Ticker

6/recent/ticker-posts

Ad Code

Responsive Advertisement

ಸಿ.ಡಿ. ಲೇಡಿಯಿಂದ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ

 

‘ಸಿ.ಡಿ ಬಹಿರಂಗೊಂಡ ಸಂದರ್ಭದಲ್ಲಿ ಅದೊಂದು ತಿರುಚಿದ ವಿಡಿಯೊ, ಸಿ.ಡಿಯಲ್ಲಿರುವ ಯುವತಿಗೂ ತನಗೂ ಸಂಬಂಧ ಇಲ್ಲ ಎಂದು ತಿಳಿಸಿದ್ದ ಜಾರಕಿಗೊಳಿ, 2021ರ ಮಾ.13ರಂದು ದೂರು ದಾಖಲಿಸಿದ್ದರು. ಮಾ.9ರಂದು ಗೃಹ ಸಚಿವರಿಗೆ ಜಾರಕಿಹೊಳಿ ಪತ್ರವನ್ನೂ ಬರೆದಿದ್ದರು. ಅದನ್ನು ಆಧರಿಸಿ, ಗೃಹ ಸಚಿವರ ಸೂಚನೆ ಯಂತೆ ನಗರ ಪೊಲೀಸ್ ಆಯುಕ್ತರು ಮಾ.11ರಂದೇ ಎಸ್‌ಐಟಿ ರಚಿಸಿದ್ದಾರೆ. ಇದನ್ನು ಗಮನಿಸಿದರೆ ಜಾರಕಿಹೊಳಿ ಎಷ್ಟು ಪ್ರಭಾವಿ ಎಂಬುದು ಗೊತ್ತಾಗುತ್ತದೆ. ಎಸ್‌ಐಟಿ ಕೂಡ ಪ್ರಭಾವಕ್ಕೆ ಒಳಗಾಗಿದೆ ಎಂಬುದು ತಿಳಿಯುತ್ತದೆ’ ಎಂದು ಸಂತ್ರಸ್ತೆ ಅರ್ಜಿಯಲ್ಲಿ ದೂರಿದ್ದಾರೆ.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರು, ಎಸ್‌ಐಟಿ ಮತ್ತು ರಮೇಶ ಜಾರಕಿಹೊಳಿ ಅವರಿಗೆ ತುರ್ತು ನೋಟಿಸ್ ನೀಡಲು ಆದೇಶಿಸಿ ವಿಚಾರಣೆಯನ್ನು ಜೂ.೨೧ಕ್ಕೆ ಮುಂದೂಡಿತು. 

‘ದೂರು ದಾಖಲಿಸಿ 70 ದಿನಗಳ ಬಳಿಕ ಸಿ.ಡಿಯಲ್ಲಿರುವುದು ನಾನೇ ಎಂದು ರಮೇಶ ಜಾರಕಿಹೊಳಿ ಎಸ್‌ಐಟಿ ಮುಂದೆ ಒಪ್ಪಿಕೊಂಡಿದ್ದಾರೆ. ಒಪ್ಪಿತ ಲೈಂಗಿಕ ಕ್ರಿಯೆ ನಡೆಸಲಾಗಿದೆ ಎಂದೂ ತಿಳಿಸಿದ್ದಾರೆ. ಸಿ.ಡಿ ಬಹಿರಂಗ ಆದಾಗ ನೀಡಿದ ಹೇಳಿಕೆ ಮತ್ತು ನಂತರ ನೀಡಿದ ಹೇಳಿಕೆ ತದ್ವಿರುದ್ಧವಾಗಿವೆ. ಅತ್ಯಾಚಾರ ಆರೋಪ ಪ್ರಕರಣದ ತನಿಖೆಯಿಂದ ತಪ್ಪಿಸಿಕೊಳ್ಳಲು ಹೊಸ ಕಥೆಗಳನ್ನು ಅವರು ಕಟ್ಟುತ್ತಿದ್ದಾರೆ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

ಷಡ್ಯಂತ್ರ ನಡೆಸಿ ಸಿ.ಡಿ ಬಹಿರಂಗಪಡಿಸಲಾಗಿದೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ದಾಖಲಿಸಿರುವ ಎಫ್‌ಐಆರ್ ಪ್ರಶ್ನಿಸಿ, ಈ ಪ್ರಕರಣದ ಸಂತ್ರಸ್ತೆ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

Post a Comment

0 Comments

Ad Code

Responsive Advertisement