Ticker

6/recent/ticker-posts

Ad Code

Responsive Advertisement

ಕರ್ಫ್ಯೂ ದಿನಗಳಲ್ಲಿ ಸಾರಿಗೆ ಸೇವೆಗಳ ಕಾರ್ಯಾಚರಣೆ

 ವಾರಾಂತ್ಯ ಕಪ್ರ್ಯೂ ದಿನಗಳಲ್ಲಿ ಬೆಂ.ಮ.ಸಾ.ಸಂಸ್ಥೆಯ ಸಾರಿಗೆ ಸೇವೆಗಳ ಕಾರ್ಯಾಚರಣೆ


ಬೆಂಗಳೂರು,  ಜೂನ್ 25  (ಕರ್ನಾಟಕ ವಾರ್ತೆ):  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ ಹಾಗೂ ಸುರಕ್ಷಿತ ಸೇವೆಯನ್ನು ಒದಗಿಸಲು ಕೋವಿಡ್ - 19ರ ನಿರ್ಬಂಧಗಳ  ಸಡಿಲಿಕೆಯ ನಂತರ ರಾಜ್ಯ ಸರ್ಕಾರವು ದಿನಾಂಕ 25-06-2021, ಶುಕ್ರವಾರ ಸಂಜೆ 07:00 ಗಂಟೆಯಿಂದ   ದಿನಾಂಕ 28-06-2021 ಸೋಮವಾರ ಬೆಳಿಗ್ಗೆ 05:00 ಗಂಟೆಯವರೆಗೆ ವಾರಾಂತ್ಯ ಕಪ್ರ್ಯೂ ಜಾರಿಗೊಳಿಸಿದೆ.  ಸದರಿ ಅವಧಿಯಲ್ಲಿ, ದೈನಂದಿನ ವಸ್ತುಗಳಾದ ಹಾಲು, ತರಕಾರಿ, ಹಣ್ಣು, ದಿನಸಿ ಹಾಗೂ ಔಷಧಾಲಯ ಇತ್ಯಾದಿಗಳನ್ನು ಹೊರತುಪಡಿಸಿ, ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಹಾಗೂ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿರುತ್ತದೆ. ಆದುದರಿಂದ, ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯು ಸಹ ಕಡಿಮೆಯಾಗಲಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸಾರಿಗೆ ಸೇವೆಗಳನ್ನು ಕಡಿಮೆಗೊಳಿಸಲಾಗಿದೆ.


ದಿನಾಂಕ 26-06-2021 ಮತ್ತು 27-06-2021 ರಂದು ಸಂಸ್ಥೆಯು ಪ್ರಸ್ತುತ ಕಾರ್ಯಾಚರಣೆಗೊಳಿಸುತ್ತಿರುವ 4000 ಸಾರಿಗೆಗಳಲ್ಲಿ ಶೇ.30 ರಷ್ಟು ಅಂದರೆ 1200 ಸಾರಿಗೆಗಳನ್ನು ಮಾತ್ರ ಕಾರ್ಯಾಚರಣೆಗೊಳಿಸಲಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement