Ticker

6/recent/ticker-posts

Ad Code

Responsive Advertisement

icps.karnataka: ಪೋಷಕರ ಕಳೆದುಕೊಂಡ ಮಕ್ಕಳ ಪೋಷಣೆಗೆ ಅರ್ಜಿ ಆಹ್ವಾನ

 ಬೆಂಗಳೂರು:

ಈಚೆಗೆ ಕೋರೋನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಘಟನೆಗಳು ಸಾಕಷ್ಟು ಘಟಿಸಿವೆ. ಅಂತೆಯೇ, ಹದಿನೆಂಟು ವರ್ಷದೊಳಗಿನ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬಾಲಹಿತೈಷಿ ಯೋಜನೆಯಡಿ ಮಕ್ಕಳನ್ನು ಬೆಳೆಸಲು ಉತ್ಸುಕರಾದವರಿಂದ ಅರ್ಜಿ ಕರೆಯಲಾಗಿದೆ. ತಂದೆ, ತಾಯಿ ಇಬ್ಬರು ಪೋಷಕರನ್ನು ಅಥವಾ ಪೋಷಕರನ್ನೇ ಆಗಲಿ ಕಳೆದುಕೊಂಡು ಮಾನಸಿಕ ಅಘಾತಕ್ಕೆ ಒಳಗಾಗಿರುವ ಮಕ್ಕಳನ್ನು ಅದರಿಂದ ಹೊರತರುವುದು ಈ ಯೋಜನೆಯ ಉದ್ದೇಶ.


ಮಕ್ಕಳನ್ನು ಬೆಳೆಸಲು ಉತ್ಸುಕರಾದವರು ದೀರ್ಘಕಾಲಿಕವಾಗಿ ಶೈಕ್ಷಣಿಕ, ಸಾಮಾಜಿಕವಾಗಿ ಸಾಮಥ್ರ್ಯ ಸಾಧಿಸಲು ಸಹಾಯ ಮಾಡಲು ಮತ್ತು ಮಾರ್ಗದರ್ಶನ ನೀಡಲು ಆಸಕ್ತಿ ಹೊಂದಿರಬೇಕು. ನೋಂದಣಿಗೆ ಅರ್ಜಿ ನಮೂನೆಯು ಮಕ್ಕಳ ರಕ್ಷಣಾ ನಿರ್ದೇಶನಾಲಯದ ವೆಬ್‍ಸೈಟ್ http://icps.karnataka.gov.in  ನಲ್ಲಿ ಲಭ್ಯವಿದ್ದು, ಇಚ್ಛೆಯುಳ್ಳ ಮಾರ್ಗದರ್ಶಕರು ಈ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು.

ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ ದೂರವಾಣಿ ಸಂಖ್ಯೆ 08029560034, ಮೊಬೈಲ್ ಸಂಖ್ಯೆ 8095951304, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮೊಬೈಲ್ ಸಂಖ್ಯೆ 8496042939, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ಆಪ್ತ ಸಮಾಲೋಚನಾ ಸಂಖ್ಯೆ 14499, ಮಕ್ಕಳ ಸಹಾಯವಾಣಿ ಸಂಖ್ಯೆ: 1098 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.



Post a Comment

0 Comments

Ad Code

Responsive Advertisement