ಬಳ್ಳಾರಿ ಜೂನ್ 06. ಜಿಂದಾಲ್ ಸಂಸ್ಥೆ ಸ್ಥಾಪನೆ ಅಗಿದ್ದ ಗಳಿಗೆಯೇ, ಸರಿಯಿಲ್ಲ ಅನಿಸುತ್ತದೆ.!! ಒಂದಲ್ಲ ಒಂದು ಸಮಸ್ಯೆಯನ್ನು ಜಿಂದಾಲ್ ಎದುರಿಸುತ್ತಲೇ ಬಂದಿದೆ. ಕೇಂದ್ರದಿಂದ ಹಿಡಿದು, ರಾಜ್ಯದವರೆಗೆ ಯಾವುದೇ ಸರ್ಕಾರ ಇರಲಿ… ಬರಲಿ… ಜಿಂದಾಲ್ ವಿಷಯದಲ್ಲಿ ಸಾಫ್ಟ್ ಕಾರ್ನರ್ರೇ ಆದ್ರೂ, ಯಾವುದೋ ಒಂದು ಗ್ರಹದ ಶಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದೇ ಹೆಚ್ಚು ಎಂದು ಹೇಳಬಹುದು.
ಎಲ್ಲವೂ ಸರಿಪಡಿಸಲಾಗುವುದು ಎನ್ನುವ ಆಶಾಬಾವನೆ ಸದ್ಯ ಗೋಚರಿಸುತ್ತಿಲ್ಲ.ಮುಖ್ಯವಾಗಿ ಸಂಸ್ಥೆಯ ಅಡಳಿತ ವೈಫಲ್ಯ ಹಿಡಿದ ಕೈಗನ್ನಡಿಯಾಗಿದೆ.
ರಾಜ್ಯದಲ್ಲಾಗಲಿ ಕೇಂದ್ರದಲ್ಲಾಗಲಿ, ಯಾವುದೇ ಪಕ್ಷ ಆಡಳಿತದಲ್ಲಿದ್ದರೂ, ಕೆಲ ಪಟ್ಟಭದ್ರ ಹಿತಾಶಕ್ತಿಗಳು ಹಾದಿ ತಪ್ಪಿಸಲು ಸದಾ ಸಿದ್ದವಿರುತ್ತಾರೆ ಎನ್ನುವ ಮಾತು ಸಾರ್ವಜನಿಕರಲ್ಲಿ ದಟ್ಟವಾಗಿ ಕೇಳಿಬರುತ್ತಿವೆ. ಬಳ್ಳಾರಿ ಜಿಲ್ಲೆಯಲ್ಲಿ ನೂರಾರು ಕಾರ್ಖಾನೆಗಳಿವೆ, ಸಣ್ಣಪುಟ್ಟ ಸಮಸ್ಯೆಗಳು ಎದುರಾದಾಗ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸರಿ ಮಾಡಿಕೊಳ್ಳುತ್ತಾರೆ. `ಜಿಂದಾಲ್’ ಸಂಸ್ಥೆಯ ಸಮಸ್ಯೆ ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಇರುತ್ತದೆ. ಇವರು ಸ್ಥಳೀಯ ಮಟ್ಟದ ನಾಯಕರಿಗೆ, ನಯಾ ಪೈಸೆಯ ಕಿಮ್ಮತ್ತು ನೀಡುವುದಿಲ್ಲ. ಸ್ಥಳೀಯರನ್ನ ಹೊರಗಿನವರಂತೆ ಕಾಣುವ ಹಲವು ಸಂದರ್ಭಗಳು ಬಂದಿವೆ. ಇನ್ನು ಕೆಲ ಸಚಿವರು, ಶಾಸಕರು ಜಿಂದಾಲ್ ಸಂಸ್ಥೆಗೆ ಸೂತ್ರದಾರರು, ಇವರೆ ಆಪದ್ಭಾಂಧವರು ಅವರೆ 1995ರಲ್ಲಿ ಜಿಂದಾಲ್ ಸಂಸ್ಥೆಗೆ "ಲೀಸ್ ಕಮ್ ಸೆಲ್" ನಲ್ಲಿ 3430.16ಎಕರೆ ಭೂಮಿಯನ್ನು ಮಂಜೂರು ಮಾಡಿದ್ದರು.
