ಕರ್ಮದಗುಹ್ಯಗತಿ
ದೈನಂದಿನ ಜೀವನದಲ್ಲಿ ನಾವು ‘ಕರ್ಮ’ವೆಂಬ ಶಬ್ದವನ್ನುಅತಿ ಹೆಚ್ಚಾಗಿ ಬಳಸುತ್ತೇವೆ. ಚಿಂತಕರು, ಆಧ್ಯಾತ್ಮಸಾಧಕರು, ವಿದ್ವಾಂಸರುಈ ಪದವನ್ನುಉನ್ನತ ಮಟ್ಟ್ಡದ ಚಿಂತನೆಗಾಗಿ ಬಳಸುತ್ತಾರೆ.
“ಕರ್ಮಣ್ಯೇ ವಾಧಿಕಾರಸ್ತೇ|
ಮಾ ಫಲೇಷುಕದಾಚನ||
ಮಾಕರ್ಮಫ¯ ಹೇತುರ್ಭೂ|
ಮಾತೇ ಸಂಗೋಸ್ತ÷್ವಕರ್ಮಣಿೆ” || (ಅ-2;ಶ್ಲೋ-47)
ನೀನು ನಿನ್ನಕರ್ಮವನ್ನು ತಿಳಿದು ಅದನ್ನು ಮಾಡುವುದರಲ್ಲಿ ಮನಸ್ಸಿಡಬೇಕು. ಫಲದಚಿಂತೆ ಮಾಡದೇಕರ್ಮ ಮಾಡುವುದರಲ್ಲಿ ಶ್ರದ್ಧೆಯನ್ನು ಇಟ್ಟುಕೊಳ್ಳಬೇಕು. ನಿನ್ನಕರ್ಮವನ್ನು ಮಾಡದೇಇರುವ ವಿಚಾರ ನಿನಗೆ ಬಾರದೇಇರಲಿಎಂದುಗೀತೆಯಲ್ಲಿ ಹೇಳಲಾಗಿದೆ.
ಕರ್ಮಎಂದರೆ ಏನು?
ಕರ್ಮ’ಅಥವಾಕ್ರಿಯೆಎಂದರೆಆತ್ಮವುದೇಹದ ಮೂಲಕ ಮಾಡುವ ಭೌತಿಕ ಹಾಗೂ ಮಾನಸಿಕ ಪ್ರಕ್ರಿಯೆ.ವಿಚಾರ ಮಾಡುವುದು, ಮಾತನಾಡುವುದು, ಕೇಳುವುದು, ನೋಡುವುದು, ಸ್ಪರ್ಶಿಸುವುದು, ಬೋಧಿಸುವುದು, ಆಹಾರ ಸೇವಿಸುವುದು ಮುಂತಾದವುಗಳೆಲ್ಲ ಕರ್ಮಗಳೇ ಆಗಿವೆ. ಪ್ರತಿಯೊಬ್ಬರೂ ಹಗಲು ರಾತ್ರಿ ಅನೇಕ ಕೆಲಸಗಳನ್ನು ಮಾಡುತ್ತಾರೆ. ಕೆಲವು ಸಹಜ ಕ್ರಿಯೆಗಳು ನಮ್ಮದೇಹದಲ್ಲಿ ನಡೆಯುತ್ತವೆ. ಉದಾಹರಣೆಗೆ ಉಸಿರಾಟ, ಜೀರ್ಣಕ್ರಿಯೆ, ರಕ್ತ-ಶುದ್ಧೀಕರಣಮುಂತಾದವು.ಇನ್ನೂ ಕೆಲವು ಕರ್ಮಗಳನ್ನು ನಾವು ಮಾಡಬೇಕಾಗುತ್ತದೆ. ಉದಾ: ನಡೆಯುವುದು, ಊಟ ಮಾಡುವುದು, ನಿದ್ದೆ ಮಾಡುವುದು ಹಾಗೂ ಇತರೆ ಅನೇಕ ದೈನಂದಿನ ಚಟುವಟಿಕೆಗಳು ಇದರಲ್ಲಿಸೇರಿವೆ.
ಮೂರುರೀತಿಯ ಕರ್ಮಗಳಿವೆ – 1.ಅಕರ್ಮ2. ಸುಕರ್ಮ ಮತ್ತು 3. ವಿಕರ್ಮ. ಯಾವುದೇಕರ್ಮ ಮಾಡಿದಾಗಅದರ ಫಲ ಇಲ್ಲದಿದ್ದರೆಅದಕ್ಕೆಅಕರ್ಮಎಂದುಕರೆಯುತ್ತಾರೆ.ಒಳ್ಳೆಯ ಫಲ ಕೊಡುವಕರ್ಮಕ್ಕೆ ಸುಕರ್ಮವೆಂದು ಮತ್ತು ಪಾಪದಖಾತೆಗೆ ಹೋಗುವ ಕರ್ಮಗಳಿಗೆ ವಿಕರ್ಮವೆಂದುಕರೆಯಲಾಗುತ್ತದೆ.
