ಬೆಂಗಳೂರು, ಜೂನ್ 19 ( ಕರ್ನಾಟಕ ವಾರ್ತೆ ) : ಅಂತಃಕರಣವನ್ನು ಅಕ್ಷರವನ್ನಾಗಿಸಿದ ಸಂತ ಕ್ರಾಂತಿಕಾರಿ ಹಾಡುಗಳ ಜನಕ, ಜನ ಸಂಸ್ಕøತಿ ಹರಿಕಾರ, ನೊಂದವರ ಕವಿ, ಬಡವರ ನಗುವಿನ ಶಕ್ತಿ ಶ್ರೇಷ್ಠ ಚಿಂತಕ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯರಾದ ದಿವಂಗತ ನಾಡೋಜ ಡಾ. ಸಿದ್ದಲಿಂಗಯ್ಯ ಅವರ ಸ್ಮರಣೆಯನ್ನು ಜೂನ್ 21, 2021ರಂದು ಬೆಂಗಳೂರು ವಿಶ್ವವಿದ್ಯಾಲಯದ ಹಿಂಭಾಗ ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.00 ಗಂಟೆಗೆ ಡಾ. ಸಿದ್ದಲಿಂಗಯ್ಯರವರ ಸಮಾಧಿಗೆ ಪುಷ್ಪ ನಮನ, ಬುದ್ಧ ವಂದನೆ ಮತ್ತು ಸಸಿ ನೆಡುವ ಕಾರ್ಯಕ್ರಮ, 12.30 ಗಂಟೆಗೆ ಕಾವ್ಯ ನಮನ - ಡಾ. ಸಿದ್ದಲಿಂಗಯ್ಯ ಅವರು ಬರೆದ ಆಯ್ದ ಕವಿತೆಗಳ ಕಾವ್ಯ ವಾಚನ, ಮಧ್ಯಾಹ್ನ 2.00 ಗಂಟೆಗೆ ಗೀತನ ನಮನ - ಸಿದ್ದಲಿಂಗಯ್ಯನವರು ಬರೆದ ಕವಿತೆಗಳ ಗಾಯನ, ಮಧ್ಯಹ್ನಾ 3.00 ಗಂಟೆಗೆ ನುಡಿ ನಮನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಗೌರವ ನುಡಿ ಸಮರ್ಪಣೆ ಹಾಗೂ ನುಡಿ ನಮನಕ್ಕೆ ಚಾಲನೆ ಮತ್ತು ಡಾ. ಸಿದ್ದಲಿಂಗಯ್ಯ ಅವರ ಸಮಗ್ರ ಕಾವ್ಯ “ಬೋಧಿವೃಕ್ಷದ ಕೆಳಗೆ” ಲೋಕಾರ್ಪಣೆ ಮಾಡಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ, ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ, ಲಕ್ಷ್ಮಣ ಎಸ್ ಸವದಿ, ಡಾ|| ಸಿ. ಎನ್. ಅಶ್ವತ್ಥ ನಾರಾಯಣ, ಸಮಾಜ ಕಲ್ಯಾಣ ಇಲಾಖೆ ಸಚಿವ, ಬಿ. ಶ್ರೀರಾಮಲು, ವಸತಿ ಸಚಿವ ವಿ. ಸೋಮಣ್ಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್, ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವ ಅರವಿಂದ ಲಿಂಬಾವಳಿ, ಚಾಮರಾಜನಗರ ಸಂಸದ ವಿ. ಶ್ರೀನಿವಾಸ ಪ್ರಸಾದ್, ಶಾಸಕರಾದ ಎನ್. ಮುನಿರತ್ನ, ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ ಸೇರಿದಂತೆ ಗಣ್ಯಾತಿ ಗಣ್ಯರು ಭಾಗವಹಿಸಲಿದ್ದಾರೆ.
ಪ್ರಸಾರ :
FaceBook Link :
https://www.facebook.com/ನಾಡೋhttps://www.facebook.com/
Meeting ID : 98179695458 - Passcode: sidda
Youtube Link: https://www.youtube.com/ವಿಶೇಷ ಸೂಚನೆ:
ವಿಶೇಷ ಸೂಚನೆ: ಪ್ರತಿಯೊಬ್ಬರು ಆರೋಗ್ಯದ ಹಿತದೃಷ್ಠಿಯಿಂದ ಕೋವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮೇಲಿನ ನೇರ ಪ್ರಸಾರದ ಲಿಂಕ್ ಮೂಲಕ ಕಾರ್ಯಕ್ರಮವನ್ನು ತಾವಿದ್ದಲ್ಲೇ ವೀಕ್ಷಿಸಿ ನಾಡೋಜ ಡಾ. ಸಿದ್ದಲಿಂಗಯ್ಯನವರಿಗೆ ಗೌರವಾರ್ಪಣೆ ಸಲ್ಲಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.
ADVERTISEMENT :













0 Comments