ಸ್ಯಾಂಡಲ್ವುಡ್ಗೆ ಒಂದರ ಹಿಂದೆ ಒಂದರಂತೆ ಹೊಡೆತ ಬೀಳುತ್ತಿದೆ. ನಾನಾ ಕಾರಣಗಳಿಂದ ಕಲಾ ಸೇವೆ ಸಲ್ಲಿಸಿದ ಕಲಾವಿದರ ಹಾಗೂ ಸಿನಿರಂಗದಲ್ಲಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರು ಅಗಲುತ್ತಿದ್ದಾರೆ. ಇತ್ತೀಚೆಗಷ್ಟೆ ಹಿರಿಯ ನಟಿ ಬಿ ಜಯಾ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿದಿತ್ತು. ಈಗ ಹಿರಿಯ ನಿರ್ಮಾಪಕ ಹಾಗೂ ವಿತರಕ ಸಿ ಎನ್. ಚಂದ್ರು ಅವರು ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ನಿರ್ಮಾಪಕ ಹಾಗೂ ವಿತರಕ ಚಂದ್ರ ಅವರಿಗೆ 69 ವರ್ಷವಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅಗಲಿದ್ದಾರೆ.
ಶಿವಾನಂದ ಸರ್ಕಲ್ ಬಳಿ ಇರೋ ನಿವಾಸದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ಇಂದು 9 ಗಂಟೆಯಿಂದ ಅಂತಿಮದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆಯಂತೆ. ಹಿರಿಯ ನಿರ್ಮಾಪಕನ ಅಗಲಿಕೆಗೆ ಸ್ಯಾಂಡಲ್ವುಡ್ ಮಂದಿ ಕಂಬನಿ ಮಿಡಿದಿದ್ದಾರೆ.ಹುಲಿ ಹಾಲಿನ ಮೇವು, ಬಬ್ರುವಾಹನ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಣ ಮಾಡಿದ್ದರು. ಅವರು. ಕರ್ನಾಟಕ ಫಿಲಂ ಚೇಂಬರ್ ಹಾಗೂ ಎಸ್ಐಎಫ್ಸಿಸಿಆರ್ಐಪಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಕೊರೋನಾದಿಂದಾಗಿ ಸ್ಯಾಂಡಲ್ವುಡ್ನಲ್ಲಿ ಒಂದರ ಹಿಂದೆ ಒಂದು ಕಹಿ ಘಟನೆಗಳು ನಡೆಯುತ್ತಿವೆ. ಕಲಾ ಸೇವೆ ಮಾಡುತ್ತಿರುವ ಹಲವಾರು ಮಂದಿ ಕಲಾವಿದರು ಕೊರೋನಾಗೆ ಬಲಿಯಾಗುತ್ತಿದ್ದಾರೆ. ಶಂಖನಾದ ಅರವಿಂದ್, ರೇಣುಕಾ ಶರ್ಮಾ, ರಾಮು, ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ, ಕನ್ನಡ ಸಿನಿಮಾದ ನಿರ್ಮಾಪಕ ಹಾಗೂ ವಿತರಕ ದೀಪಕ್ ಸಾಮಿದೊರೈ ಸೇರಿದಂತೆ ಹಲವರು ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.
ಕೊರೋನಾ ವೈರಸ್, ಹೃದಯಾಘಾತ ಸೇರಿದಂತೆ ಇತರೆ ಕಾಯಿಲೆಗಳಿಂದ ಸ್ಯಾಂಡಲ್ವುಡ್ ಕಲಾವಿದರು ಸಾವನ್ನಪ್ಪಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೆ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀರಂಗ ಹಾಗೂ ಬಿ ಜಯಾ ಅವರು ನಿಧನರಾಗಿದ್ದಾರೆ.ಕಳೆದ ಕೆಲವು ವಾರಗಳಿಂದ ಕೋವಿಡ್ ಸೋಂಕಿಗೆ ಸ್ಯಾಂಡಲ್‌ವುಡ್‌ನ ಸರಿ ಸುಮಾರು ಹತ್ತುಕ್ಕೂ ಹೆಚ್ಚು ಮಂದಿ ಸೆಲೆಬ್ರಿಟಿಗಳು ಬಲಿಯಾಗಿದ್ದಾರೆ. ಮೇ 2ರಂದು ಮಿಸ್ಡ್ ಕಾಲ್ ಎಂಬ ಸಿನಿಮಾ ನಿರ್ಮಿಸಿದ್ದ ಚಂದ್ರ ಅವರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು.

0 Comments