Ticker

6/recent/ticker-posts

Ad Code

Responsive Advertisement

ಮೋದಿ ಜಾಗತಿಕ ನಿಲುವಿನಲ್ಲಿ ಮರೆಯಾದ ಹಿಂದುತ್ವ

 ಹಿಂದುತ್ವ ಮತ್ತು ರಾಷ್ಟ್ರೀಯವಾದವನ್ನು ಮುಂದಿಟ್ಟು, ಅಧಿಕಾರದ ಗದ್ದುಗೆ ಏರಿದ ನರೇಂದ್ರ ಮೋದಿ, ಪ್ಯಾಲೇಸ್ತೈನ ಹಾಗೂ ಇಸ್ರೇಲ್ ಆಂತರಿಕ ಯುದ್ಧದಲ್ಲಿ, ಭಾರತವನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ನೋಡಿ.


ಇಸ್ರೇಲ್ ಭಾರತದ ಮಿತ್ರ ರಾಷ್ಟ್ರ. ಅನೇಕ ರೀತಿಯಲ್ಲಿ ಕೊಡುಕೊಳ್ಳುವಿಕೆ ಎರಡು ದೇಶಗಳ ಮಧ್ಯೆ ಚಾಲನೆಯಲ್ಲಿದೆ. ಹೀಗಿರುವಾಗ ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಎರಡು ದೇಶಗಳ ಜೊತೆ ಆಗಾಗ ಕದನ, ಸಾವು-ನೋವು ಸಾಮಾನ್ಯ.

ಮೊನ್ನೆ ನಡೆದ ಯುದ್ಧದಲ್ಲಿ ಎರಡು ದೇಶಗಳನ್ನು ಬೆಂಬಲಿಸುವ ನೆಪದಲ್ಲಿ, ವಿಶ್ವದಲ್ಲಿ ಎರಡು ಗುಂಪುಗಳಾಗಿವೆ. ಇಸ್ರೇಲ್ ಬೆಂಬಲಿತ ರಾಷ್ಟ್ರ ಹಾಗೂ ಪ್ಯಾಲೆಸ್ತೈನ ಬೆಂಬಲಿತ ರಾಷ್ಟ್ರಗಳಾಗಿ ವಿಶ್ವದಲ್ಲಿ ಬೆಂಬಲ ವ್ಯಕ್ತವಾಗಿದೆ. 

ಸಹಜವಾಗಿ ಭಾರತ ಇಸ್ರೇಲ್ ಪರವಾದ ನಿಲುವನ್ನು ಭಾರತೀಯರು ನಿರೀಕ್ಷಿಸುತ್ತಿದ್ದಾಗ, ಮೋದಿ ಪ್ಯಾಲೆಸ್ತೈನ ಪರವಾಗಿ ಕೈ ಎತ್ತಿದ್ದಾರೆ.

ಇದು ಆಶ್ಚರ್ಯ ಆದರೂ ನಿಜ. ಮೋದಿ ಯಾಕೆ ಪ್ಯಾಲೆಸ್ತೈನಕ್ಕೆ ಬೆಂಬಲಿಸಿದರು ಎಂದರೆ, ಅಲ್ಲಿ ವಿಶ್ವಗುರುವಿನ ಪದವಿ ಅಥವಾ ಕಿರೀಟ ಕಾಣಿಸಿಕೊಳ್ಳುತ್ತದೆ. ವಿಶ್ವದಲ್ಲಿ ವಿಶ್ವಸಂಸ್ಥೆ ಎಂಬ ಒಂದು ಸಂಸ್ಥೆ ದೇಶ-ದೇಶಗಳ ನಡುವೆ ಸಮನ್ವಯ ಸಾಧಿಸಲು ಹುಟ್ಟಿಕೊಂಡಿದೆ. ಇದು ವಿಶ್ವದ ದೊಡ್ಡಣ್ಣ ಅಮೆರಿಕಾದ ಆಶ್ರಯದಲ್ಲಿದೆ.

