ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕುಟುಂಬ ಪ್ರಕಾಶನ, ಕಲಬುರಗಿ ಸಹಯೋಗದೊಂದಿಗೆ ನಗರದ ಕುಮಾರಪಾರ್ಕ್ನಲ್ಲಿರುವ ಗಾಂಧಿ ಭವನದಲ್ಲಿ ಪ್ರೊ. ಎಚ್.ಟಿ.ಪೋತೆ ಅವರ “ಬಾಬಾ ಸಾಹೇಬರೆಡೆಗೆ” ಶ್ರೀ ಮಲ್ಲಿಕಾರ್ಜುನ ಖರ್ಗೆಜೀ ಅವರ ಜೀವನ ಕಥನ ಕೃತಿ ಬಿಡುಗಡೆ ಮತ್ತು ವಿಶೇಷೋಪನ್ಯಾಸವನ್ನು ಆಯೋಜಿಸಲಾಗಿತ್ತು.
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ನಾಡೋಜ ಪ್ರೊ.ಹಂಪ ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಬಾಬಾಸಾಹೇಬರೆಡೆಗೆ ಖರ್ಗೆ ಜೀವನಕಥನ ಕೇವಲ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಜೀವನ ಚರಿತ್ರೆ ಮಾತ್ರವಾಗಿರದೆ ಶ್ರೀ ಮಲ್ಲಿಕಾರ್ಜುನ ಖರ್ಗೆಯವರ ಬದುಕಿನ ಸಮಗ್ರ ಮಾಹಿತಿಗಳನ್ನೊಳಗೊಂಡ ಪುಸ್ತಕ ಇದಾಗಿದೆ. ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿಯಿಂದ ದೆಹಲಿಯವರೆಗೆ ಅವರು ನಡೆದ ಬಂದ ಈ ಚರಿತ್ರೆಯಲ್ಲಿ ಕಟ್ಟಿಕೊಟ್ಟಿದೆ. ಅವರ ಜೀವನದ ಎಲ್ಲ ಮಜುಲುಗಳನ್ನು ಪರಿಚಯಿಸಿಕೊಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ಪ್ರೊ. ಎಚ್.ಟಿ. ಪೋತೆಯವರು ಪುಸ್ತಕವನ್ನು ಸಮರ್ಥವಾಗಿ ನಿರೂಪಿಸಿದ್ದಾರೆ. ಖರ್ಗೆಜಿಯವರ ಬಾಲ್ಯದ ಆ ದಿನಗಳು, ಶಿಕ್ಷಣ, ಚಳವಳಿ-ಹೋರಾಟ, ರಾಜಕೀಯ, ಧಾರ್ಮಿಕ, ಸಾಮಾಜಿಕ ಚಿಂತನೆಗಳು, ಜನಪರ ಕಾಳಜಿ ಮತ್ತು ರಾಷ್ಟç ನಾಯಕರಾಗಿ ದೆಹಲಿಯ ಲೋಕಸಭೆಯಲ್ಲಿ ಮಾತಾನಾಡಿದ ಚರ್ಚೆ/ಭಾಷಣಗಳು ಇವೆಲ್ಲವನ್ನು ಒಳಗೊಂಡಿವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸಿದ್ದರು. ಕವಿ ಹಾಗೂ ಸಂಸ್ಕೃತಿ ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿರವರು ‘ಪ್ರಸ್ತುತ ಭಾರತ : ಗಾಂಧೀ ಮತ್ತು ಬಿ.ಆರ್.ಅಂಬೇಡ್ಕರ್’ ವಿಷಯದ ಕುರಿತು ವಿಶೇಷೋಪನ್ಯಾಸವನ್ನು ನಡೆಸಿಕೊಟ್ಟರು. ಕೃತಿಯ ಲೇಖಕ ಗುಲಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್, ಕ.ಗಾ.ಸ್ಮಾ.ನಿ ಗೌ| ಕರ‍್ಯದರ್ಶಿ ಇಂದಿರಾ ಕೃಷ್ಣಪ್ಪ , ರಾಹುಲ್ ಖರ್ಗೆ , ಡಾ.ಸಿಸಿರಾ ಉಪಸ್ಥಿತರಿದ್ದರು. ಗಾಂಧಿ ಶಾಂತಿ ಪ್ರತಿಷ್ಠಾನದ ಗೌ| ಕರ‍್ಯದರ್ಶಿ ಡಾ.ಸತ್ಯಮಂಗಲ ಮಹಾದೇವ ಕರ‍್ಯಕ್ರಮ ನಿರೂಪಿಸಿದರು.
0 Comments