Ticker

6/recent/ticker-posts

Ad Code

Responsive Advertisement

ಬಿಐಟಿ ಸಂಸ್ಥೆಯಿಂದ ಉಚಿತ ಸಿಇಟಿ ಕೋಚಿಂಗ್ ತರಬೇತಿ

ಬೆಂಗಳೂರು,  ಜೂನ್ 30  (ಕರ್ನಾಟಕ ವಾರ್ತೆ):   ಬೆಂಗಳೂರು ತಾಂತ್ರಿಕ ಮಹಾವಿದ್ಯಾಲಯವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಣುಕು ಸಿಇಟಿ  ಪರೀಕ್ಷೆಗಳ ಅನುಕೂಲಕ್ಕಾಗಿ  ಆಗಸ್ಟ್ -2021 ರಲ್ಲಿ ನಡೆಯಲಿರುವ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಉಚಿತ ಆನ್‍ಲೈನ್ ತರಬೇತಿಯನ್ನು ಜುಲೈ 05 ರಿಂದ  30 ದಿನಗಳ ತರಗತಿಯನ್ನು ನಡೆಸಲಾಗುವುದು.
ಕೋಚಿಂಗ್ ಕೊನೆಯಲ್ಲಿ 3 ಸುತ್ತುಗಳ ಅಣುಕು ಪರೀಕ್ಷೆ ನಡೆಸಲಾಗುವುದು, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಕೋಚಿಂಗ್ ಪಡೆಯಲು ಸಾಧ್ಯವಾಗದ ಕಾರಣ ಅವರಿಗೆ ಸರಿಯಾದ ಮಾರ್ಗದರ್ಶನ  ನೀಡಲು ಈ ಪ್ರಯತ್ನ ಮಾಡಲಾಗಿದೆ. ಈ ಕೋಚಿಂಗ್ ಕಾಮೆಡ್-ಕೆ ಪರೀಕ್ಷೆಗಳಿಗೂ ಸಹಕಾರಿಯಾಗಲಿದೆ.
ಹೆಚ್ಚಿನ ವಿವರಗಳಿಗಾಗಿ ವೆಬ್‍ಸೈಟ್ ವಿಳಾಸ:  https://bit-bangalore.edu.in  ಹಾಗೂ ನೋಂದಣಿಗಾಗಿ https://forms.gle/UEkvF5Phh1zpXQV5A    ನ್ನು ಸಂಪರ್ಕಿಸಬಹುದಾಗಿದೆ  ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement