Ticker

6/recent/ticker-posts

Ad Code

Responsive Advertisement

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ರೈತರಿಗೆ ಶೇಂಗಾ - ತೊಗರಿ

ಮಧುಗಿರಿ : ತಾಲೂಕಿನ ಪುರವರ ಹೋಬಳಿಯ ಹಳೆತಿಮ್ಮನಹಳ್ಳಿಯಲ್ಲಿ ಇಂದು ರೈತರಿಗೆ ಶೇಂಗಾ ಹಾಗೂ ತೊಗರಿಯನ್ನು ವಿತರಿಸಲಾಯಿತು. ಮುಂಗಾರು ಚುರುಕುಗೊಂಡಿದ್ದ ಕಾರಣ, ರೈತರು ಭೂಮಿಯನ್ನು ಹಸನು ಮಾಡಿಕೊಂಡಿದ್ದರು. ಆದರೆ ಜೂನ್ ವೇಳೆಗೆ ಮಳೆ ಬಾರದ ಕಾರಣ ಭೂಮಿಯನ್ನು ಹಸನಾಗಿಸಿಕೊಂಡ ರೈತರು ಮಂಕಾಗಿದ್ದರು. ಬೆಳೆ ಬೆಳೆಯುವ ಈ ಸಂದರ್ಭದಲ್ಲಿ  ಮಳೆ ಬರಲಿಲ್ಲ .ಜಮೀನನ್ನು ಹಸನು ಗೊಳಿಸಿಕೊಂಡಿರುವ ಎಲ್ಲ ರೈತರು ಆಕಾಶವನ್ನು ದಿಟ್ಟಿಸಿ ನೋಡುವ ಸಂದರ್ಭ ಎದುರಾಗಿದ್ದು.


ಇಂತಹ ಪರಿಸ್ಥಿತಿಯಲ್ಲಿ ಕೊರೋನಾ ಎಂಬ ಮಹಾಮಾರಿ ಯಿಂದ ತತ್ತರಿಸಿರುವ ರೈತರು ಉತ್ತಮವಾದ ಮಳೆಯಾದರೆ ಬೆಳೆಯನ್ನು ಬೆಳೆಯಲು ಉತ್ಸುಕರಾಗಿದ್ದು,ಸುಮಾರು ತಿಂಗಳುಗಳಿಂದ ಜನತೆ ಹಣವಿಲ್ಲದೆ ಬಳಲಿದ್ದಾರೆ .ಪಟ್ಟಣ ಸೇರಿದ ಎಷ್ಟೋ ಜನರು ಹಳ್ಳಿಗಳಿಗೆ ಮರಳಿದ್ದಾರೆ 

.ಈ ಸಂದರ್ಭದಲ್ಲಿ ರೈತನನ್ನು ವ್ಯವಸಾಯದ ಉತ್ಸುಕತೆಯಿಂದ ಪ್ರೋತ್ಸಾಹಿಸಿ, ಜಮೀನಿನ ಕಡೆ ಮುಖಮಾಡಲು ರೈತರಿಗೆ ನೆರವಾಗುವ ಹಿತದೃಷ್ಟಿಯಿಂದ ಪುರವರ ಕೃಷಿ ಇಲಾಖೆ ರೈತರಿಗೆ ಸಹಾಯ ಹಸ್ತ ಚಾಚಿದೆ. ಮರುಭೂಮಿಯಲ್ಲಿ ನೀರು ಸಿಕ್ಕಿದಂತೆ ಸರ್ಕಾರದಿಂದ ಬಂದಿರುವ ಸವಲತ್ತುಗಳನ್ನು ಪಡೆದುಕೊಂಡ ರೈತರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸದಸ್ಯರುಗಳಿಗೆ ಕೃತಜ್ಞರಾಗಿದ್ದಾರೆ. 

ಅತಿ ಸಣ್ಣ ರೈತರು ಖುಷಿ ಗೊಂಡರು .ರೈತರ ಈ ಪರಿಸ್ಥಿತಿಯನ್ನು ಅರಿತ ಸರ್ಕಾರ ಮತ್ತು ಪುರವರ ಕೃಷಿ ಇಲಾಖೆಯ ಅಧಿಕಾರಿಗಳಾದ ರಾಜಶೇಖರಪ್ಪ ಮುತುವರ್ಜಿವಹಿಸಿ, ಯೋಗೀಶ್ ಹಾಗೂ ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮ್ಯಕೃಷ್ಣ ರವರ ಸಹಕಾರದೊಂದಿಗೆ , ಗೊಂದಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ತಿಮ್ಮನಹಳ್ಳಿ ಗ್ರಾಮದ ರೈತರುಗಳಿಗೆ ತೊಗರಿ ಹಾಗೂ ಕಡಲೆಕಾಯಿ ವಿತರಿಸಲಾಯಿತು.    ಇದರಿಂದ ಅಲ್ಪಸ್ವಲ್ಪ ಸಹಾಯವಾದಂತಾಗಿ ರೈತರು ಇದಕ್ಕೆ ಸಂಬಂಧಪಟ್ಟವರಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ. 

ಈ ವೇಳೆಯಲ್ಲಿ ಗೊಂದಿಹಳ್ಳಿ ಗ್ರಾಪಂ ಅಧ್ಯಕ್ಷ ರಮ್ಯಕೃಷ್ಣ ಹಳೆತಿಮ್ಮನಹಳ್ಳಿ ಗ್ರಾ.ಪಂ. ಸದಸ್ಯೆ ಸುನೀತಾ ರಮೇಶ್ ಮುಖಂಡರಾದ ಮುದ್ದರಿಯಪ್ಪ, ಗಂಗಪ್ಪ, ವಿಜಿ ಕುಮಾರ್, ಮತ್ತಿತರಿದ್ದರು.


Post a Comment

0 Comments

Ad Code

Responsive Advertisement