ಈ ವಿಶ್ವಸಂಸ್ಥೆ ಕಾಯಂ ಸದಸ್ಯತ್ವವನ್ನು ಹಿಂದೆ ನೆಹರು ತಿರಸ್ಕರಿಸಿದ ಇತಿಹಾಸವಿದೆ. ನೆಹರು, ಇಂದಿರಾ ಮೊದಲಿನಿಂದಲೂ ಅಮೆರಿಕಾ ಹಿಡಿತದಲ್ಲಿರಬೇಕೆಂಬ ನಿಲುವಿಗೆ ವಿರೋಧಿಸಿಕೊಂಡೆ ಬಂದಿದ್ದಾರೆ. ನೆಹರು ರಷ್ಯಾ ದೇಶದ ಜೊತೆ ಭಾರತವನ್ನು ಗುರುತಿಸಿಕೊಂಡವರು. ಇದನ್ನೇ ಇಂದಿರಾ ಫಾಲೋ ಮಾಡಿದರು. ಹೀಗಾಗಿ ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವದಿಂದ ದೂರವಿದ್ದರು. ಇದು ನಾವು ಓದಿರುವ ಇತಿಹಾಸ. ಇದನ್ನು ಸಾಕ್ಷಿಕರಿಸಲು ನೆಹುರು ಮತ್ತು ಇಂದಿರಾ ಇಬ್ಬರು ಇಲ್ಲ.

ಮೋದಿ ಪ್ರಧಾನಿಯಾಗುವ ಮೊದಲು, ಗೋದ್ರಾ ಹಿನ್ನಲೆಯ ಘಟನೆಯ ಹಿನ್ನಲೆಯಲ್ಲಿ, ಅಮೆರಿಕಾ ಸೇರಿದಂತೆ ಕೆಲವು ದೇಶಗಳು ಮೋದಿಗೆ ವಿದೇಶ ಪ್ರವಾಸಕ್ಕೆ ವೀಸಾ ನೀಡಿರಲಿಲ್ಲ. ಈ ಅವಮಾನವನ್ನು ತಾವು ಪ್ರಧಾನಿಯಾದ ಮೇಲೆ ತೀರಿಸಿಕೊಂಡವರಂತೆ, ಮೋದಿ ದೇಶ ಸುತ್ತ ತೊಡಗಿದರು. ಮೊದಲಿನಿಂದಲೂ ಅಮೆರಿಕಾ ಎಂದರೆ ಅವರಿಗೆ ಪ್ರೀತಿ ಹಾಗೂ ವ್ಯಾಮೋಹ. ಹಿಂದೆ ಇವರು ಗುಜರಾತ್ ಮುಖ್ಯಮಂತ್ರಿಗಳಾಗಿ ಗೋದ್ರಾ  ಪ್ರಕರಣದಲ್ಲಿ ಮೋದಿಗೆ ಅಮೆರಿಕಾ ವೀಸಾ ನೀಡಿದ ಅವಮಾನದ ಘಟನೆಯನ್ನು ಮರೆತು, ಅಮೆರಿಕಾ ಜೊತೆಗೆ ಸಂಪರ್ಕ ಮತ್ತು ಸ್ನೇಹ ಬೆಳೆಸಿದರು.

ಈ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದ ಟ್ರಂಪ್ ಜೊತೆಗಿನ ಒಡನಾಟ, ಅಮೆರಿಕಾದಲ್ಲಿ ಮೋದಿಯವರ ಕಾರ್ಯಕ್ರಮ, ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಇತಿಹಾಸ. ಟ್ರಂಪ್‍ನನ್ನು ಭಾರತಕ್ಕೆ ಕರೆತಂದು ಕೊರೊನಾ ಹಬ್ಬಲು ಹೇಗೆ ಕಾರಣರಾದರು ಅದು ಚರಿತ್ರೆ. ಈಗ ಟ್ರಂಪ್ ಬದಲಾದ ಮೇಲೆ ವಿಶ್ವಸಂಸ್ಥೆಯಲ್ಲಿ ಭಾರತ ಕಾಯಂ ಸದಸ್ಯತ್ವಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಭಾರತವನ್ನು ಬೆಂಬಲಿಸಲು ಅನೇಕ ರಾಷ್ಟ್ರಗಳ ನೆರವು ಬೇಕು. ಈ ನೆರವಿನ ಪಟ್ಟಿಯಲ್ಲಿ 50ಕ್ಕು ಹೆಚ್ಚು ಮುಸ್ಲಿಂ ರಾಷ್ಟ್ರಗಳಿವೆ. ಇವುಗಳ ಬೆಂಬಲಗಳಿಸಲು ಮೋದಿ ಮುಸ್ಲಿಂ ರಾಷ್ಟ್ರವಾದ ಪ್ಯಾಲೆಸ್ತೈನ್ ಕಡೆಗೆ ವಾಲಿದ್ದಾರೆ. ಇಸ್ರೇಲ್‍ಗೆ ಬೆಂಬಲಿಸಿದರೆ, ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗುವ ಮುಂದಾಲೋಚನೆ ಮೋದಿಯದು. ನೆಹರು ತಿರಸ್ಕರಿದ್ದ ವಿಶ್ವಸಂಸ್ಥೆಯ ಕಾಯಂ ಪಟ್ಟ ಪಡೆದುಕೊಂಡರೆ, 3ನೇ ಅವಧಿಗೆ ಪ್ರಧಾನಿಯಾಗಲು ಸಹಕಾರಿಯಾಗುತ್ತದೆ. ಈ ಹಿನ್ನಲೆಯಲ್ಲಿ ತಮ್ಮ ಹಿಂದುತ್ವವನ್ನು ಪಣಕ್ಕಿಟ್ಟು, ಪ್ಯಾಲೆಸ್ತೈನ್ ಬೆಂಬಲಿಸಿದ್ದಾರೆ. 

