ಮಧುಗಿರಿ :ತಾಲೂಕಿನ ಮಿಡಿಗೇಶಿ ಹೋಬಳಿಯ ನೇರಳೇಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರತಿ ಹಳ್ಳಿಗಳ ಮನೆಮನೆಗೂ ಬೇಟಿ ನಡೆಸಲಾಯಿತು. ಮನೆಮನೆಗೂ ಆರೋಗ್ಯ ಇಲಾಖೆಯ ಸೌಮ್ಯ ಮತ್ತು ತಂಡ ಜೊತೆಗೆ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ರಜನಿ ಕಂದಾಯ ಇಲಾಖೆಯ ಹೊನ್ನೇಶ್ ಸಕ್ರಿಯ ಕೋವಿಡ್ ಸೋಂಕಿತರ ಮನೆಗಳ ಬೇಟಿ ಮಾಡಿ ಅವರಿಗೆ ಆತ್ಮಸ್ಥೈರ್ಯ ಜೊತೆಗೆ ಪೌಷ್ಟಿಕ ಆಹಾರ ಸೇವನೆ ಕುರಿತು ಶಿಕ್ಷಣ ನೀಡಲಾಯಿತು. ಇತರರ ಮನೆಮನೆಗೂ ತೆರಳಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ಪಡೆಯಲು ತಿಳಿಸಿ ಲಸಿಕೆಯನ್ನು ಕೂಡ ಮಾಡಲಾಯಿತು. ಮಾಸ್ಕ್ ದರಿಸುವುದು ಮತ್ತು ದೈಹಿಕ ಅಂತರ ಕಾಯ್ದುಕೊಂಡು ಜೀವನ ನಡೆಸಲು ಸಾರ್ವಜನಿಕರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗ್ರಾ.ಪಂ ಸದಸ್ಯರಾದ ರಾಜಶೇಖರ್, ಮಣಿಯಮ್ಮ ಇತರೆ ಸದಸ್ಯರುಗಳು ಹಾಗೂ ಗ್ರಾ.ಪಂ.ಸಿಬ್ಬಂದಿ ಮತ್ತಿತರರಿದ್ದರು.


0 Comments