ಬೆಂಗಳೂರು: ಕೋವಿಡ್ 2ನೇ ಅಲೆಯ ಲಾಕ್‌ಡೌನ್ ಸಂತ್ರಸ್ತರಾದ ಅಸಂಘಟಿತ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ದುರ್ಬಲ ವರ್ಗಗಳಿಗೆ ನೀಡಬೇಕಿದ್ದ ಪರಿಹಾರ ದನವನ್ನು ರಾಜ್ಯ ಸರ್ಕಾರ ಇದುವರೆವಿಗೂ ಬಿಡುಗಡೆ ಮಾಡಿಲ್ಲ. ಶೀಘ್ರ ಬಿಡುಗಡೆಮಾಡುವಂತೆ ಒತ್ತಾಯಿಸಿ ವಿಧಾನ ಸೌಧ ಮುಂದೆ ಬೃಹತ್ ಪ್ರತಿಭಟನಾ ಧರಣೆ ನಡೆಸಲಾಗುವುದು ಎಂದು ಭಾರತೀಯ ರಾಷ್ಟೀಯ ಕಾರ್ಮಿಕ ಕಾಂಗ್ರೇಸ್ ಇಂಟೆಕ್ ತಿಳಿಸಿದೆ.
ಬೆಂಗಳೂರಿನಲ್ಲಿ ನಡೆದ ಭಾರತೀಯ ರಾಷ್ಟೀಯ ಕಾರ್ಮಿಕ ಕಾಂಗ್ರೇಸ್ ಇಂಟೆಕ್ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ರಾಜ್ಯ ಸರ್ಕಾರ ಲಾಕ್‌ಡೌನ್ ಬಳಿಕ ಸಂತ್ರಸ್ತರ ನೆರವಿಗೆ ಧಾವಿಸುವಲ್ಲಿ ಸಂಪೂರ್ಣ ವಿಫಲಗೊಂಡಿದೆ. ಕಟ್ಟಡ ಕಾರ್ಮಿಕರು, ಬಡಗಿ ನೌಕರರು, ಕುಶಕಲರ್ಮಿಗಳು, ಸೇರಿದಂತೆ ಎಲ್ಲಾ ವಲಯದ ಕಾರ್ಮಿಕರು ಜೀವ ನಿರ್ವಹಣೆ ಮಾಡಲು ಜೀವನ ನಿರ್ವಹಣೆ ಮಾಡುವುದೇ ಕಷ್ಟಕರವಾಗಿದೆ. ಈ ಕಾರಣದಿಂದ ರಾಜ್ಯ ಸರ್ಕಾರ ಕೂಡಲೆ ವಿಶೇಷ ಪ್ಯಾಕೇಜ್‌ನಲ್ಲಿ ಘೋಷಿಸಿದಂತೆ ಅಗತ್ಯ ಪರಿಹಾರ ಧನ, ಕಾರ್ಮಿಕರಿಗೆ ಬಡ್ಡಿರಹಿತ ಸಾಲ, ವಸತಿ ಸೌಲಭ್ಯ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿದರು.
ಇಂಟೆಕ್ ರಾಜ್ಯಾಧ್ಯಕ್ಷ ಎ. ಜಾಕೀರ್ ಹುಸೇನ್ ಮಾತನಾಡಿ ಕರೋನ ಹಿನ್ನಲೆಯಲ್ಲಿ ಕಾರ್ಮಿಕರು ತೀರಾ ಸಂಕಷ್ಟದ ದಿನಗಳನ್ನು ಎದುರಿಸಿದ್ದಾರೆ. ಕೈಯಲ್ಲಿ ಕೆಲಸವೂ ಇಲ್ಲ. ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲದ ಬಾಬ್ತು ಕಂತುಗಳನ್ನೂ ಸಹ ಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಬೇಕು. ಕಾರು, ಲಾರಿ ಚಾಲಕರು, ಗ್ಯಾರೇಜ್ ಕಾರ್ಮಿಕರು, ಕಟ್ಟಡ ನಿರ್ಮಾಣ ಸೇರಿದಂತೆ ಎಲ್ಲಾ ಕಾರ್ಮಿಕ ವರ್ಗದವರು ಮಾಡಿರುವ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕು ಒತ್ತಾಯಿಸಿದರು.
ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಸೇವೆಸಲ್ಲಿಕೊಂಡು ಬಂದಿದ್ದು ಸ್ವಾಮಿನಾಥನ್ ಜೈಸ್ವಾಲ್ ಪಪ್ಪು ಬಯ್ಯ ನೇತೃತ್ವದ ಇಂಟೆಕ್ ಉತ್ತಮವಾಗಿ ಪಕ್ಷ ಸಂಘಟನೆಯಲ್ಲಿ ತನ್ನದೇ ಆದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ. ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲದೆ ಪಕ್ಷ ಮುಂಬರುವ ದಿನಗಳಲ್ಲಿ ಅಧಿಕಾರಕ್ಕೆ ಬರಲು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು.
ಮುಂದಿನ ತಿಂಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗುವುದು. ಜೊತೆಗೆ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆ ಸಮಾಲೋಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಬೆಂಗಳೂರಿನಲ್ಲಿ ಬೃಹತ್ ಸಮವೇಶ ನಡೆಸಿ ಪಕ್ಷವನ್ನು ಸಂಘಟಿಸಲುವುದಾಗಿ ಎ. ಜಾಕೀರ್ ಹುಸೇನ್ ಹೇಳಿದರು.
0 Comments