Ticker

6/recent/ticker-posts

Ad Code

Responsive Advertisement

ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಶ್ರೀಕಾಂತ್ ರವರಿಗೆ "ಸಾಮಾಜಿಕ ಪ್ರಶಸ್ತಿ-2021" ಪ್ರಶಸ್ತಿ

ಶಿವಮೊಗ್ಗ : ಸಮಾಜ ಸೇವೆಯೇ ನನ್ನ ಧರ್ಮ, ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಯಾವ ಸ್ವಜಪಕ್ಷಪಾತವಿಲ್ಲದೆ ಅಸಾಹಯಕರ ಸಮಸ್ಯೆಗೆ ಸ್ಪಂದಿಸುವುದರಲ್ಲಿ ಆತ್ಮತೃಪ್ತಿ ಇದೆ ಎಂದು ಜೆಡಿಎಸ್ ರಾಜ್ಯಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ರವರು ಹೇಳಿದರು.

ಅವರು ಸೋಮವಾರ ನಗರದ ಹೋಟೆಲ್ ಶುಭಂ ಸಭಾಂಗಣದಲ್ಲಿ "ಜೆಸಿಐ ಶಿವಮೊಗ್ಗ ಶರಾವತಿ" ಘಟಕದಿಂದ ಹಮ್ಮಿಕೊಳ್ಳಲಾಗಿದ್ದ "ಸಾಮಾಜಿಕ ಪ್ರಶಸ್ತಿ-2021" ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಎರಡು ಭಾರಿ ಅಸೆಂಬ್ಲಿ ಚುನಾವಣೆಯಲ್ಲಿ ಸೋತಿದ್ದೇನೆ, ಒಂದು ಭಾರಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸೋತಿದ್ದೇನೆ, ನನ್ನ ಸೋಲು ಅದೊಂದು ತಾತ್ವಿಕವಷ್ಟೆ, ಆದರೆ ಕಳೆದ ಹದಿನೈದು ವರುಷಗಳಿಂದ ನೈತಿಕ ಸಾಮಾಜಿಕ ಸೇವೆ ಸೋತಿಲ್ಲ ಇನ್ನಷ್ಟು ವಿಸ್ತಾರಗೊಳ್ಳುತ್ತಿದೆ ಎಂದು ಮಾತೃಮನಸಿನಿಂದಲೇ ಎಂ.ಶ್ರೀಕಾಂತ್ ನುಡಿದರು.

ಮಲೆನಾಡಿನ ಹಬ್ಬಾಗಿಲಿಗೂ ನನಗೂ ಬಹಳವಾದ ನಂಟಿದೆ, ಇಲ್ಲಿನ ಜನತೆಯ ಬಗ್ಗೆ ಅಪಾರವಾದ ನಂಬಿಕೆ ಇದೆ ಅದು ಎಂದಿಗೂ ಹುಸಿ ಮಾಡುವುದಕ್ಕೆ ಬಿಡುವುದಿಲ್ಲ, ಸೋಲಿನ ಮೆಟ್ಟಿಲುಗಳ ಮೇಲೆಯೇ ಜನರೊಂದಿಗೆ ಇರುತ್ತೇನೆ, ಜೀವಪರ ನಿಲುವು ಗಟ್ಟಿಯಾಗಿದೆ,

ಕೇವಲ ಚುನಾವಣೆಯ ನೆಪಮಾತ್ರದಿ ಜನರನ್ನು ಹಾದಿ ತಪ್ಪಿಸುವ ಮಾತಿಲ್ಲ, ಇಂದಿಗೂ ಅಂತಹದೊಂದು ಸಣ್ಣ ವಿವಾದಿತ ಹೇಳಿಕೆಗಳನ್ನು ನೀಡಿಲ್ಲ, ಸೇವೆಯೇ ಮನೋಧರ್ಮ. ಕಷ್ಟವನ್ನು ನೋಡಿದ್ದೇನೆ ಸಂಕಟಗಳಲ್ಲಿದ್ದವರಿಗೆ ನೆರವಾಗುತ್ತೇನೆ, ಸರಿ ಸುಮಾರು ಶೇಕಡ 80% ಯಾವ ಸೇವೆಗಳು ಬೆಳಕಿಗೆ ತಂದಿಲ್ಲ, ಆದರೂ ಜನಸಮುದಾಯ ಸೇವಾಭೂಮಿಕೆಯಲ್ಲಿ ಬಹಳವಾಗಿ ಒಪ್ಪಿದೆ ಎಂದು ಎಂ.ಶ್ರೀಕಾಂತ್ ತಿಳಿಸಿದರು.
ಮೊದ ಮೊದಲು ಶಿವಮೊಗ್ಗ ಜಾತ್ಯಾತೀತ ನೆಲೆಯೇ ಆಗಿತ್ತು, ಚಳುವಳಿಗಳ ಕಟ್ಟಿ ಬೆಳೆಸಿದ ಸಮಾಜವಾದಿ ಚಿಂತನೆಗಳಿತ್ತು, ಆದರೆ ನಡುವೆ ವಿಷದ ಭಾವನೆಗಳು ಜನರಲ್ಲಿ ತುಂಬಿದ್ದಾರೆ, 2023ಕ್ಕೆ ಮೂಲ ಚಿಂತನೆಗಳಿಗೆ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಕ್ರಾಂತಿ ಬದಲಾವಣೆಯಾಗಲಿದೆ, ಅದಾಗಲೇ ಪ್ರತಿ ಸೂರಿನ ಜಗುಲಿಗಳಿಗೆ ಸಾಮಾಜಿಕ ನ್ಯಾಯ ಕಟ್ಟಿಟ್ಟ ಬುತ್ತಿ ಎಂದು ಸಮಾಜಮುಖಿಯಾಗಿ ಎಂ.ಶ್ರೀಕಾಂತ್ ಹೇಳಿದರಲ್ಲದೆ. ಜೆಸಿಐ ಶಿವಮೊಗ್ಗ ಶರಾವತಿ ಘಟಕ "ಸಾಮಾಜಿಕ ಪ್ರಶಸ್ತಿ-2021" ನೀಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಅವರು ವಿವರಿಸಿದರು.
ಸಮಾರಂಭದಲ್ಲಿ ಎಂ.ಶ್ರೀಕಾಂತ್ ರವರಿಗೆ "ಸಾಮಾಜಿಕ ಪ್ರಶಸ್ತಿ-2021" ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರಾದ ಜೆಸಿ.ಹೆಚ್ ಜಿ ಎಫ್ ಮೋಹನ್ ಕಲ್ಪತರು, ಸ್ಥಾಪಕ ಅಧ್ಯಕ್ಷರಾದ ಜೆಸಿ. ಜ್ಯೀತಿ ಅರಳಪ್ಪ, ಐಪಿಪಿ, ಜೆಸಿ. ಗಾರಾ.ಶ್ರೀನಿವಾಸ್, ಕಾರ್ಯದರ್ಶಿ. ಜೆಸಿ.ಮಮತಾ ಶಿವಣ್ಣ ಉಪಸ್ಥಿತರಿದ್ದರು.
ಹಾಗೂ ಘಟಕರ ಎಲ್ಲಾ ಜೆಸಿ ಸದಸ್ಯರುಗಳು ಸಲಹಾ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement