Ticker

6/recent/ticker-posts

Ad Code

Responsive Advertisement

ರೈಲ್ವೆ ಪ್ರಯಾಣಿಕರ ಸೇವಾ ಸಮಿತಿಗೆ ಶಿವರಾಜ್ ಗಂಧಗಿ ಅವರ ನೇಮಕ

ರೈಲ್ವೆ ಪ್ರಯಾಣಿಕರ ಸೇವಾ ಸಮಿತಿಗೆ ಶಿವರಾಜ್ ಗಂಧಗಿ ಅವರ ನೇಮಕ- ನಳಿನ್‍ಕುಮಾರ್ ಕಟೀಲ್ ಅಭಿನಂದನೆ

ಬೆಂಗಳೂರು: ಶ್ರೀ ರಮೇಶ್‍ಚಂದ್ರ ರತನ್ ಅವರ ಅಧ್ಯಕ್ಷತೆಯ ರಾಷ್ಟ್ರ ಮಟ್ಟದ ರೈಲ್ವೆ ಪ್ರಯಾಣಿಕರ ಸೇವಾ ಸಮಿತಿಯನ್ನು ಪುನರ್ ರಚಿಸಿದ್ದು, ಸದಸ್ಯರಾಗಿ ನೇಮಕಗೊಂಡಿರುವ ರಾಜ್ಯದ ಬೀದರ್ ಜಿಲ್ಲೆಯ ಶ್ರೀ ಶಿವರಾಜ್ ಗಂಧಗಿ ಅವರನ್ನು  ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಅಭಿನಂದಿಸಿದ್ದಾರೆ.

ಒಟ್ಟು 25 ಜನರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಕ್ಯಾಟರಿಂಗ್, ಸ್ಟಾಲ್‍ಗಳು, ಪುಸ್ತಕದ ಸ್ಟಾಲ್‍ಗಳು, ಪ್ರವಾಸಿಗರ ಮಾಹಿತಿ ಕೇಂದ್ರಗಳ ನಿರ್ವಹಣೆಗೆ ಸಂಬಂಧಿಸಿ ಸೇವಾ ಸಮಿತಿಯು ಕಾರ್ಯ ನಿರ್ವಹಿಸಲಿದೆ. ಬಿಜೆಪಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿದ  ಶ್ರೀ ಶಿವರಾಜ್ ಗಂಧಗಿ ಅವರು ಸದಸ್ಯರಾಗಿ ನೇಮಕಗೊಂಡಿದ್ದು, ಅವರಿಂದ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯಗಳು ಲಭಿಸುವಂತಾಗಲಿ ಎಂದು ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಆಶಿಸಿದ್ದಾರೆ.

                                                                                             


Post a Comment

0 Comments

Ad Code

Responsive Advertisement