Ticker

6/recent/ticker-posts

Ad Code

Responsive Advertisement

*ಕುಹೂ ಕುಹೂ ಕೋಗಿಲೆ.. ಏನಿದೆ ಕೂಗಲಿ? - ಯೋಗಶ್ರೀ ವರ್ಧಮಾನ ಕಳಸೂರು

ಕುಹೂ ಕುಹೂ ಕೋಗಿಲೆ

ಮಧುರ ರಾಗ ಎನ್ನಲೆ?

ಹಸಿರು ಮರೆಯಲವಿತು

ಹೇಳುತಿರುವೆ ಏನು ನಮ್ಮಲಿ.


ಸರಮಾಲೆಯ ನೋವುಗಳ

ಸಾವುಗಳ ರಾಶಿಯಡಿಯಲ್ಲಿ

ಸಂಬಂಧಗಳ ಕಳಚುವಡೆ

ಅರ್ಥವೇನಿದೆ ನಿನ್ನ ರಾಗದಲಿ?


ಶಾಲೆಯಲ್ಲಿಲ್ಲ ಕಲಿಯುವವರು

ಕೆಲಸವಿಲ್ಲ ಕಲಿಸುವವರಿಗೆ

ದುಡಿಯುವವರೆಲ್ಲಾ ಮನೆ ಸೇರಿ

ಹೇಳು ಏನಿದೆ ನಿನ್ನರಾಗದಲಿ?


ಬದುಕನು ಕಳೆದುಕೊಂಡ

ಕುಗ್ಗಿ ಹೋದ ಮನಗಳಿಗೆ

ಎದೆಯು ಹಿಗ್ಗುವ ಸ್ಪೂರ್ತಿ

ಕುಹೂ ಕೂಗು ನಿನ್ನದಾಗಲಿ.


ಜೀವ ತೊರೆದ ದೇಹವನ್ನು

ತಿರುಗಿ ನೋಡದ ಜನರನು,

ಮುಕ್ತಿ ಕಾಣದ ಆತ್ಮಗಳಿಗೆ

ಕೋರು ಶಾಂತಿಯ ಮಂತ್ರವನ್ನು.


 ಸತಿ-ಪತಿಯರು ನೋಡದ ಸ್ಥಿತಿಗತಿ

ಸಂತಯಿಸಲಾಗದ ಮಾತಾ-ಪಿತ

ಅನಾಥರಾದ ಕರುಳ ಕುಡಿಗಳು

ಏನಿದೆ ನಿನ್ನ ಕುಹೂ ರಾಗದಲಿ?


ಬಹುಕೋಟಿ ವಾಸಿಗಳಿಗೆಲ್ಲ

ಸಿಗಲಿ ಬೇಗ ಮದ್ದು-ಲಸಿಕೆ

ಬದುಕುವಾಸೆ ಚಿಗುರಲಿ

ಕೂಗು ನೀ ಮಧುರ ದನಿಯಲಿ.


- ಯೋಗಶ್ರೀ ವರ್ಧಮಾನ ಕಳಸೂರು

Post a Comment

0 Comments

Ad Code

Responsive Advertisement