"ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ! ಒಂದೇ ಪರೀಕ್ಷೆ ನಡೆಸಿ!
ಎರಡು ಡೋಸ್ ಉಚಿತ ವ್ಯಾಕ್ಸಿನೇಷನ್ ಇಲ್ಲದಿದ್ದರೆ ಪರೀಕ್ಷೆಯೂ ಬೇಡ!!"
ಬಳ್ಳಾರಿ ಜುಲೈ 08.ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಹೇರಬೇಡಿ! ಒಂದೇ ಪರೀಕ್ಷೆ ನಡೆಸಿ! ಎರಡು ಡೋಸ್ ಉಚಿತ ವ್ಯಾಕ್ಸಿನೇಷನ್ ಇಲ್ಲದಿದ್ದರೆ ಪರೀಕ್ಷೆಯೂ ಬೇಡ!!" ಎಂಬ ಬೇಡಿಕೆಗಳೊಂದಿಗೆ ರಾಜ್ಯದ ವಿದ್ಯಾರ್ಥಿಗಳು ಹೋರಾಟದಲ್ಲಿ ನಿರತರಾಗಿದ್ದು ಸಹಿ ಸಂಗ್ರಹದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಸಹಿಗಳೊಂದಿಗೆ ಮನವಿ ಪತ್ರ ವನ್ನು ಇಂದು AIDSO ವಿದ್ಯಾರ್ಥಿ ಸಂಘಟನೆಯ ನಿಯೋಗವು ಕರ್ನಾಟಕದ ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ನಮ್ಮ ಮನವಿಯನ್ನು ಸಲ್ಲಿಸಲಾಯಿತು.ಮಾನ್ಯ ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಸ್ವೀಕರಿಸಿದರು ಹಾಗೂ ನಮ್ಮ ಸಮಸ್ಯೆಗಳ ಕುರಿತು ಆಲಿಸಿದರು. ಸಂಬ0ಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.ವಿದ್ಯಾರ್ಥಿಗಳು ಸರ್ಕಾರದಿಂದ ಅಧಿಕೃತ ತೀರ್ಮಾನ ಬರುವವರೆಗು ಹೋರಾಟವನ್ನು ಕೈಬಿಡದೇ ನಮ್ಮ ಎಚ್ಚರದಲ್ಲಿ ನಾವು ಇರಬೇಕು ಎಂದು AIDSO ಕರೆ ನೀಡಿದೆ.

0 Comments