ಇದು ರಾಷ್ಟ್ರಮಟ್ಟದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿಯಾಗದಂತೆ ಎಚ್ಚರಿಗೆ ವಹಿಸಿದ್ದಾರೆ. ಮೋದಿ ಪತ್ರಕರ್ತರ ಮುಂದೆ ಬರಲು ಹೆದರುತ್ತಾರೆ. ಸಂದರ್ಶನ ನೀಡಲು ಹಿಂದೇಟು ಹೊಡೆಯುತ್ತಾರೆ. ಪತ್ರಕರ್ತರನ್ನು ಎದುರಿಸುವ ಸಂದರ್ಭಗಳಿಂದ ನುಣಿಚಿಕೊಳ್ಳುತ್ತಾರೆ. ತದ್ವಿರುದ್ಧವಾಗಿ ಪಾಕಿಸ್ತಾನ ಮತ್ತು ಚಿನಾದೊಡನೆ ಕಾಲು ಕೆದರಿ ಜಗಳ ಮಾಡುತ್ತಾರೆ. ಯುದ್ಧ ಭೀತಿ, ಸದಾ ಜೀವಂತವಾಗಿರುವಂತೆ ಸರ್ಕಸ್ ಮಾಡುತ್ತಾರೆ. ಮಾಧ್ಯಮಗಳಲ್ಲಿ ಇದನ್ನೆ ದೊಡ್ಡ ಸುದ್ಧಿಯಾಗಿಸುತ್ತಾರೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಘೋಷಿಸಿದ ಅನೇಕ ಕಾರ್ಯಕ್ರಮಗಳ ಹೆಸರು ಬದಲಿಸಿ, ಘೋಷಣೆ ಮಾಡಿದ್ದನ್ನು ಬಿಟ್ಟರೆ, ಮೋದಿ ಸ್ವತಂತ್ರವಾಗಿ ಘೋಷಿಸಿದ ಯೋಜನೆಗಳು ಕೇವಲ ಕಾಗದಲ್ಲಿ ಮಾತ್ರವಿದೆ. 

