Ticker

6/recent/ticker-posts

Ad Code

Responsive Advertisement

ಮಂಡ್ಯ ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ರಶ್ಮಿ ನೇತೃತ್ವದಲ್ಲಿ ಪಡಿತರ ಕಿಟ್ ವಿತರಣೆ

ಸಂಕಷ್ಟದಲ್ಲೂ ಬಡವರ ನೆರವಿಗೆ ಧಾವಿಸದ ಬಿಜೆಪಿ ಸರ್ಕಾರ ಅಧಿಕಾರದಿಂದ ನಿರ್ಗಮಿಸಲಿ : ರಕ್ಷಾ ರಾಮಯ್ಯ

 ಮಂಡ್ಯ, ಜೂ 16:  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನ ಸಾಮಾನ್ಯರನ್ನು ಭಾರೀ ಪ್ರಮಾಣದಲ್ಲಿ ಸಂಕಷ್ಟಕ್ಕೆ ದೂಡಿದ್ದು, ಬಡವರ ನೆರವಿಗೆ ಧಾವಿಸದ ಬಿಜೆಪಿಯನ್ನು ತಿರಸ್ಕರಿಸಿ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಕರೆ ನೀಡಿದ್ದಾರೆ.

ನಗರದ ಸಿಹಿನೀರು ಕೊಳದ ಬಳಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ರಶ್ಮಿ ಶಿವಕುಮಾರ್ ನೇತೃತ್ವದಲ್ಲಿ ಕೊರೊನಾ ಸೇನಾನಿಗಳಾದ ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ಪಡಿತರ ಕಿಟ್ ವಿತರಣೆ ಮತ್ತು ಕೋವಿಡ್‌ನಿಂದ ಮೃತಪಟ್ಟವರ  ಶವಗಳನ್ನು ಮಾನವೀಯತೆಯಿಂದ ಅಂತ್ಯ ಸಂಸ್ಕಾರ ಮಾಡುತ್ತಿರುವವರನ್ನು ಗೌರವಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  ಬಿಜೆಪಿಯವರು ಬಡವರಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಯುವ ಕಾಂಗ್ರೆಸ್ ನಿಂದ ಆಹಾರಧಾನ್ಯ ಕಿಟ್‌ಗಳನ್ನು ವಿತರಿಸಲಾತ್ತಿದೆ ಎಂದು ಹೇಳೀದರು.

 ರಾಜ್ಯದಲ್ಲಿ ಲಾಕ್ ಡೌನ್ ಮತ್ತು ಸೀಲ್‌ಡೌನ್ ದಿನಗಳಲ್ಲಿ ಬಡವರು ಜೀವನ ನಡೆಸಲು ಕಷ್ಟವಾಗುತ್ತಿದೆ, ಇವರ ನೋವಿಗೆ ಸ್ಪಂದಿಸದ ಸರ್ಕಾರಗಳು ರಾಜಕೀಯ ಜಂಜಾಟದಲ್ಲಿ ತೊಡಗಿವೆ. ಇಂತಹ ಸರ್ಕಾರಗಳು ಅಧಿಕಾರದಲ್ಲಿ ಏಕಿರಬೇಕು. ಬಹುಬೇಗ ತೊಲಗಲಿ ಜನರಿಗೆ ನೆಮ್ಮದಿ ದೊರೆಯಲಿದೆ ಎಂದರು.

 ಕೋರೋನಾ ಸಂದರ್ಭದಲ್ಲಿ ಸರ್ಕಾರ ಜನರಿಗೆ ಉಪಯೋಗವಾಗುವಂತಹ ಯಾವುದೇ ನೆರವು-ಸೌಲಭ್ಯಗಳನ್ನು ನೀಡುತ್ತಿಲ್ಲ. ಸರ್ಕಾರ ಒಂದು ಕಡೆ ಸಣ್ಣಪುಟ್ಟ ಪ್ಯಾಕೇಜ್ ಗಳನ್ನು ಘೋಷಿಸಿದೆ. ಆದರೆ ಸರ್ಕಾರ ನೀಡುವ ನೆರವು ಸಾಲಕ್ಕೆ ಜಮೆಯಾಗುತ್ತಿದೆ. ಬೆಲೆ ಏರಿಕೆ ಸೇರಿದಂತೆ ಸಂಕಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿರುವ ಇಂತಹ ಸರ್ಕಾರಗಳಿಂದ ಯಾರಿಗೂ ಉಪಯೋಗವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


 ಜನರ ನೋವಿಗೆ ಯುವ ಕಾಂಗ್ರೆಸ್ ಅತ್ಯುತ್ತಮವಾಗಿ ಸ್ಪಂದಿಸುತ್ತಿದೆ. ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ರಶ್ಮಿಶಿವಕುಮಾರ್ ನೇತೃತ್ವದಲ್ಲಿ ಕಡು ಬಡವರಿಗೆ ಮತ್ತು ಗೃಹರಕ್ಷಕದಳದವರಿಗೆ ಪಡಿತರ ಕಿಟ್‌ಗಳನ್ನು ನೀಡಿ ಅಳಿಲುಸೇವೆ ಮಾಡುತ್ತ ಮಾನವೀಯತೆ ಮೆರೆಯುತ್ತಿದ್ದಾರೆ, ಸ್ಥಳೀಯರ ನೋವಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದು ನುಡಿದರು.

 ಬಳಿಕ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷೆ ರಶ್ಮಿಶಿವಕುಮಾರ್, ಮನುಷ್ಯ ಮನುಷ್ಯರಿಗೆ ನರವಾಗುವುದು ಮಾನವೀಯತೆಯಾಗಿದೆ. ಮಾನವೀಯ ನೆರವು ನೀಡುವುದು ನಮ್ಮ ಯುವ ಕಾಂಗ್ರೆಸ್ ನ ಗುರಿಯಾಗಿದೆ. ಸ್ಥಳೀಯವಾಗಿ ಇಂದು 250 ಬಡವರಿಗೆ ತಾತ್ಕಾಲಿಕವಾಗಿ ಅಹಾರ ಪದಾರ್ಥಗಳನ್ನು ನೀಡಿದೇವೆ. ಸಹಾಯ ಹಸ್ತ ಚಾಚುವುದನ್ನು ಹೀಗೆ ನಿರಂತರವಾಗಿ ಮುಂದುವರೆಸುತ್ತೇವೆ ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಮ್ಮ ಹೆಮ್ಮೆ ನಮ್ಮ ಪೋಲಿಸ್ ಕಾರ್ಯಕ್ರಮ ಅಂಗವಾಗಿ ಕೊವಿಡ್-19 ಸೇನಾನಿಗಳಾದ ಪೊಲೀಸ್‌ ಸಬ್ ಇನ್ಸ್ ಪೆಕ್ಟರ್ ಸಂತೋಷಕುಮಾರ್ ಮೂಲಕ ಮಾಸ್ಕ್, ಸ್ಯಾನಿಟೈಜನರ್‌, ರಕ್ಷಣಾ ಪರಿಕರಗಳನ್ನು  ವಿತರಿಸಿದರು. ಕೆರಗೋಡು ಪೊಲೀಸ್ ಠಾಣೆ ಯಲ್ಲಿ  ಪೊಲೀಸರನ್ನು ಗೌರವಿಸಲಾಯಿತು.

ಬಳಿಕ ರಕ್ಷಾ ರಾಮಯ್ಯ ನೇತೃತ್ವದಲ್ಲಿ ಶಿವನಂಜಪ್ಪ ಉದ್ಯಾನವನ ಮತ್ತಿತರ ಕಡೆಗಳಲ್ಲಿ ಸಸಿಗಳನ್ನು ನೆಡಲಾಯಿತು.

 ನಂತರ ತಾಲೂಕಿನ ಬಿಳಿದೇಗಲು ಗ್ರಾಮದಲ್ಲಿ ರೈತರೊಂದಿಗೆ ಸಂವಾದ ನಡೆಸಿ ಅವರು  ಬೆಳೆದ ಟಮೋಟ ಹಣ್ಣು ಖರೀದಿ ಮಾಡಿದರು. ಆಲಕೆರೆ  ಗ್ರಾಮ ಗ್ರಾಮದಲ್ಲಿ ರೈತರಿಂದ ಆಲೆಮನೆಯಲ್ಲಿ ನೇರವಾಗಿ ಬೆಲ್ಲ ಖರೀದಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ, ಪ್ರಧಾನ ಕಾರ್ಯದರ್ಶಿ ಚೈತ್ರಾ, ಕಾರ್ಯದರ್ಶಿ ಪ್ರದೀಪ್, ರಾಜೇಶ್, ಜಿಲ್ಲಾದ್ಯಕ್ಷ ಎಚ್ ಬಿ ವಿಜಯಕುಮಾರ್, ಉಪಾಧ್ಯಕ್ಷ ಸಂತೋಷ್‌ಕುಮಾರ್, ಜಬೀಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement