Ticker

6/recent/ticker-posts

Ad Code

Responsive Advertisement

ಮೋದಿಗೆ 2,600 ಕೆಜಿ ಮಾವಿನ ಹಣ್ಣು ಕಳುಹಿಸಿದ ಬಾಂಗ್ಲಾ ಪ್ರಧಾನಿ

 ಢಾಕಾ: ಸ್ನೇಹದ ಗುರುತಾಗಿ ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ 2600 ಕೆಜಿ ಹರಿಬಾಂಗ ತಳಿಯ ಮಾವಿನ ಹಣ್ಣುಗಳನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿಕೊಟ್ಟಿದ್ದಾರೆ. 260 ಪೆಟ್ಟಿಗೆಯನ್ನು ಸಾಗಿಸುತ್ತಿರುವ ಟ್ರಕ್ ಶನಿವಾರ ಮಧ್ಯಾಹ್ನ ಬೆನಾಪೊಲ್ ಬಂದರಿನ ಮೂಲಕ ಬಾಂಗ್ಲಾದೇಶ-ಭಾರತದ ಗಡಿಯನ್ನು ದಾಟಿತು ಎಂದು ಡೈಲಿ ಸ್ಟಾರ್ ನ್ಯೂಸ್ ಪೇಪರ್ ವರದಿ ಮಾಡಿದೆ.

ಉಭಯ ದೇಶಗಳ ನಡುವಿನ ಸ್ನೇಹ ಸಂಬಂಧದ ಗುರುತಾಗಿ ಈ ಮಾವುಗಳನ್ನು ಕಳುಹಿಸಲಾಗುತ್ತಿದೆ ಎಂದು ಬೆನಾಪೊಲ್ ಕಸ್ಟಮ್ಸ್ ಹೌಸ್ ಉಪ ಆಯುಕ್ತ ಅನುಪಮ್ ಚಾಕ್ಮ ಹೇಳಿರುವುದಾಗಿ ವರದಿಯಾಗಿದೆ. ಈ ಹಣ್ಣುಗಳು ರಂಗ್ ಪುರ ವಲಯದಲ್ಲಿ ಬೆಳೆದ ಹರಿಬಾಂಗ ತಳಿಯ ಮಾವಿನ ಹಣ್ಣುಗಳಾಗಿವೆ ಎಂದು ಢಾಕಾ ಟ್ರಿಬುನ್ ನ್ಯೂಸ್ ಪೇಪರ್ ವರದಿ ಮಾಡಿದೆ.

ಹರಿಭಂಗ ಮಾವಿನಹಣ್ಣು ದುಂಡಾಗಿದ್ದು, ಹೆಚ್ಚು ತಿರುಳಿರುವ, ನಾರಿನಂಶವಿಲ್ಲದ ಮತ್ತು ಸಾಮಾನ್ಯವಾಗಿ 200 ರಿಂದ 400 ಗ್ರಾಂ ತೂಕವಿರುತ್ತದೆ. ಮೊದಲಿಗೆ ಕಲ್ಕತ್ತಾದಲ್ಲಿರುವ ಬಾಂಗ್ಲಾದೇಶದ ಉಪ ಹೈಕಮೀಷನ್ ಕಾರ್ಯದರ್ಶಿ ಎಂಡಿ ಸ್ಯಾಮಿಯಲ್ ಕ್ವಾಡರ್ ಈ ಮಾವಿನ ಹಣ್ಣುಗಳನ್ನು ಪಡೆಯಲಿದ್ದಾರೆ. 

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇತರ ರಾಜಕೀಯ ಮುಖಂಡರು ಈ ಹಣ್ಣುಗಳನ್ನು ಸ್ವೀಕರಿಸಲಿದ್ದಾರೆ ಎಂದು ಯುನೈಟೆಡ್ ನ್ಯೂಸ್ ಆಫ್ ಬಾಂಗ್ಲಾದೇಶ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಮಾವಿನ ರಾಯಭಾರತ್ವ ಭಾರತೀಯ ಉಪಖಂಡ ರಾಜಕಾರಣದಲ್ಲಿ ಒಂದು ಸಂಪ್ರದಾಯವಾಗಿದೆ. ಪಾಕಿಸ್ತಾನದ ಮಾಜಿ ಅಧ್ಯಕ್ಷರಾದ ಜಿಯಾ-ಉಲ್-ಹಕ್ ಮತ್ತು ಪರ್ವೇಜ್ ಮುಷರಫ್ ಕೂಡಾ  ಭಾರತ ಸರ್ಕಾರಕ್ಕೆ ಮಾವಿನ ಹಣ್ಣುಗಳನ್ನು ಕಳುಹಿಸಿದ್ದ ಗಣ್ಯರಲ್ಲಿ ಸೇರಿದ್ದಾರೆ.

Post a Comment

0 Comments

Ad Code

Responsive Advertisement