Ticker

6/recent/ticker-posts

Ad Code

Responsive Advertisement

ಅತ್ಯಾಚಾರ ಪ್ರಕರಣ: ಎಐಎಡಿಎಂಕೆ ಮಾಜಿ ಸಚಿವ ಬಂಧನ

ಬೆಂಗಳೂರು, ಜೂನ್ 20: ಮಾಜಿ ಸಚಿವ ಎಂ ಮಣಿಕಂಠನ್ ಅವರನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿರುವ ಸುದ್ದಿ ಬಂದಿದೆ. ಮಲೇಷ್ಯಾದ ಮಹಿಳೆಯೊಬ್ಬರ ವಂಚಿಸಿ, ಅತ್ಯಾಚಾರ ಎಸಗಿದ ಆರೋಪ ಎಸಗಿದ್ದಾರೆ ಎನ್ನಲಾಗುತ್ತಿದೆ. ಮಣಿಕಂಠನ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಪಕ್ಕಕ್ಕೆ ತಳ್ಳಿತ್ತು.

ಕಳೆದ 5 ವರ್ಷಗಳಿಂದ ನಾನು ಲಿವ್ ಇನ್ ಸಂಬಂಧದಲ್ಲಿದ್ದೆ, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ, ಮೂರು ಬಾರಿ ಗರ್ಭಧರಿಸಿದ್ದೆ, ಬಲವಂತವಾಗಿ ಗರ್ಭಪಾತ ಮಾಡಿಸಿದರು,'' ಎಂದು ಮಲೇಷ್ಯಾ ಮೂಲದ ಭಾರತೀಯ ಮಹಿಳೆ ಶಾಂತಿನಿ ದೇವಾ ಆರೋಪಿಸಿದ್ದಾರೆ.

ಎಐಎಡಿಎಂಕೆ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಮಣಿಕಂಠನ್‍ಗೆ 2017ರಲ್ಲಿ ಶಾಂತಿನಿ ಪರಿಚಯವಾಗಿದೆ. ದಕ್ಷಿಣ ಏಷ್ಯಾದ ಪ್ರವಾಸಿ ರಾಯಭಾರಿಯಾಗಿದ್ದ ಶಾಂತಿನಿಗೆ ಮಲೇಷ್ಯಾದಲ್ಲಿ ಹೂಡಿಕೆ ಸಂಬಂಧ ಮಾತುಕತೆ ಮಾಡಲು ಮಣಿಕಂಠನ್ ಕರೆಸಿಕೊಂಡಿದ್ದಾರೆ. ಅಡ್ಯಾರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 376, 323, 417, 323, 506, ಐಟಿ ಕಾಯ್ದೆಯಡಿಯಲ್ಲಿ ಮಣಿಕಂಠನ್ ವಿರುದ್ಧ ಪ್ರಕರಣ ದಾಖಲಾಗಿದೆ.

ರಾಮನಾಥಪುರಂ ಕ್ಷೇತ್ರದಿಂದ 2016ರಿಂದ 2019ರ ತನಕ ಶಾಸಕರಾಗಿ ಆಯ್ಕೆಯಾಗಿರುವ ಮಣಿಕಂಠನ್ ಈಗಾಗಲೇ ಮದುವೆಯಾಗಿದೆ. ಆದರೂ ಶಾಂತಿನಿ ಜೊತೆ ಮಣಿಕಂಠನ್ ಲಿವ್ ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವಂತೆ ಬೇಡಿಕೆ ಒಡ್ಡಿದರೆ, ಬೆದರಿಕೆ ಹಾಕುತ್ತಿದ್ದರು ಎಂದು ಶಾಂತಿನಿ ಅವರು ಆರೋಪಿಸಿದ್ದಾರೆ.


ADVERTISEMENT



Post a Comment

0 Comments

Ad Code

Responsive Advertisement