ಬಳ್ಳಾರಿ ಜುಲೈ22. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯವು “ಗ್ಲೋಬಲ್ ಎಮಿನೆನ್ಸ್ 2021” ಗೆ ಆಯ್ಕೆ ಮಾಡಲಾಗಿದ್ದು, ದಕ್ಷ್ಷಿಣ ಭಾರತದೇಶದ ಇಂಜಿನೀರಿAಗ್ ಕಾಲೇಜುಗಳಲ್ಲಿ ವಿಶಿಷ್ಠಸ್ಥಾನವನ್ನು ಪಡೆಯಲಾಗಿದೆ. ಗ್ಲೋಬಲ್ ಎಮಿನೆನ್ಸ್ 2021 ಪ್ರಶಸ್ತಿಯು ಅಧಿಕೃತಮಾನ್ಯತೆಯಾಗಿದ್ದು , ಅದು ಜಗತ್ತಿನಾದ್ಯಂತ ವಿಶ್ವಾಸಾರ್ಹ ಮತ್ತು ಮೌಲ್ಯಮಾಪನಗೋಳ್ಳಲಾಗುತ್ತದೆ.
ಇಂಜಿನೀರಿ0ಗ್ ಶಿಕ್ಷಣದ ಪ್ರಖ್ಯಾತ ತೀರ್ಪುಗಾರರು ಇರುವ ಮಂಡಳಿಯ ಸದಸ್ಯರು ಈ ಗ್ಲೋಬಲ್ ಎಮಿನೆನ್ಸ್ 2021 ಪ್ರಶಸ್ತಿಗೆ , ಇಂಜಿನೀರಿAಗ್ ಕಾಲೇಜನ್ನು ಆಯ್ಕೆ ಮಾಡುತ್ತಾರೆ.ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ ಆಡಳಿತಮಂಡಳಿಯ ಅಧ್ಯಕ್ಷರು ಅಲ್ಲಂ ಚನ್ನಪ್ಪ ಈ ಶುಭಸಂದರ್ಭದಲ್ಲಿ ಮಾತನಾಡುತ್ತಾ
“ದಕ್ಷಿಣ ಭಾರತದೇಶದ ಈ ಕಳ್ಯಾಣ ಕರ್ನಾಟಕ ಪ್ರದೇಶದ ನಮ್ಮ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ, ನಾಲ್ಕು ದಶಕಗಳಿಂದ ಹೆಸರಾಂತ ಈ ಮಹಾವಿದ್ಯಾಲಯದಿಂದ ಸಾವಿರಾರು ವಿದ್ಯಾರ್ಥಿಗಳು ಗುಣಮಟ್ಟದ ತಾಂತ್ರಿಕ ಶಿಕ್ಷಣ ಪಡೆದು, ಇಂದು ದೇಶ ವಿದೇಶಗಳಲ್ಲಿ ಉನ್ನತಸ್ಥಾನದಲ್ಲಿದ್ದಾರೆ. ತಾಂತ್ರಿಕ ಬೆಳವಣಿಗೆಗಳನ್ನು , ಕಾಲಕ್ಕೆ ಉಪಯುಕ್ತ ವಾದ ಅನುಕೂಲತೆಗಳನ್ನು, ನವೀನ ಪದ್ದತಿಗಳನ್ನು ಅಳವಡಿಸಿ ಇಂದಿನ ಯುವ ವಿದ್ಯಾರ್ಥಿಗಳನ್ನು ಸುಸಜ್ಜಿತರಾಗಿಸುವುದರಲ್ಲಿ ತಯರಾಗಿಸಲು ಯಾವಾಗಲು ನಾವುಗಳು ಮುಂಚೂಣಿಯಲ್ಲಿರುತ್ತೇವೆ,” ಎಂದು ನುಡಿದರು.
ಪ್ರಾಂಶುಪಾಲರಾದ ಡಾ|| ಟಿ. ಹನುಮಂತರೆಡ್ಡಿ, ಉಪಪ್ರಾಂಶುಪಾಲರಾದ ಡಾ|| ಸವಿತಾ ಸೊನೋಳಿ, ಡೀನ್ ಅಕಾಡಮಿಕ್ , ಡಾ||ಗಿರೀಶ.ಹೆಚ್, ಡೀನ್ -ಪರೀಕ್ಷಾ ವಿಭಾಗ ಡಾ||ಬಿ.ಶ್ರೀಪತಿ, ಎಲ್ಲಾ ವಿಭಾಗಳ ಮುಖ್ಯಸ್ಥರು, ಮಹಾವಿದ್ಯಾಲಯದ ಸಕಲ ಸಿಬ್ಬಂದಿಯವರಿಗೆ ಈ ಗ್ಲೋಬಲ್ ಎಮಿನೆನ್ಸ್ 2021 ಪ್ರಶಸ್ತಿಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ವೀ.ವಿ.ಸಂಘದ - ವೀ.ವಿ.ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನ ಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್ ಗೌಡರು ಶುಭಹಾರೈಸಿದರು.

0 Comments