Ticker

6/recent/ticker-posts

Ad Code

Responsive Advertisement

ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳಿಗೆ "ವ್ಯಾಕ್ಸಿನೇಷನ್ ಪಾಸ್‌ಪೋರ್ಟ್" ನೀಡಲು ಯುರೋಪಿಯನ್ ಒಕ್ಕೂಟ ಹಿಂಜರಿಕೆ

 


ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳಿಗೆ "ವ್ಯಾಕ್ಸಿನೇಷನ್ ಪಾಸ್‌ಪೋರ್ಟ್" ನೀಡಲು ಯುರೋಪಿಯನ್ ಒಕ್ಕೂಟ ಹಿಂಜರಿಯುತ್ತಿದ್ದು, ಇದಕ್ಕೆ ಭಾರತ ತಿರುಗುತ್ತರ ನೀಡಿದೆ. ಯುರೋಪ್ ದೇಶಗಳಿಂದ ಬರುವವರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡುವ ವಿಷಯದಲ್ಲಿ ಭಾರತ ಕೂಡ ಇದೇ ನೀತಿ ಅನುಸರಿಸಲು ಪ್ರಾರಂಭಿಸುತ್ತದೆ ಎಂದು ಹೇಳಿರುವುದಾಗಿ ವಿದೇಶಾಂಗ ಸಚಿವಾಲಯ ಮೂಲಗಳು ತಿಳಿಸಿವೆ.

ಯುರೋಪಿಯನ್ ಮೆಡಿಸನ್ಸ್ ಏಜೆನ್ಸಿ ಅನುಮೋದಿಸಿದ ಲಸಿಕೆಗಳಿಗೆ ಮಾತ್ರ ಅಲ್ಲಿ ವ್ಯಾಕ್ಸಿನ್ ಪಾಸ್‌ಪೋರ್ಟ್ ನೀಡಲಾಗಿದೆ. ಫೈಜರ್, ಮಾಡೆರ್ನಾ, ಆಸ್ಟ್ರಾಜೆನೆಕಾ ಹಾಗೂ ಜಾನ್ಸನ್ ಲಸಿಕೆ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆದರೆ ಆಸ್ಟ್ರಾಜೆನೆಕಾದ ಭಾರತೀಯ ಆವೃತ್ತಿಯಾಗಿರುವ ಕೋವಿಶೀಲ್ಡ್‌ಗೂ ಅನುಮತಿ ನೀಡಿಲ್ಲ.

ಯುರೋಪಿಯನ್ ಒಕ್ಕೂಟಗಳು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ ಪ್ರಮಾಣಪತ್ರಗಳನ್ನು ಸ್ವೀಕರಿಸಿದ ಹೊರತು, ಯುರೋಪಿಯನ್ ಒಕ್ಕೂಟದ ಜನರು ಭಾರತಕ್ಕೆ ಬಂದರೆ ಅವರಿಗೂ ಕಡ್ಡಾಯವಾಗಿ ಕ್ವಾರಂಟೈನ್ ವಿಧಿಸಲಾಗುವುದು ಎಂದು ಎಚ್ಚರಿಸಿರುವುದಾಗಿ ತಿಳಿದುಬಂದಿದೆ.

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯು ಡಿಜಿಟಲ್ ಕೋವಿಡ್ ಪ್ರಮಾಣಪತ್ರ ಹೊಂದಿರಬೇಕು ಎಂದಿರುವ ಯುರೋಪಿಯನ್ ಒಕ್ಕೂಟಗಳು, ಹೊಸ "ಗ್ರೀನ್ ಪಾಸ್" ಯೋಜನೆಯಡಿ ಕೋವಿಶೀಲ್ಡ್ ಲಸಿಕೆ ಪಡೆದ ಜನರಿಗೆ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ಪ್ರಯಾಣಿಸಲು ಅನುಮತಿ ನೀಡಿಲ್ಲ.

ಮಂಗಳವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಇಯು ಉನ್ನತ ಅಧಿಕಾರಿಗಳೊಂದಿಗೆ ಕೋವಿಶೀಲ್ಡ್ ಲಸಿಕೆಯನ್ನು ವ್ಯಾಕ್ಸಿನೇಷನ್ ಪಾಸ್‌ಪೋರ್ಟ್‌ಗೆ ಸೇರಿಸುವ ವಿಷಯದ ಕುರಿತು ಪ್ರಸ್ತಾಪಿಸುವುದಾಗಿ ತಿಳಿಸಿದ್ದರು. ಲಸಿಕೆಗೆ ಅನುಮತಿ ನೀಡುವ ಕುರಿತು ಚರ್ಚಿಸಲಾಗಿದೆ. ಯುರೋಪಿಗೆ ಪ್ರಯಾಣಿಸಲು ಕೋವಿಶೀಲ್ಡ್ ಅನುಮತಿ ಪಡೆಯಲಿದೆ ಎಂದು ಟ್ವೀಟ್ ಮಾಡಿದ್ದರು.

ಇಎಂಎ ಅನುಮೋದನೆ ಇಲ್ಲದೇ ಕೋವಿಶೀಲ್ಡ್ ಆಮದು ಮಾಡಿಕೊಳ್ಳುವ ರಾಷ್ಟ್ರಗಳು ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭಾರತದ ಕೋವ್ಯಾಕ್ಸಿನ್ ಕೂಡ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆಗಾಗಿ ಕಾಯುತ್ತಿದೆ.

Post a Comment

0 Comments

Ad Code

Responsive Advertisement