ಕೋವಿಡ್ ಸಮಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿ ವಿಶ್ರಾಂತಿ ಮಾಡಿ, ಭವಿಷ್ಯದಲ್ಲಿ ಹೆಚ್ಚಿನ ಸೇವೆ ಸಲ್ಲಿಸಲು ಎನರ್ಜಿ ತುಂಬಿಸಿಕೊಳ್ಳುತ್ತಿರುವ ಅಭಯ ಫೌಂಡೇಶನ್ ತಂಡ
ಬಳ್ಳಾರಿ ಜುಲೈ 13. ಅಭಯ ಫೌಂಡೇಶನ್ ತಂಡ ಕೋವಿಡ್ ಸಮಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿ, ಸೇವೆಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದೆ. ಯಾಕಂದರೇ ಕೋವಿಡ್ 3ನೇ ಅಲೆ ಆಗಬಹುದು,ಬೇರೇ ಇನ್ಯಾದೇ ಸಂಕಷ್ಟದ ಪರಿಸ್ಥಿತಿ ಬಂದರೇ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆನ್ನು ತಟ್ಟುವ ಸಲುವಾಗಿ ವಿಶ್ರಾಂತಿ ಮಾಡಿದೆ.
ಕಾರಣ ಟ್ರೆಕ್ ಮಾಸ್ಟರ್ಸ್ ವಟ್ಟಂ ಆದಿತ್ಯ ಮತ್ತು ಕಿಶೋರ್ ದಾಂಡಿನಾ ನೇತೃತ್ವದಲ್ಲಿ ಅಭಯ ಫೌಂಡೇಷನ್‌ನ ತಂಡವನ್ನು ಸಂಗನಕಲ್ ಬೆಟ್ಟಗಳಿಗೆ ಉತ್ತಮ ವಿಶ್ರಾಂತಿ ಪಡೆಯಲು ಕರೆದೊಯ್ದಿದ್ದಾರೆ. ಮತ್ತು ಭವಿಷ್ಯದಲ್ಲಿ ಹೆಚ್ಚಿನ ಸೇವೆಗಳಿಗೆ ತಂಡವು ಸಿದ್ಧವಾಗಿದೆ ಎಂದು ಅಭಯ ಫೌಂಡೇಶನ್‌ನ ಅಧ್ಯಕ್ಷರು ರೇನಿಗುಂಟ್ಲ ರಾಮಕೃಷ್ಣ ತಿಳಿಸಿದರು.
ಈ ಸಂಧರ್ಭದಲ್ಲಿ ರಾಮಕೃಷ್ಣ ರೆನಿಗುಂಟ್ಲಾ, ನಾಮ ಕಾರ್ತೀಕ್, ಎಚ್.ಆರ್.ಬಳನಾಗರಾಜ್, ಜೆ.ಎಸ್.ಅಜಯ್, ಪಿ.ವೇಣುಗೋಪಾಲ್ ಗುಪ್ತಾ, ಎಸ್ ಜಿತೇಂದ್ರ ಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು.
*ಪಂಪನಗೌಡ.ಬಿ.ಬಳ್ಳಾರಿ.9886633682.*

0 Comments