Ticker

6/recent/ticker-posts

Ad Code

Responsive Advertisement

ಸಚಿವ ಗೋಪಾಲಯ್ಯ ಮಾರ್ಗದರ್ಶನದಲ್ಲಿ 101 ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್

ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರ ಮಾರ್ಗದರ್ಶನದಲ್ಲಿ ಕ್ರಿಭಾ ಫೌಂಡೇಶನ್ ಸಹಯೋಗದೊಂದಿಗೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿ ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್, ಬೀಯಿಂಗ್ ಸೋಶಿಯಲ್ ಹಾಗೂ ವಿವೇಕ ಚೇತನ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊರೋನಾವೈರಸ್ ನಿಂದಾಗಿ ಸಂಕಷ್ಟಕ್ಕೊಳಗಾಗಿರುವ ಮಂಜುನಾಥನಗರದ 101 ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿ ಕಿಟ್ ಗಳನ್ನು ವಿತರಿಸಲಾಯಿತು.

ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲೆ 317ಎ ಉಪರಾಜ್ಯಪಾಲರಾದ ಲಯನ್ ಡಾ. ಶ್ರೀವಿದ್ಯಾ ಮಾತನಾಡಿ ಈ ದಿನ ವಿವೇಕಾನಂದ ರವರ ಪುಣ್ಯ ಸ್ಮರಣೆ ಅಂಗವಾಗಿ  ಬಡ ಕುಟುಂಬಗಳಿಗೆ ದಿನಸಿ ವಿತರಿಸುತ್ತಿರುವುದು ನಿಜಕ್ಕೂ ಸಂತಸದ ವಿಷಯ.  ವಿವೇಕಾನಂದರವರು ಹೇಳಿದ ಹಾಗೆ "ಅವಕಾಶ ಸಿಕ್ಕಾಗ ಅವಕಾಶವನ್ನು ಬಳಸಿಕೊಳ್ಳಬೇಕು ಹಾಗೂ ಅವಕಾಶ ಸಿಗದಿದ್ದಾಗ ಅವಕಾಶವನ್ನು ಹುಡುಕಿ ಕೆಲಸವನ್ನು ಮಾಡಬೇಕು" ಎಂಬಂತೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾಸಿಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಅವರು ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿರುವ ಸಾವಿರಾರು ಬಡ ಕುಟುಂಬಗಳಿಗೆ ದಿನಸಿ ವಿತರಿಸುತ್ತಿರುವುದು, ಹಸಿದವರಿಗೆ ಮಧ್ಯಾಹ್ನದ ಊಟ ನೀಡುವುದು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. 


ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಮೇಗಾಸಿಟಿ ಅಧ್ಯಕ್ಷರಾದ ಲಯನ್ ಕೆ. ಕೃಷ್ಣಮೂರ್ತಿ, ಹಿರಿಯ ಪತ್ರಕರ್ತರಾದ ರವಿದಾಸ್ ಬಿಂಡಿಗನವಿಲೆ, ನಾದ ವರ್ಲ್ಡ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷರಾದ ಪ್ರಶಾಂತ್ ರಾಯಬಾಗಿ, ಕ್ರಿಭಾ ಫೌಂಡೇಶನ್ ಅಧ್ಯಕ್ಷರಾದ ಶಮಂತ್ ಕೃಷ್ಣಮೂರ್ತಿ, ಭಾರತಿ ಕೃಷ್ಣಮೂರ್ತಿ, ಲಯನ್ ಸಂದೇಶ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೇಗಾ ಸಿಟಿ ಹಾಗೂ ಬೀಯಿಂಗ್ ಸೋಶಿಯಲ್ ನ ಎಲ್ಲ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.



Post a Comment

0 Comments

Ad Code

Responsive Advertisement