ಇತ್ತಿಚ್ಚೆಗೆ ಅವರು ಘೋಷಿಸಿದ ಒನ್ ನೇಶನ್ ಒನ್ ರೇಶನ್ ಇದಕ್ಕೆ ಉದಾಹರಣೆ. ಸುಪ್ರೀಮ್‍ಕೋರ್ಟ್ ಹೇಳಿದ ಮೇಲೆ ಆಮ್ಲಜನಕ ಹಂಚಿಕೆ ಹಾಗೂ ಉಚಿತ ಲಸಿಕೆ ಹಂಚಿಕೆ ಘೋಷಿಸಿದ್ದು, ಅವರ ವೈಫಲ್ಯದ ಒಂದು ನಿದರ್ಶನ. 80 ಕೋಟಿ ಜನರಿಗೆ ಉಚಿತ ಆಹಾರ ಘೋಷಣೆಯು ಇದಕ್ಕೆ ಪೂರಕವಾಗಿದೆ. ಪಡಿತರ ಅಂಗಡಿ ಲಾಕ್‍ಡೌನ್ ಹೆಸರಿನಲ್ಲಿ ಮುಚ್ಚಿರುವಾಗ, ದೇಶಾದ್ಯಂತ ಪಡಿತರ ಪಡೆಯಲು ಹೇಗೆ ಸಾಧ್ಯ. ಹಾವು ಸತ್ತಿರಬಾರದು, ಕೋಲು ಮುರಿಯಾಬಾರದು ಎಂಬ ಗಾದೆಗೆ ಹೇಳಿ ಮಾಡಿಸಿದಂತಿದ್ದಾರೆ. ಇವರಿಗೆ ಹೋಲಿಸಿದರೆ ಯಡಿಯೂರಪ್ಪನವರೇ ಬೆಟರ್. ಎರಡು ಪ್ಯಾಕೇಜ್ ಘೋಷಣೆ, ಕೊರೊನಾದಿಂದ ಸತ್ತವರ ಕುಟುಂಬಕ್ಕೆ ಒಂದು ಲಕ್ಷ ರೂ. ಘೋಷಣೆ ಮಾಡಿದ್ದಾರೆ. ಇದನ್ನೆ ವಿಸ್ತರಿಸಿದರೆ, ಭಾರತದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ ನಾಲ್ಕು ಲಕ್ಷವಿದೆ. ಅದರಲ್ಲಿ ಬಡವರು ಮತ್ತು ಅವಲಂಬಿತರ ಸಂಖ್ಯೆ ಮೂರು ಲಕ್ಷ. ಪಿಎಂ ಕೇರ್ ಫಂಡ್ ಮತ್ತು ಪ್ರಧಾನಿಗಳ ಪರಿಹಾರ ನಿಧಿ, ರಾಷ್ಟ್ರೀಯ ವಿಪತ್ತಿನ ಹೆಸರಿನಲ್ಲಿ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಕೇಂದ್ರ ಸರ್ಕಾರ ಕೊಡಬಹುದು. ಇದು ಸುಮಾರು 15 ಸಾವಿರ ಕೋಟಿಯಾಗುತ್ತದೆ. ಉಚಿತ ರೇಶನ್ ಹೆಸರಿನಲ್ಲಿ ಬಡ ಹಾಗೂ ಮದ್ಯಮ ವರ್ಗದ ಎಲ್ಲರಿಗೆ ಹಾಗೂ ಅವಶ್ಯಕತೆ ಇರುವ ಅಸಹಾಯಕರಿಗೆ ಬಿಪಿಎಲ್ ಬದಲು ಆಧಾರ್ ಕಾರ್ಡ್‍ಗೆ 10 ಕೆಜಿ ಉಚಿತ ರೇಶನ್ (5 ಕೆಜಿ ಅಕ್ಕಿ, 2 ಕೆಜಿ ಗೋಧಿ, 2 ಕೆಜಿ ಜೋಳ ಅಥವಾ ರಾಗಿ, 1 ಕೆಜಿ ಅಡುಗೆ ಎಣ್ಣೆ) ನೀಡಬಹುದು. ಹೀಗಾದಾಗ ಮಾತ್ರ. ದೇಶದ 80 ಕೋಟಿ ಜನರಿಗೆ ರೇಶನ್ ತಲುಪುತ್ತದೆ. ಇದಕ್ಕೆ 18 ಗಂಟೆಗಳ ಕಾಲ ತಿಂಗಳ ಪೂರ್ತಿ, ಪಡಿತರ ಅಂಗಡಿಯ ಬಾಗಿಲು ತೆಗೆಯಬೇಕಾಗುತ್ತದೆ. ಇಂತಹ ಕಾರ್ಯಗಳು ಮೋದಿ ಇಮೇಜ್‍ನ್ನು ಬೆಳಸಬಲ್ಲವು.

ಈಗಾಗಲೇ ದೇಶದಲ್ಲಿ ಪೌರತ್ವ ಕಾಯ್ದೆ ಜಾರಿಗೆ ತಂದು, ಮುಸ್ಲಿಂರನ್ನು ಓಡಿಸುವ ಬಗ್ಗೆ ಬೆಂಬಲಿಸುತ್ತಾರೆ. ಲಕ್ಷ ದ್ವೀಪದಂತ ಕೇಂದ್ರಾಡಳಿತ ಪ್ರದೇಶದಲ್ಲಿ, ಸಂವಿಧಾನದ ಆಶಯಗಳನ್ನು ಮರೆತು ಮುಸ್ಲಿಂರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಾರೆ.

