ಸಿರುಗುಪ್ಪ: ತಾಲ್ಲೂಕಿನ ಹೆದ್ದಾರಿ ರಸ್ತೆ 150- ಎ ನಲ್ಲಿ ಹಳೇಕೋಟೆ ಗ್ರಾಮದ ಬಳಿಯ ಬಳ್ಳಾರಿಯ ಕಡೆ ಸಾಗುತ್ತಿದ್ದ ಕಾರು ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ .ಈ ಸಂದರ್ಭದಲ್ಲಿ ಮರದ ಬಳಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಕುರುಬರ ಶಾಂತಮ್ಮ 42 ವರ್ಷದ ಮಹಿಳೆ ಸ್ಥಳದಲ್ಲೇ ಮರಣ ಹೊಂದಿದ್ದಾಳೆ
ಕಾರಿನ ಚಾಲಕ ಗಾದಿಲಿಂಗ ಹಾಗೂ ವಾಹನದಲ್ಲಿದ್ದ ಇತರರು ಮತ್ತು ತರಕಾರಿ ಖರೀದಿಗೆಂದು ಆಗಮಿಸಿದ್ದವರಿಗೆ ಸಹ ಗಾಯಗಳಾಗಿದ್ದು ಸಿರಗುಪ್ಪ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ
ತೀವ್ರ ಗಾಯಗೊಂಡಿದ್ದ ಗಾದಿಲಿಂಗ ಹಾಗೂ ಇನ್ನಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಗೆ ಕಳಿಸಿಕೊಡಲಾಗಿದೆ
ಘಟನೆಯು ತಾಲ್ಲೂಕಿನ ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು ಸಿಪಿಐ ಕಾಳಿಕೃಷ್ಣ ಪಿಎಸ್ ಐ ಶಿವಕುಮಾರ ನಾಯ್ಕ ಹಾಗೂ ಪೊಲೀಸ್ ಅಧಿಕಾರಿಗಳು ಮುಂದಿನ ಕ್ರಮಗಳನ್ನು ಜರುಗಿಸುತ್ತಿದ್ದಾರೆ


0 Comments