Ticker

6/recent/ticker-posts

Ad Code

Responsive Advertisement

ಯಲಹಂಕ ಬಿಬಿಎಂಪಿ ಕಚೇರಿ ಮುಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಪ್ರತಿಭಟನೆ

ಯಲಹಂಕ ದಲ್ಲಿ ಇಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರ ಅಧ್ಯಕ್ಷ ಮೋಹನ್ ದಾಸರಿ  ರವರ ನೇತೃತ್ವದಲ್ಲಿ ಬಿಬಿಎಂಪಿ ಕಚೇರಿಯ ಎದುರು ಜಮಾಯಿಸಿ ಶಾಸಕ ಎಸ್. ಆರ್. ವಿಶ್ವನಾಥ್ ವಿರುದ್ಧ ಪ್ರತಿಭಟಿಸಿದರು. ಸರ್ಕಾರವು ದುರ್ಬಲ ವರ್ಗಗಳಿಗೆ ಘೋಷಿಸಿರುವ ಕೊರೋನಾ ಪ್ಯಾಕೇಜ್ ಅನ್ನು  ಆನ್ ಲೈನ್ ಮೂಲಕ  ತಲುಪಿಸುವ ಪಕ್ಷದ ಆಪ್ ಸಹಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿದ್ದ ಬಿಜೆಪಿ ಬೆಂಬಲಿಗರು ಹಾಗೂ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ, ರಾಜ್ಯ ಹಿಂದುಳಿದ ವಿಭಾಗದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ , ಬೆಂಗಳೂರು ನಗರ ಎಸ್ಸಿ ಎಸ್ಟಿ ವಿಭಾಗದ ಅಧ್ಯಕ್ಷ ಜಯಕುಮಾರ್, ಬೆಂಗಳೂರು ರಾಜಕೀಯ ವ್ಯವಹಾರಗಳ ಅಧ್ಯಕ್ಷ ಪಣಿರಾಜ್, ಸುಹಾಸಿನಿ, ಉಷಾ ಮೋಹನ್,ಪ್ರಕಾಶ್ ಹಾಗೂ  ಇನ್ನಿತರ ಸ್ಥಳೀಯ ಸಾರ್ವಜನಿಕರುಗಳು  ಭಾಗವಹಿಸಿದ್ದರು.





Post a Comment

0 Comments

Ad Code

Responsive Advertisement