Ticker

6/recent/ticker-posts

Ad Code

Responsive Advertisement

ಕಲಾವಿದರಿಗೆ ಪರಿಹಾರ ಧನ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯ , ಸರ್ಕಾರದ ವಿರೋಧಿ ನೀತಿಗೆ ಖಂಡನೆ

ರಂಗಭೂಮಿ ಕಲಾವಿದರಿಗೆ ಕೋವಿಡ್2ನೇ ಅಲೆಯ ಪರಿಹಾರ ಧನ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯ , ರಾಜ್ಯ ಸರ್ಕಾರದ ಸಾಂಸ್ಕೃತಿಕ ವಿರೋಧಿ ನೀತಿಗೆ ಖಂಡನೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ವಿಚಾರ ಏನೆಂದರೆ ,ಕೋವಿಡ್ 2ನೇ ಅಲೆಯ ಕಷ್ಟ ಕಾಲದಲ್ಲಿ ಕಲಾವಿದರಿಗೆ ಸರ್ಕಾರ ನೀಡಿದ 3,000(ಮೂರು ಸಾವಿರ) ಪರಿಹಾರ ಹಣ ತುಮಕೂರು ಜಿಲ್ಲೆಯ ಅನೇಕ ಕಲಾವಿದರಿಗೆ ತಲುಪಿಲ್ಲ. ರಾಜ್ಯಾದಾದ್ಯಂತ ಬಹುತೇಕ ಕಲಾವಿದರಿಗೆ ಪರಿಹಾರ ಧನ ವಿತರಣೆಯಲ್ಲಿ ವಿಳಂಬ ಧೋರಣೆ ಮಾಡುತ್ತಿದೆ. ಮತ್ತು ನಿಜವಾದ ಕಲಾವಿದರ ಅರ್ಜಿ ತಿರಸ್ಕರಿಸಿ ಅನ್ಯಾಯ ಮಾಡಲಾಗಿದೆ.ಹಿರಿಯ ಕಲಾವಿದರಿಗೆ ಮಾಸಾಶನ ನೀಡುವಲ್ಲಿಯೂ ಸಮಸ್ಯೆ ಇದೆ.ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ...ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನಲ್ಲಿ ಪ್ರಶ್ನಿಸಿದರೆ ಸೂಕ್ತ ಉತ್ತರ ಸಿಗುವುದಿಲ್ಲ.!ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಬೇಕಿದೆ ಎಂದು ಜಿಲ್ಲೆಯ ಎಲ್ಲಾ ಕಲಾವಿದರ ಪರವಾಗಿ ಒಕ್ಕೊರೊಲಿನ ಆಗ್ರಹ ಮಾಡುತ್ತಿದ್ದೇವೆ.

ಮೈಲಾರಪ್ಪ, ರಂಗಭೂಮಿ ಯ ಹಿರಿಯ ಕಲಾವಿದರು.

ಮಾಜಿ ಸದಸ್ಯರು 

. ಕರ್ನಾಟಕ ನಾಟಕ ಅಕಾಡೆಮಿ,

Post a Comment

0 Comments

Ad Code

Responsive Advertisement