Ticker

6/recent/ticker-posts

Ad Code

Responsive Advertisement

BREAKING : ನಗರಾಭಿವೃದ್ಧಿ ಸಚಿವರ ಹುಬ್ಬಳ್ಳಿ- ಧಾರವಾಡ ನಗರ ಪ್ರದಕ್ಷಿಣೆ; ಕಾಮಗಾರಿಗಳ ವೀಕ್ಷಣೆ

 ನಗರಾಭಿವೃದ್ಧಿ ಸಚಿವರಾದ ಶಿವರಾಜ್ ಬಿ.ಎ.ಬಸವರಾಜ ಅವರು ದಿನಾಂಕ 30-6-2021 ರ ಬುಧವಾರ ಬೆಳಿಗ್ಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ತಿಳಿಯಲು ನಗರದಲ್ಲಿ ಸಂಚರಿಸಿ ಖುದ್ದಾಗಿ ಪರಿಶೀಲಿಸಿದರು.

ಇಂದು ಮುಂಜಾನೆ 6.30 ಆರಂಭವಾದ ಸಚಿವರ ನಗರ ಪ್ರದಕ್ಷಿಣೆ.... ತೋಳನ ಕೆರೆ, ರೇಣುಕಾ ನಗರ, ಬೆಂಗೇರಿ ಮಾರುಕಟ್ಟೆ, ಜನತಾ ಬಜಾರ್, ಮೀನು ಮಾರುಕಟ್ಟೆ, ಮಂಟೂರು ರಸ್ತೆ, ಪಾಲಿಕೆ ವತಿಯಿಂದ ನಿರ್ಮಾಣವಾಗುತ್ತಿರುವ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆ, ಮಹಾತ್ಮ ಗಾಂಧಿ ಉದ್ಯಾನದ ನವೀಕರಣ ಸೇರಿದಂತೆ ಹಲ ಕಾಮಗಾರಿಗಳ ವೀಕ್ಷಣೆ ಜೊತೆ ಪ್ರಗತಿ ಬಗ್ಗೆ ಮಾಹಿತಿ ಪಡೆದರು.



ಪಾಲಿಕೆ ಅಯುಕ್ತ  ಸುರೇಶ್ ಹಿಟ್ನಾಳ್, ಸ್ಮಾರ್ಟ್ ಸಿಟಿ ಎಂ.ಡಿ ಸೇರಿದಂತೆ ಅಧಿಕಾರಿ ವರ್ಗದವರು ಇದೇ ವೇಳೆ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement