ಬಳ್ಳಾರಿ ಜುಲೈ 02. ದೇವರು ಎಲ್ಲೆಡೆಯೂ ಇರಲು ಸಾಧ್ಯವಿಲ್ಲ, ಆದ್ದರಿಂದ ಅವರು ಜನರ ನಗುವನ್ನು ಮರಳಿ ತರಲು ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಕಳೆದ ಎರಡು ವರ್ಷಗಳಿಂದ 24/7 ಸೇವೆ ಸಲ್ಲಿಸಿದ ಶ್ರೇಷ್ಠತೆ ಮತ್ತು ನಿಸ್ವಾರ್ಥತೆಯಿಂದ ವೈದ್ಯರನ್ನು ಆದೇವರೇ ಕಳುಹಿಸಿದ್ದಾರೆ.
ಆದ್ದರಿಂದ ಅಭಯ ಫೌಂಡೇಶನ್ ಎಲ್ಲಾ ವೈದ್ಯರಿಗೆ ತುಂಬು ಹೃದಯದ ವೈದ್ಯರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಿದೆ ಎಂದು ಅಭಯ ಫೌಂಡೇಷನ್‌ನ ರಾಮಕೃಷ್ಣ ರೇನಿಗುಂಟ್ಲ ಅವರು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.ರಾಮಕೃಷ್ಣ ರೆನಿಗುಂಟ್ಲಾ ಅವರ ನೇತೃತ್ವದಲ್ಲಿ ಅಭಯ ಫೌಂಡೇಶನ್ ಅಪಾರ ಸಂತೋಷದಲ್ಲಿದ್ದು,
ನಮ್ಮ ಪ್ರೀತಿಯ ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿ0ಗಪ್ಪನವರು ಕೇಕ್ ಕತ್ತರಿಸಿ ವ್ಶೆದ್ಯರಿಗೆ ತಿನಿಸಿ ವೈದ್ಯರ ದಿನಾಚರಣೆಯನ್ನು ಆಚರಿಸಿದರು.
ಈ ಸಂಧರ್ಬದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ದೇವರಾಜ್, ಬಾದರ್ಲಿ ದತ್ತಾತ್ರೇಯ, ಬಾಲಕುಂಡಿ ರಾಘವೇಂದ್ರ ಅವರು ಸಿರುಗುಪ್ಪದ ಅನೇಕ ವೈದ್ಯರು ಹಾಜರಿದ್ದರು ಎಂದು ಅವರು ತಿಳಿಸಿದ್ದಾರೆ.

0 Comments