ಈ ಹಿಂದಿನ ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಂದಕ್ಕೂ ಮುಂದಾಗಿತ್ತು. ಅದರೆ, ಸರ್ಕಾರಿ ಆದೇಶದ ಪ್ರಕಾರ ಹೊಸದಾಗಿ ಅನುಮತಿ ಪಡೆಯಲು ಅದೇ ಸಂಸ್ಥೆಯ ಹಿಂದಿನ ಲೆಕ್ಕಾಚಾರಗಳು (ಬಾಕಿ,ಟ್ಯಾಕ್ಸ್ ಮತ್ತು ನಿಯಮ ಉಲ್ಲಂಘನೆಗಳು) ಅಭಿವೃದ್ಧಿ ವಿಚಾರಗಳನ್ನು ನೋಡುತ್ತದೆ. ಇಂತಹ ವಿಚಾರದಲ್ಲಿ 2ಸಾವಿರ ಕೋಟಿ ಜಿಂದಾಲ್ ಸಂಸ್ಥೆ ಸರ್ಕಾರಿ ಸ್ವಾಮ್ಯದ ಒಒಐ ಕಂಪನಿಗೆ ಬಾಕಿಇದೆ.
ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಿದೆ. ಇಂತಹ ಸಂದರ್ಭಗಳಲ್ಲಿ, 3667 ಎಕರೆ ಭೂಮಿಯನ್ನು ಸೇಲ್ ಡೀಡ್ ಮಾಡಲು ಬರುವುದಿಲ್ಲ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ದೂರವಾಣಿ ಮೂಲಕ ತಿಳಿಸಿದ್ದಾರೆ. ಕಾಲಕ್ರಮೇಣ ಸಂಸ್ಥೆ ಬೇಳೆದು ನಿಂತಿದೆ, ಸುಳ್ಳು ಸತ್ಯದ ಮಧ್ಯೆ ನಡೆಯುತ್ತದೆ, ಜಿಂದಾಲ್ ಸಂಸ್ಥೆ ವಿರುದ್ಧ ಜಿಲ್ಲೆಯಲ್ಲಿ ಧ್ವನಿ ಎತ್ತುವ ನಾಯಕರು ಕಡಿಮೆ. ಎಚ್.ಕೆ.ಪಾಟಿಲ್ ಅಂತಹ ನಾಯಕರು ಧ್ವನಿ ಎತ್ತಿದ್ದಾರೆ. ಆದ್ರೆ ತಮ್ಮ ಪಕ್ಷದ ಹಿರಿಯ ನಾಯಕರೆನಿಸಿಕೊಂಡ ಕೆ.ಸಿ.ಕೊಂಡಯ್ಯ, ಸಂಡೂರು,ಶಾಸಕ ತುಕಾರಾಂರಂತಹ ನಾಯಕರು, ಜಿಂದಾಲ್ ಪರವಾಗಿ "ಬ್ಯಾಟಿಂಗ್"ಮಾಡುತ್ತಿದ್ದಾರೆ ಎಂದರೆ ಇನ್ನು ಸಾಮಾನ್ಯ ಜನರು ಹೇಗೆ ತಾನೆ ಧ್ವನಿ ಎತ್ತಲು ಸಾಧ್ಯ. ಈ ಹಿಂದೆ ಜಿಂದಾಲ್ ಸಂಸ್ಥೆ ಅದಿರು ಪರವಾನಿಗೆ ಪಡೆಯಲು ಚೆಕ್ ಮೂಲಕ ಕಿಕ್ ಬ್ಯಾಕ್ ನೀಡಿದಂತೆ ಸ್ಥಳಿಯ ನಾಯಕರಿಗೆ ಕಿಕ್ ನೀಡಿದೆ. ಹೀಗಾಗಿ ಜಿಂದಾಲ್ ಪರ ಬ್ಯಾಟಿಂಗ್ ನಡೆಸಿದ್ದಾರೆ ಎನ್ನುವ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅದೇನೆ ಇರಲಿ ರಾಜಕಾರಣಿಗಳಿಗೆ ಆಶ್ರಯ ತಾಣವೆನಿಸಿದ್ದ ಜಿಂದಾಲ್ ಸಂಸ್ಥೆ ಇಂದು ರಾಜಕಾರಣಿಗಳ ಆಶ್ರಯದಲ್ಲಿ ಭೂ ವಿವಾದದ ಸುಳಿಯಿಂದ ರಕ್ಷಣೆ ಪಡೆಯುತ್ತಿರುವುದು ವಿಪರ್ಯಾಸವೇ ಸರಿ.
ಬಿ.ಪಂಪನಗೌಡ.ಬಳ್ಳಾರಿ.9886633682


0 Comments