ಮಧುಗಿರಿ: ತಾಲೂಕಿನಲ್ಲಿ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ಶಾಲೆಗೆ ರಜೆ ಇದೆ ಎಂದು ಸುಮ್ಮನೆ ಕೂರದೆ ಸುಮಾರು 12 ವರ್ಷದ ವಿಧ್ಯಾರ್ಥಿ ಸುಮಾರು 3 ಸಾವಿರಕ್ಕೂ ಹೆಚ್ಚು ಮಾಸ್ಕ್ ಗಳನ್ನು ತಯಾರಿಸಿ ತನ್ನ ಹುಟ್ಟು ಹಬ್ಬಕ್ಕೆ ಗ್ರಾಮಗಳಲ್ಲಿ ಉಚಿತವಾಗಿ ವಿತರಿಸುವ ಮೂಲಕ ಇತರರಿಗೆ ಮಾಧರಿಯಾಗಿದ್ದಾಳೆ.
ತಾಲೂಕಿನ ಪುರವರ ಗ್ರಾಮದ ಶ್ರೀದೇವಿ ಹಾಗು ರಾಮಚಂದ್ರಪ್ಪ ದಂಪತಿಯ ಪುತ್ರಿ ವೈಷ್ಣವಿ (12) ತನ್ನ ಅಕ್ಕ ಭಾವನ ಮತ್ತು ತಾಯಿ ಸಹಕಾರದಿಂದ ಬಿಡುವಿನ ವೇಳೆಯಲ್ಲಿ ಮಾಸ್ಕ್ ತಯಾರಿಸಿದ್ದು ಎಸ್ .ಬಿ.ಐ ಬ್ಯಾಂಕ್, ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 3 ಸಾವಿರ ಮಾಸ್ಕ್ ಗಳನ್ನು ವಿತರಿಸಿದ್ದಾಳೆ. 7ನೇ ತರಗತಿ ಸರಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಓದುತ್ತಿರುವ ವಿಧ್ಯಾರ್ಥಿನಿಯ ಕಾಳಜಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿದ್ದು,
ಏಳನೇ ತರಗತಿ ಓದುತ್ತಿರುವ ವೈ಼ಷ್ಣವಿ ಮತ್ತು ಆಕೆ ಅಕ್ಕ ಭಾವನ ಇಬ್ಬರು ಸೇರಿ ಪ್ರತಿ ದಿನ ಮನೆಯಲ್ಲಿ ಮಾಸ್ಕ್ ತಯಾರಿದ್ದು ಇದಕ್ಕೆಲ್ಲಾ ಪ್ರೇರಣೆ ತನ್ನ ಪೋಷಕರೇ ಎನ್ನುತ್ತಾರೆ. ಕಳೆದ ಒಂದು ವಾರದ ಹಿಂದೆ ಕೋಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಜನ ಸ್ನೇಹಿ ವೈಧ್ಯಾಧಿಕಾರಿ ಡಾ.ರವಿ ಯವರನ್ನು ಸರಕಾರ ಬೇರೆಡೆ ವರ್ಗಾವಣೆ ಮಾಡಿದ್ದು ಇಂತಹ ಜನ ಸ್ನೇಹಿ ಅಧಿಕಾರಿಯನ್ನು ಗ್ರಾಮೀಣಾ ಭಾಗದಲ್ಲೇ ಉಳಿಸುವಂತೆ ಈ ಬಾಲಕಿಯರು ಒತ್ತಾಯಿಸಿದ್ದಾರೆ.
ಬಹುತೇಕ ವೈದ್ಯರು ಗ್ರಾಮೀಣಾ ಪ್ರದೇಶದಲ್ಲಿ ಕರ್ತವ್ಯ ಮಾಡಲು ಇಚ್ಛಿಸುವುದಿಲ್ಲಾ ಇಂತಹ ಸ್ಥಿತಿಯಲ್ಲಿ ಕೋಡ್ಲಾಪುರ ಮತ್ತು ಪುರವರ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸಲು ಡಾ.ರವಿ ಅವರು ತುಂಬ ಶ್ರಮಿಸಿದ್ದು ನಮಗೆ ಇಂತಹ ವೈಧ್ಯರು ಮತ್ತೆ ಸಿಗುವುದಿಲ್ಲ ಇಲ್ಲಿನ ವೈಧ್ಯರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡದಂತೆ ಮುಖ್ಯಂತ್ರಿಯವರಿಗೆ ಪತ್ರದ ಮೂಲಕ ಮನವಿ ಮಾಡುತ್ತೇವೆ ಎಂದು ವೈ಼ಷ್ಣವಿ ಮತ್ತು ಭಾವನ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೋಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ನೂತನ ವೈಧ್ಯಾಧಿಕಾರಿ ಡಾ.ಸಂದೀಪ್, ಡಾ.ರವಿ, ಸಾಮಾಜಿಕ ಕಾರ್ಯಕರ್ತರಾದ ಪ್ರಸನ್ನ ಬಾಬು, ವಿಕಾಸ್, ರಾಮಚಂದ್ರ ಹಾಗೂ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು
clickhere to read :
ವಿದ್ಯಾರ್ಥಿಗಳು, ಶಿಕ್ಷಕರಿಗೆ ಲಸಿಕೆ ನೀಡಿದ ಬಳಿಕ ಕಾಲೇಜು ಆರಂಭ


0 Comments