ವಿಶ್ವ ಆರೋಗ್ಯ ಸಂಸ್ಥೆ ಚೀನಾ ಅಡಿಯಲ್ಲಿದ್ದರೆ, ವಿಶ್ವಸಂಸ್ಥೆ ಅಮೆರಿಕಾ ಮತ್ತು ಮುಸ್ಲಿಂ ರಾಷ್ಟ್ರಗಳ ಅಡಿಯಲ್ಲಿದೆ. ಈ ಅಮೆರಿಕಾ ಮತ್ತು ಮುಸ್ಲಿಂ ರಾಷ್ಟ್ರಗಳು ಬದ್ದವೈರಿಗಳು ಎಂದು ವಿಶ್ವಕ್ಕೆ ಗೊತ್ತಿರುವ ಸತ್ಯ. ಈ ಬಲಾಢ್ಯ ರಾಷ್ಟ್ರಗಳ ಮದ್ಯೆ ವಿಶ್ವಸಂಸ್ಥೆಯ ಪಟ್ಟಕ್ಕಾಗಿ ಮೋದಿ ಹಿಂದುತ್ವವನ್ನು ಪಣಕ್ಕಿಟ್ಟಿದ್ದಾರೆ.

 ಈ ಹಿನ್ನೆಲೆಯಲ್ಲಿ ಮೋದಿ ಪ್ರಧಾನಿಯಾದೊಡನೆ ಅಮೆರಿಕಾದೊಡನೆ ಉತ್ತಮ ಬಾಂಧವ್ಯಕ್ಕೆ ಪ್ರಯತ್ನಿಸಿದ್ದಾರೆ. ಜೊತೆಗೆ ಈಗ ಮುಸ್ಲಿಂ ರಾಷ್ಟ್ರಗಳನ್ನು ಓಲೈಸ ತೊಡಗಿದ್ದಾರೆ. ಹೇಗಾದರೂ ಮಾಡಿ ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವಕ್ಕಾಗಿ ಭಾರತವನ್ನು ಸೇರಿಸಲು ಜಾತಕ ಪಕ್ಷಿಯಂತೆ ಕಾದಿದ್ದಾರೆ.

ವಿಶ್ವಸಂಸ್ಥೆ ಸದಸ್ಯತ್ವದ ಆಯ್ಕೆಯಲ್ಲಿ ಹಲವು ರಾಷ್ಟ್ರಗಳು ಭಾರತವನ್ನು ಬೆಂಬಲಿಸಬೇಕಿದೆ. ಇಂತಹ ಬೆಂಬಲಿತ ದೇಶಗಳಲ್ಲಿ ಮುಸ್ಲಿಂ ರಾಷ್ಟ್ರಗಳ ಸಂಖ್ಯೆ ಅಪಾರ. ಇದರಿಂದಾಗಿ ಮುಸ್ಲಿಂ ರಾಷ್ಟ್ರ ಪ್ಯಾಲೆಸ್ತೈನ್‍ಗೆ ಬೆಂಬಲಿಸಿದ್ದಾರೆ.

ಭಾರತದಲ್ಲಿ ಮುಸ್ಲಿಂ ವಿರೋಧಿ ನಿಲುವಿನಲ್ಲಿರುವ ಪ್ರಧಾನಿ, ಹಿಂದುತ್ವದ ಪ್ರಧಾನಿ ಎಂದೇ ಪ್ರಸಿದ್ಧರು. ವಿಶ್ವಮಟ್ಟದಲ್ಲಿ ಮಾತ್ರ ಅವರಿಗೆ ಮುಸ್ಲಿಂ ರಾಷ್ಟ್ರಗಳು ಬೇಕು. ಈ ನಿಲುವು ಅವರ ಇಮೇಜ್‍ನ್ನು ಹಳ್ಳ ಹಿಡಿಸಲಿದೆ. 2ನೇ ಅವಧಿಯೊಳಗೆ ವಿಶ್ವಸಂಸ್ಥೆಯ ಸದಸ್ಯತ್ವ ಸಿಕ್ಕರೆ, ಅದು ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿಸುತ್ತದೆಂದು ಮೋದಿ ನಂಬಿದ್ದಾರೆ.

ದೇಶದೊಳಗೆ ಹಿಂದುತ್ವ, ವಿಶ್ವಮಟ್ಟದಲ್ಲಿ ಮುಸ್ಲಿಂ ಪರವಾದ ನಿಲುವು, ಈ ಮೋದಿಯ ದ್ವಂದದಿಂದ ಭಾರತವನ್ನು ಎಲ್ಲಿಗೆ ತಂದು ನಿಲ್ಲಿಸಲಿದೆ. ಎಂಬುದನ್ನು ಮುಂಬರುವ ಚುನಾವಣೆ ನಿರ್ಧರಿಸಲಿವೆ.


- ರಮೇಶ ಸುರ್ವೆ, 


Post a Comment

0 Comments

Ad Code

Responsive Advertisement