ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ತ್ರಿವಳಿ ತಲಾಖ್ ರದ್ದತಿ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದತಿ, ರಾಮಮಂದಿರ ನಿರ್ಮಾಣಕ್ಕೆ ಕ್ರಮ, ಕೃಷಿಕರಿಗೆ ಆರು ಸಾವಿರ ರೂಪಾಯಿ ನೆರವು- ಇವೇ ಮೊದಲಾದ ಕಾರ್ಯಗಳನ್ನು ಅವರು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಎಸ್.ಟಿ. ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಸತ್ಯನಾರಾಯಣ ರೆಡ್ಡಿ ಅವರು ತಿಳಿಸಿದರು.
ನಗರದ “ರ್ಯಾಡಿಸನ್ ಬ್ಲೂ” ಹೋಟೆಲ್‍ನಲ್ಲಿ ಇಂದು ನಡೆದ ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಸಂದರ್ಭದಲ್ಲಿ ಎಸ್‍ಟಿ ಮೋರ್ಚಾವು ಸೇವೆಯ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಪಕ್ಷದ ಹಿರಿಯ ಪದಾಧಿಕಾರಿಗಳು ಮೋರ್ಚಾಕ್ಕೆ ಗರಿಷ್ಠ ಪ್ರಮಾಣದಲ್ಲಿ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ಮೆಚ್ಚತಕ್ಕ ವಿಚಾರ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಎಸ್‍ಟಿ ಮೋರ್ಚಾವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಯೋಜನೆಗಳು ಜಿಲ್ಲೆ, ಮಂಡಲ ಮಟ್ಟದಲ್ಲಿ ನೈಜ ಫಲಾನುಭವಿಗಳನ್ನು ತಲುಪುತ್ತಿವೆ ಎಂದು ಅವರು ಮೆಚ್ಚುಗೆ ಸೂಚಿಸಿದರು.
ದೇಶ ಮತ್ತು ರಾಜ್ಯದ ವಿವಿಧ ಯೋಜನೆಗಳು ಬೂತ್ ಮಟ್ಟದ ವರೆಗೆ ಸರಿಯಾದ ಫಲಾನುಭವಿಗಳಿಗೆ ತಲುಪುವಂತೆ ನೋಡಬೇಕಾದುದು ಮೋರ್ಚಾಗಳ ಕರ್ತವ್ಯವೆಂದು ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಹೇಳಿದ್ದಾರೆ. ಅದನ್ನು ಅನುಸರಿಸಬೇಕು ಎಂದು ಅವರು ತಿಳಿಸಿದರು.
ಎಸ್.ಟಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ತಿಪ್ಪರಾಜು ಹವಾಲ್ದಾರ್ ಅವರು ಮಾತನಾಡಿ, 37 ಸಂಘಟನಾ ಜಿಲ್ಲಾ ಪದಾಧಿಕಾರಿಗಳ ಸಂಪೂರ್ಣ ತಂಡಗಳನ್ನು ಹಾಗೂ 311 ಮಂಡಲಗಳಲ್ಲಿ 264 ಮಂಡಲಗಳನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಪಕ್ಷದ ಸೂಚನೆಯನ್ನು ಅನುಸರಿಸಿ ಹಗಲು- ರಾತ್ರಿ ಪದಾಧಿಕಾರಿಗಳು ಸಂಘಟನಾ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರ ಸಂಘಟನಾ ಚತುರತೆ ಪಕ್ಷದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದೆ. ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್‍ಕುಮಾರ್ ಅವರೂ ಪಕ್ಷಕ್ಕೆ ಸಮರ್ಥವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
148 ಮಂಡಲಗಳಲ್ಲಿ ಯೋಗ ದಿನಾಚರಣೆ, 240 ಮಂಡಲಗಳಲ್ಲಿ ತುರ್ತು ಪರಿಸ್ಥಿತಿ ಸಂಬಂಧ ಕರಾಳ ದಿನಾಚರಣೆ ನಡೆದಿದೆ. ಮನ್ ಕಿ ಬಾತ್ ಅನ್ನು 271 ಮಂಡಲಗಳಲ್ಲಿ ಆಲಿಸುತ್ತಿದ್ದಾರೆ. ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಇದು ಸಾಕ್ಷಿ ಎಂದು ತಿಳಿಸಿದರು.
ನಿಗದಿತ 50 ಸಾವಿರದ ಬದಲಿಗೆ 55,141 ಸಸಿ ನೆಡಲಾಗಿದೆ. ಸಸಿ ನೆಟ್ಟು ಅದನ್ನು ಪಾಲಿಸುವ ಜವಾಬ್ದಾರಿಯನ್ನೂ ಕಾರ್ಯಕರ್ತರಿಗೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್‍ಕುಮಾರ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ರವಿಕುಮಾರ್ ಮತ್ತು ಶ್ರೀ ಮಹೇಶ್ ಟೆಂಗಿನಕಾಯಿ ಅವರು ಭಾಗವಹಿಸಿ ಮಾರ್ಗದರ್ಶನ ನೀಡಿದರು. ಎಲ್ಲಾ ಆಹ್ವಾನಿತರು ಜಿಲ್ಲೆಗಳಿಂದ ವರ್ಚುವಲ್ ಆಗಿ ಭಾಗವಹಿಸಿದ್ದರು.


0 Comments