಮಾನತೆಗಳು ನಿಮಗೆ ಅಷ್ಟು ನಡುಕ ಹುಟ್ಟಿಸಿತ್ತವೆಯೇ ಅಥವಾ ಅತ್ಯಾಚಾರ ಮಾಡುವುದು ಗಂಡಸರ ಹಕ್ಕು ಎಂದು ಬಾವಿಸಿದ್ದೀರಾ?  ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಹುಟ್ಟಿದ ನೆಲವಿದು, ನಮ್ಮ ಹೋರಾಟ ನಿಲ್ಲುವುದಿಲ್ಲ..

ಶ್ರೀಮತಿ ಸಲ್ಮಾ ತಾಜ್   ಅಧ್ಯಕ್ಷರು,

ಬೆಂಗಳೂರು ಕೇಂದ್ರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ

Post a Comment

0 Comments

Ad Code

Responsive Advertisement