ಕುರುಬ, ಈಡಿಗ, ಕೋಲಿ, ಮಾಳಿ, ಸವಿತಾ ಸಮಾಜದ ನಾಯಕರು ಸುದ್ದಿಗೋಷ್ಠಿ ಮಾಡಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಈಶ್ವರಪ್ಪನವರಿಗೆ ಸಿಎಂ ಸ್ಥಾನ ಕೊಡಬೇಕು ಎಂದು ಕುರುಬ ಸಮುದಾಯದ ಮುಖಂಡ ಮುಕುಡಪ್ಪ ಒತ್ತಾಯ ಮಾಡಿದ್ದಾರೆ. ಬರೀ ಎರಡೇ ಕಮ್ಯುನಿಟಿಗೆ ಯಾಕೆ ಸಿಎಂ ಸ್ಥಾನ ಕೊಡ್ಬೇಕು. ಲಿಂಗಾಯತ, ಒಕ್ಕಲಿಗರಿಗೆ ಮಾತ್ರ ಯಾಕೆ. ಕುರುಬರು ಹಿಂದುಳಿದ ಸಮುದಾಯದವರು. ಅದಕ್ಕೆ ಕುರುಬ ಸಮುದಾಯದ ಈಶ್ವರಪ್ಪಗೆ ಸಿಎಂ ಸ್ಥಾನ ನೀಡಿ ಎಂದು ಕೇಳಿದ್ದಾರೆ.
ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಬೇಕು. ಬದಲಾವಣೆ ಮಾಡಿದರೆ ಈಶ್ವರಪ್ಪಗೆ ಅವಕಾಶ ಕೊಡಿ. ಒಕ್ಕಲಿಗ ಸಮುದಾಯದಿಂದ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾರೆ. ಶೆಟ್ಟರ್ ಕೂಡ ಸಿಎಂ ಆಗಿದ್ದಾರೆ. ಇದೀಗ ಯಡಿಯೂರಪ್ಪನವರಷ್ಟೇ ಈಶ್ವರಪ್ಪ ಕೂಡ ಹಿರಿಯರು ಎಂದು ಬೆಂಗಳೂರಿನಲ್ಲಿ ಒಬಿಸಿ ನಾಯಕರು ಒತ್ತಾಯ ಮಾಡಿದ್ದಾರೆ.
20 ವರ್ಷ ಲಿಂಗಾಯತರು ಸಿಎಂ ಆಗಿದ್ದಾರೆ. 18 ವರ್ಷ ಒಕ್ಕಲಿಗರು ಸಿಎಂ ಆಗಿದ್ದಾರೆ. ಕುರುಬರು ೫ ವರ್ಷ ಮಾತ್ರ ಆಗಿರೋದು. ಅದಕ್ಕೆ ಈಶ್ವರಪ್ಪನವರಿಗೆ ಸಿಎಂ ಸ್ಥಾನ ಕೊಡಿ ಎಂದು ಮುಕುಡಪ್ಪ ಆಗ್ರಹಿಸಿದ್ದಾರೆ.
ಇನ್ನು ಕೋಲಿ ಸಮಾಜದ ಮುಖಂಡ ತಿಪ್ಪಣ್ಣ ರೆಡ್ಡಿ ಮಾತನಾಡಿದ್ದು, ರಾಷ್ಟ್ರಪತಿಗಳು ದಲಿತರು. ರಾಜ್ಯದ ರಾಜ್ಯಪಾಲರು ದಲಿತರು. 41 ಜನರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಕೊಟ್ಟಿದ್ದಾರೆ. ಎಸ್ಸಿ, ಎಸ್ಟಿ, ಒಬಿಸಿಯವರು ಆಗಿದ್ದಾರೆ. ಇಲ್ಲೂ ಒಬಿಸಿಯ ಈಶ್ವರಪ್ಪನವರಿಗೆ ಅವಕಾಶ ಕೊಡಲಿ ಎಂದು ತಿಪ್ಪಣ್ಣ ಕೋಲಿ ಒತ್ತಾಯ ಮಾಡಿದ್ದಾರೆ.

0 Comments