ಬೀಜದAತೆ ಫಲ, ಮಾಡಿದ್ದುಣ್ಣೋ ಮಹಾರಾಯ ಎಂಬ ಗಾದೆ ಮಾತುಗಳನ್ನು ಕರ್ಮಫಲದ ಬಗ್ಗೆ ಮಾತನಾಡುವಾಗ ಬಳಸುತ್ತಾರೆ. ಒಳ್ಳೆಯ ಕರ್ಮಕ್ಕೆ ಒಳ್ಳೆಯಫಲವಿದ್ದರೆ, ಕೆಟ್ಟ ಕರ್ಮಗಳಿಗೆ ಕೆಟ್ಟ ಫಲಸಿಗುತ್ತದೆ.ಭೌತಿಕ ವಿಶ್ವದಕುರಿತಂತೆನ್ಯೂಟನ್‌ನ ಚಲನೆಯ ನಿಯಮವು‘ಪ್ರತಿಯೊಂದುಕ್ರಿಯೆಗೆ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆಇರುತ್ತದೆÉ’ಎಂದು ಹೇಳುತ್ತದೆ.ಹಾಗೆಯೇಆಧ್ಯಾತ್ಮಿಕಜಗತ್ತಿಗೆಅನ್ವಯಿಸುವಕರ್ಮದ ನಿಯಮವೂ ಸಹ ಪ್ರತಿಯೊಂದುಕ್ರಿಯೆಗೂಒAದು ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆಇದ್ದೇಇರುತ್ತದೆಎಂಬುದನ್ನು ಸೂಚಿಸುತ್ತದೆ.ಅಂದರೆನಾವು ಸುಖವನ್ನುಕೊಟ್ಟರೆ ಸುಖವನ್ನೇ ಪಡೆಯುತ್ತೇವೆ; ದುಃಖವನ್ನುಕೊಟ್ಟರೆದುBಖವನ್ನೇ ಮರಳಿ ಪಡೆಯುತ್ತೇವೆ. ಇದನ್ನುಕಾರಣ ಮತ್ತು ಪರಿಣಾಮಗಳ ನಿಯಮಎನ್ನುವರು.
ನಾವು ಕರ್ಮ-ಫಲಗಳ ಬಗ್ಗೆ ಕೆಲವು ಉದಾಹರಣೆಗಳನ್ನು ನೋಡೋಣ - ಸೇವೆ ಸಲ್ಲಿಸಲುಆಸ್ಪತ್ರೆ ಕಟ್ಟಿಸಿದರೆ ಮುಂದಿನ ಜನ್ಮದಲ್ಲಿಆರೋಗ್ಯ ಭಾಗ್ಯ ಸಿಗುತ್ತದೆ;ಧನದಾನಮಾಡಿದರೆ ಮುಂದಿನ ಜನ್ಮದಲ್ಲಿ ಶ್ರೀಮಂತನಾಗುವನು;ತAದೆತಾಯಿಯ ಸೇವೆ ಮಾಡಿದರೆಅವರ ಕೃಪೆಗೆ ಪಾತ್ರನಾಗುವನು;ಕಳ್ಳತನ, ದರೋಡೆ ಮಾಡಿದರೆ ಜೈಲು-ಶಿಕ್ಷೆಗೆ ಗುರಿಯಾಗವನು; ಭಕ್ತಿ ಮಾಡಿದರೆ ಭಗವಂತನ ಕೃಪೆಗೆ ಪಾತ್ರನಾಗುವನು. (ತುಕಾರಾಮ, ಜ್ಞಾನೇಶ್ವರ, ಪ್ರಹ್ಲಾದ,ಬಸವಣ್ಣ, ಭಕ್ತಕುಂಬಾರ, ಅಕ್ಕಮಹಾದೇವಿ ಮುಂತಾದವರು).
