Ticker

6/recent/ticker-posts

Ad Code

Responsive Advertisement

WORLD YOGA DAY : BELLARY : ವಿಶೇಷ ಚಿತ್ರಾತ್ಮಕ ಮುದ್ರೆ ಬಿಡುಗಡೆ-ಅಂಚೆ ಅಧೀಕ್ಷ ಮಹಾದೇವಪ್ಪ

 *ಅಂಚೆ ಇಲಾಖೆಯಿಂದ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ

ಜೂ.21ರಂದು ವಿಶೇಷ ಚಿತ್ರಾತ್ಮಕ ಮುದ್ರೆ ಬಿಡುಗಡೆ-ಅಂಚೆ ಅಧೀಕ್ಷರು ಮಹಾದೇವಪ್ಪ.*


ಬಳ್ಳಾರಿ,ಜೂ.18: ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಭಾರತೀಯ ಅಂಚೆ ಇಲಾಖೆಯ ವತಿಯಿಂದ ಜೂ.21 ರಂದು ಬಳ್ಳಾರಿ ಮತ್ತು ಹೊಸಪೇಟೆ ಪ್ರಧಾನ ಅಂಚೆ ಕಚೇರಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಕುರಿತಾದ ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಒತ್ತುವ ಮೂಲಕ ಸಾರ್ವಜನಿಕರಲ್ಲಿ ಯೋಗದ ಬಗ್ಗೆ ಅರಿವು ಮೂಡಿಸಲಾಗುತ್ತದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷರು ಮಹಾದೇವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅವಳಿ ಜಿಲ್ಲೆಗಳ ಪ್ರಧಾನ ಅಂಚೆ ಕಚೇರಿಯಲ್ಲಿ ಸ್ವೀಕೃತವಾಗುವ ಮತ್ತು ಬಟವಾಡೆಯಾಗುವ ಎಲ್ಲಾ ಅಂಚೆ ಪತ್ರಗಳ ಮೇಲೆ ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಒತ್ತುವ ಮೂಲಕ ಅರಿವು ಮೂಡಿಸಲಾಗುತ್ತದೆ. ಅಂಚೆ ಚೀಟಿ ಸಂಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಅವರು ತಿಳಿಸಿದ್ದಾರೆ.


Post a Comment

0 Comments

Ad Code

Responsive Advertisement