ನಗರಾಭಿವೃದ್ಧಿ ಸಚಿವ ಶ್ರೀ ಬಿ.ಎ.ಬಸವರಾಜ ಅವರು ದಿನಾಂಕ 25-6-2021 ಶುಕ್ರವಾರ ಬೆಳಿಗ್ಗೆ ತುಮಕೂರು ನಗರಕ್ಕೆ ಭೇಟಿ ನೀಡಿರುತ್ತಾರೆ. . ತುಮಕೂರು ಮಹಾನಗರ ಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಖುದ್ದಾಗಿ ನಿಂತು ಪರಿಶೀಲನೆ ನಡೆಸಿದರು.
ಕಾಮಗಾರಿಗಳು ಕಾಲ ಮಿತಿಯಲ್ಲಿ ಪೂರ್ಣ ಮಾಡುವಂತೆ ಸಂಭಂದಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತುಮಕೂರು ನಗರ ಶಾಸಕರಾದ ಶ್ರೀ ಜಿ. ಬಿ.ಜ್ಯೋತಿಗಣೇಶ, ಪಾಲಿಕೆ ಮೇಯರ್ ಶ್ರೀ ಕೃಷ್ಣಪ್ಪ, ಪಾಲಿಕೆ ಅಯುಕ್ತೆ ರೇಣುಕಾ ಸೇರಿದಂತೆ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ನಗರ ಪ್ರದಕ್ಷಿಣೆ ನಡೆಸಿದ ನಂತರ ಮಾನ್ಯ ಸಚಿವರು ಪಾಲಿಕೆ ಸಭಾಂಗಣದಲ್ಲಿ ಕಾಮಗಾರಿಗಳು ನಡೆಯುತ್ತಿರುವ ಬಗ್ಗೆ ಅಧಿಕಾರಿಗಳೂಂದಿಗೆ ಸಭೆ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.





0 Comments