ನಮಗೆ ಸುಖ,ಶಾಂತಿ ನೆಮ್ಮದಿ, ಪ್ರೀತಿ, ಸ್ನೇಹಬೇಕೆಂದರೆ ನಾವು ಅನ್ಯರಿಗೆಅದನ್ನು ನೀಡಬೇಕು. ಜೀವನ ಹಾಗೆಯೇ ಸುಂದರÀವಾಗುವುದಿಲ್ಲ. ಅದನ್ನು ನಾವೇ ನಿರ್ಮಾಣಮಾಡಿಕೊಳ್ಳಬೇಕು. ನಮ್ಮಲ್ಲಿಚೈತನ್ಯತೆಇರಬೇಕೆಂದರೆಉತ್ಸಾಹದಿ0ದ ಮತ್ತು ಸ್ಫೂರ್ತಿಯಿಂದ ಕೆಲಸ-ಕಾರ್ಯಗಳನ್ನು ಮಾಡಬೇಕು. ಸ್ವ-ಪರಿರ್ವತನೆಯಿಂದ ವಿಶ್ವ-ಪರಿವರ್ತನೆಯಾಗುತ್ತದೆ. ನಾವು ಏನನ್ನು ಮಾಡುತ್ತೇವೆಯೋ ಅದೇ ನಮಗೆ ಮರಳಿ ಬರುತ್ತದೆ. ನಾವು ಸದಾ ಸಕಾರಾತ್ಮಕ ಭಾವನೆ ಇಟ್ಟುಕೊಂಡರೆ, ಪ್ರತಿಯೊಂದು ಕಾರ್ಯದಲ್ಲಿ ಸಫಲತೆದೊರೆಯುವುದು. ನಮ್ಮದೃಷ್ಟಿ ನಕಾರಾತ್ಮಕವಾಗಿದ್ದರೆಇನ್ನೊಬ್ಬರಲ್ಲಿ ನಮಗೆ ತಪ್ಪುಗಳೇ ಕಂಡು ಬರುತ್ತವೆ. ಭೂತ, ವರ್ತಮಾನ ಮತ್ತು ಭವಿಷ್ಯಗಳು ಪರಸ್ಪರಒಂದಕ್ಕೊAದು ಸಂಬAಧಿಸಿವೆ. ಹಾಗಾಗಿ ಕರ್ಮದ ಪ್ರತಿಯೊಂದು ಹೆಜ್ಜೆಯನ್ನು ಬಹಳ ಎಚ್ಚರಿಕೆಯಿಂದ ಇಡಬೇಕು. ಒ0ದೇ ಬಾರಿಎರಡು ವಿಚಾರ ಮಾಡಬಾರದು. ಯೋಗಿಜೀವನವನ್ನು ನಡೆಸುವುದರಿಂದ ನಾವು ವಿಕಾರಿ ಗುಣಗಳಿಂದ ಮುಕ್ತರಾಗಬಹುದು. ಜೀವನದಲ್ಲಿ ಹಳೆಯ ಘಟನೆಗಳಿಂದ ಪಾಠಕಲಿಯಬೇಕು. ಇತಿಹಾಸದ ಪುನರಾವರ್ತನೆಆಗುವುದರಿಂದ ಮುಂದೆಎಚ್ಚರಿಕೆ ವಹಿಸಬೇಕು. ಒಳ್ಳೆಯ ಫಲ ಪಡೆಯಲು ಪರಿಶ್ರಮಅತಿಅವಶ್ಯಕವಾಗಿದೆ. ನಿಸ್ವಾರ್ಥ ಸೇವಾ ಭಾವನೆಯನ್ನುಇಟ್ಟುಕೊಂಡು ಮಾಡುವ ಪ್ರತಿಯೊಂದುಕರ್ಮಅತಿ ಶ್ರೇಷ್ಠವಾದುದು.
ಮಾನವತನ್ನ ಸ್ವಾಭಿಮಾನ ಮತ್ತುದುರಂಹಕಾರಕ್ಕೆವಶನಾಗಿ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾನೆ, ಪ್ರಕೃತಿ ವಿಕೋಪಕ್ಕೆ ಕಾರಣೀಭೂತನಾಗಿದ್ದಾನೆ.ಇದರಿಂದಅನೇಕ ಸಾಂಕ್ರಾಮಿಕ ರೋಗಗಳಾದ ಕರೋನ, ಬಿಳಿ ಫಂಗಸ್ ಮತ್ತುಕಪ್ಪು ಫಂಗಸ್, ಡೆಲ್ಟಾ ಪ್ಲಸ್‌ಇತರೆ ರೋಗಗಳು ಬರುತ್ತಿವೆ.ಇವುಗಳ ವ್ಯಕ್ತಿಯ ಕರ್ಮಫಲಗಳೇ ಆಗಿವೆ. ಆದ್ದರಿಂದಭಗವ0ತನ ಶ್ರೀಮತದಂತೆ ನಡೆಯಬೇಕು. ಪ್ರತಿಯೊಂದು ಕರ್ಮಗಳನ್ನು ಮಾಡುವ ಮೊದಲು ವಿಚಾರ ಮಾಡಿ, ನಂತರಅದನ್ನುಕಾರ್ಯರೂಪಕ್ಕೆತರಬೇಕು. ನಾವು ಪರಮಾತ್ಮನಶ್ರೇಷ್ಠ ಸಂತಾನರು, ಮಾಸ್ಟರ್ ಸರ್ವಶಕ್ತಿವಂತರಾಗಿದ್ದೇವೆಎAಬುದನ್ನುತಿಳಿದು ಕರ್ಮಮಾಡಿದರೆಅದು ಸುಕರ್ಮವಾಗುವುದು.
ಸರ್ವೇಜನ: ಸುಖಿನೋಭವಂತು
--ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್,
7349632530; 9483937106

0 Comments