ಬಳ್ಳಾರಿ ಜುಲೈ 01: ಕರ್ನಾಟಕ ಗ್ರಾಮೀಣ ಬ್ಯಾಂಕ್ ಆರಂಭದಿAದಲೂ ನಿರಂತರವಾಗಿ ಲಾಭಗಳಿಸುತ್ತಾ ಬರುತ್ತಿದ್ದು, ಈ ವರ್ಷ ಒಟ್ಟು 723 ಕೋಟಿ ಲಾಭಗಳಿಸಿದೆ.
ನಿವ್ವಳ ಲಾಭ 14 ಕೋಟಿ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಶ್ರೀನಾಥ ಜೋಶಿ ತಿಳಿಸಿದರು.
ನಗರದ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ 3478 ಕೋಟಿ ರು. ಆದಾಯಗಳಿಸಿದ್ದು, ಶೇ.7.58 ಬೆಳವಣಿಗೆಯನ್ನು ದಾಖಲಿಸಿದೆ.
ಬ್ಯಾಂಕ್‌ನ ಒಟ್ಟು ವ್ಯವಹಾರ 55.855 ಕೋಟಿಗೆ ಏರಿಕೆಯಾಗಿದ್ದು, ವ್ಯವಹಾರದಲ್ಲಿ ದಕ್ಷಿಣ ಭಾರದಲ್ಲಿ ಅತೀ ದೊಡ್ಡ ಗ್ರಾಮೀಣ ಬ್ಯಾಂಕ್ ಎಂಬ ಸಾಧನೆಯನ್ನು ಮುಂದುವರೆಸಿಕೊ0ಡು ಬಂದಿದ್ದು, ಅಲ್ಲದೆ, ದೇಶದ ಎರಡನೇ ಅತೀ ದೊಡ್ಡ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದರು.
ಬ್ಯಾಂಕಿ0ಗ್ ಉದ್ಯಮ ಕೋವಿಡ್-19 ಒತ್ತಡಕ್ಕೆ ನಲುಗಿದ ಸಮಯದಲ್ಲೂ ಬ್ಯಾಂಕಿನ ಸಾಲ ಮತ್ತು ಮುಂಗಡಗಳು 24,787 ಕೋಟಿ ರು.ಗಳಿಗೆ ಏರಿಕೆಯಾಗಿದ್ದು, 3002 ಕೋಟಿ ರು.ಗಳ ನಿವ್ವಳ ವೃದ್ಧಿ ಶೇ.13.78 ರ ಬೆಳವಣಿಗೆ ಸಾಧಿಸುವ ಮೂಲಕ ರೈತಾಪಿ ಗ್ರಾಹಕರಿಗೆ ತನ್ನ ಬದ್ಧತೆ ಉಳಿಸಿಕೊಂಡು ಸಕಾಲದಲ್ಲಿ ಹಣಕಾಸಿನ ನೆರವನ್ನು ನೀಡಿದೆ.
ರೈತಾಪಿ ವರ್ಗದವರ ನಿರಂತರ ಸೇವೆಯನ್ನು ಮಾಡುತ್ತಾ ಕೃಷಿ ವಲಯದಲ್ಲಿ ಶೇ. 17.97 ರಷ್ಟು ಬೆಳವಣಿಗೆ ಸಾಧಿಸಿ, ಹೊಸದಾಗಿ 9011 ಕೋಟಿ ರು. ಸಾವವನ್ನು ವಿತರಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ ಶೇ.35.90 ರಷ್ಟು ಬೆಳವಣಿಗೆಯಾಗಿದ್ದು, ಬಂಗಾರದ ಆಭರಣಗಳ ಮೇಲಿನ ಸಾಲ ವಿಭಾಗದಲ್ಲಿ ಶೇ.53.73 ರಷ್ಟು ಸಾಧನೆ ಗೈದಿದೆ ಎಂದು ತಿಳಿಸಿದರು.
ಸಾಮಾಜಿಕ ಕಾಳಜಿಯನ್ನು ಪ್ರದರ್ಶಿಸುತ್ತಾ ಕೋವಿಡ್-19 ಮಹಾಮಾರಿಯ ಸಂಕಷ್ಟವನ್ನು ಭರಿಸುವುದಕ್ಕಾಗಿ ಎರಡು ಸುಲಭವಾಗಿ ಲಭ್ಯವಾಗುವ ಹೊಸ ಸಾಲ ಯೋಜನೆಗಳನ್ನು ಹೊರತಂದಿದ್ದು, 36567 ರೈತರಿಗೆ ಮತ್ತು ಸಣ್ಣ ವ್ಯಾಪಾರಸ್ಥ ಗ್ರಾಹಕರಿಗೆ 86.33 ಕೋಟಿ ರು. ಸಾಲ ವಿತರಿಸಿದೆ.
ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಡಿಯಲ್ಲಿ ಸುಮಾರು 5876 ಬೀದಿ ಬದಿಯ ವ್ಯಾಪಾರಿಗಳಿಗೆ 5.87 ಕೋಟಿ ರು. ಸಾಲವನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್‌ನ ಮಹಾ ಪ್ರಬಂಧಕರಾದ ಜಿ. ಪ್ರದೀಪ್ ವರ್ಮ, ಎ.ಎನ್ ಪ್ರಸಾದ್, ಆನಂದ್ ಪಿ. ಹೇಮಾದ್ರಿ, ಜನರಲ್ ಮ್ಯಾನೇಜರ್ ನಿಂಗೇಗೌಡ ಅವರು ಹಾಜರಿದ್ದರು.

0 Comments