ದಿನಾಂಕ 10.07.2021 ರಂದು ರಾಜಾಜಿನಗರ ಪೊಲೀಸ್ ಠಾಣಾ ಸಬ್-ಇನ್ಸಪೆಕ್ಟರ್ ಶ್ರೀ ಪ್ರದೀಪಕುಮಾರ್.ಸಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರುಗಳು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಠಾಣಾ ಸರಹದ್ದಿನ ಪ್ರಕಾಶನಗರ, 3ನೇ ಮುಖ್ಯರಸ್ತೆ ಹತ್ತಿರ (ಅಯ್ಯಪ್ಪಸ್ವಾಮಿ ದೇವಸ್ಥಾನÀ) ಗಸ್ತಿನಲ್ಲಿರುವಾಗ ಇಬ್ಬರು ಆಸಾಮಿಗಳು ಒಂದು ಬಜಾಜ್ ಪಲ್ಸರ್ ಗಾಡಿಯಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿರುವುದು ಕಂಡು ಬಂದು ತಕ್ಷಣ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಲಾಗಿ ಆರೋಪಿಗಳ ಬಳಿ ಒಂದು ಡ್ರಾö್ಯಗರ್ ಪತ್ತೆಯಾಗಿರುತ್ತದೆ.
ಆರೋಪಿಗಳು ಬರುತ್ತಿದ್ದ ವಾಹನವು ಕಳವು ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಸದರಿಯವರುಗಳನ್ನು ದ್ವಿಚಕ್ರವಾಹನದ ಸಮೇತ ಠಾಣೆಗೆ ಕರೆ ತಂದು ಹೆಚ್ಚಿನ ವಿಚಾರಣೆ ಮಾಡಲಾಗಿ, ಈ ಪ್ರಕರಣದ ಆರೋಪಿಗಳಾದ ಆಂತೋನಿ ಡಿಸಿಲ್ವಾ, ಸುಬ್ರಮಣ್ಯ ಎಂಬುವರನ್ನು ದಸ್ತಗಿರಿ ಮಾಡಿ, ಆರೋಪಿಗಳು ನೀಡಿದ ಮಾಹಿತಿ ಮೇರೆಗೆ 4.15 ಲಕ್ಷ ರೂ. ಬೆಲೆಯ 7 ದ್ವಿಚಕ್ರವಾಹನ 1-ಡ್ರಾö್ಯಗರ್ ವಶಪಡಿಸಿಕೊಳ್ಳುವಲ್ಲಿ ರಾಜಾಜಿನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಯ ಬಂಧನದಿAದ ಬಸವೇಶ್ವರನಗರ-1, ಯಲಹಂಕ ನ್ಯೂಟೌನ್-1, ಒಟ್ಟು 2-ದ್ವಿಚಕ್ರವಾಹನ ಪತ್ತೆಗಳು ಪತ್ತೆಯಾಗಿದ್ದು, ಉಳಿದ 5 ದ್ವಿಚಕ್ರವಾಹನಗಳ ವಾರಸುದಾರರನ್ನು ಪತ್ತೆ ಮಾಡಬೇಕಾಗಿರುತ್ತದೆ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಪ್ರಕರಣದಲ್ಲಿ ಕೆ.ಎಸ್. ವೆಂಕಟೇಶ್ ನಾಯ್ಡು, ಎಸಿಪಿ, ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಆರ್.ಪಿ. ಅಶೋಕ್ ಪೊಲೀಸ್ ಇನ್ಸ್ಪೆಕ್ಟರ್, ರಾಜಾಜಿನಗರ ಕು: ರೋಹಿಣಿ ರೆಡ್ಡಿ, ಪಿಎಸ್‌ಐ, ರಾಘವೇಂದ್ರ, ಪಿಎಸ್‌ಐ ಮತ್ತು ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಪರಮೇಶ್, ಜೈಶಂಕರ್, ಸಿದ್ದರಾಮಪ್ಪ, ಸಾಯಿಲು, ಶಿವಸ್ವಾಮಿ, ವೀರಭದ್ರ, ಉಮೇಶ್, ಶ್ರೀ ಶ್ರೀಕಾಂತ್ ಕುರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

0 Comments