ಕಲಬುರ್ಗಿ: ಬಿಜೆಪಿಯವರು ಲಿಂಗಾಯತರನ್ನು ತಮ್ಮ ಆಸ್ತಿ ಎಂದು ತಿಳಿದುಕೊಂಡಿದ್ದಾರೆ. ಆದರೆ, ಆ ಪಕ್ಷದ ಆಸ್ತಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ತೆರಳಲು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲಿಂಗಾಯತರಲ್ಲೂ ಸಾಕಷ್ಟು ಜನರು ಕಾಂಗ್ರೆಸ್ ಬೆಂಬಲಿಗರಿದ್ದಾರೆ. ಲಿಂಗಾಯತ ಮುಖಂಡರಾದ ಎಂ.ಬಿ. ಪಾಟೀಲ, ಎಸ್.ಆರ್. ಪಾಟೀಲ, ಈಶ್ವರ ಖಂಡ್ರೆಯವರಂತಹ ಕಾಂಗ್ರೆಸ್ ನಾಯಕರಿದ್ದಾರೆ ಎಂದರು
ರಾಜಕೀಯ ಸಮಾವೇಶಗಳಿಗೆ ಕೊರೊನಾ ಪ್ರಯುಕ್ತ ಅವಕಾಶ ಇಲ್ಲದ್ದರಿಂದ ನಾವೇ ವಿವಿಧ ಸಮುದಾಯಗಳನ್ನು ಭೇಟಿ ಮಾಡಿ ಅವರ ಸಮಸ್ಯೆ ಅರಿತುಕೊಳ್ಳುತ್ತಿದ್ದೇವೆ ಎಂದರು.
ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿದ್ದಂತೆಯೇ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

0 Comments