Ticker

6/recent/ticker-posts

Ad Code

Responsive Advertisement

ಗೋವಾದಲ್ಲಿ ಪೊಲೀಸರ ದೌರ್ಜನ್ಯ

ಗೋವಾದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಮುದ್ದೇಬಿಹಾಳ ಮೂಲದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಕರ್ನಾಟಕ ರಾಜ್ಯ ಸರ್ಕಾರ ಮಧ್ಯ ಪ್ರವೇಶ ಮಾಡಿ ಗೋವಾ ಸರ್ಕಾರದಿಂದ ಸ್ಪಷ್ಟನೆ ಪಡೆಯಬೇಕು ಮತ್ತು ಮೃತ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ಜನಾಧಿಕಾರ ಪಕ್ಷ ಆಗ್ರಹಿಸುತ್ತದೆ. ಗೋವಾದಲ್ಲಿ ಕನ್ನಡಿಗರ ಬದುಕು ಎಂಥಾ ಎಂಥ ಅಪಾಯಕಾರಿ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದ್ದು, ತಕ್ಷಣ ದೌರ್ಜನ್ಯ ನಡೆಸಿದ ಪೊಲೀಸರನ್ನು ಬಂಧಿಸಬೇಕು ಎಂದು ಕರ್ನಾಟಕ ಜನಾಧಿಕಾರ ಪಕ್ಷದ ಆಗ್ರಹಿಸುತ್ತದೆ

ಕನ್ನಡಿಗರ ಸ್ವಾಭಿಮಾನಿಗಳು. ಯಾವ ರಾಜ್ಯದಲ್ಲಿ ಇದ್ದರೂ ಆ ರಾಜ್ಯದ ನೆಲವನ್ನು ಗೌರವಿಸುತ್ತಲೇ ಸ್ವಾಭಿಮಾನದಿಂದ ಬದುಕುವವರೇ ಕನ್ನಡಿಗರು. ಕನ್ನಡಿಗ ಕುಟುಂಬದ ಮೇಲೆ ಸುಳ್ಳು ಆರೋಪವನ್ನು ಹೊರಿಸಿ ಗೋವಾ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಗೋವಾದ ಕನ್ನಡ ಸಂಘಟನೆಗಳು ಆರೋಪಿಸಿವೆ. ಕನ್ನಡಿಗರು, ಪರಭಾಷಿಕರು ಎಂಬ ಕಾರಣಕ್ಕೇ ಪೊಲೀಸರು ವಿನಾಕಾರಣ ಆರೋಪ ಹೊರಿಸಿ ದೌರ್ಜನ್ಯ ಮಾಡಿದ್ದರೆ ಅದು ಅಕ್ಷಮ್ಯ ಅಪರಾಧ. 

ಈ ಹಿಂದೆ ಗೋವಾ ಸರ್ಕಾರ ಕನ್ನಡಿಗರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿತ್ತು. ಆಗ ಕರ್ನಾಟಕ ರಾಜ್ಯ ಸರ್ಕಾರ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದ ನಿಯೋಗ ಕಳುಹಿಸಿ ಸಮಸ್ಯೆ ಬಗೆಹರಿಸಿತ್ತು. ಈಗಲೂ ರಾಜ್ಯ ಸರ್ಕಾರ ಅದೇ ಬದ್ದತೆಯನ್ನು ತೋರಿಸಬೇಕು‌. ಗೋವಾ ಸರ್ಕಾರ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ದೌರ್ಜನ್ಯ ಮಾಡಿತ್ತು. ಕರ್ನಾಟಕ ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡುವ ಮೂಲಕ ಭವಿಷ್ಯದಲ್ಲಿ ನಡೆಯಬಹುದಾದ ದೌರ್ಜನ್ಯ ವನ್ನು ತಡೆಯಬೇಕು ಎಂದು ಕರ್ನಾಟಕ ಜನಾಧಿಕಾರ ಪಕ್ಷ ಆಗ್ರಹಿಸುತ್ತದೆ. 

Post a Comment

0 Comments

Ad Code

Responsive Advertisement