Ticker

6/recent/ticker-posts

Ad Code

Responsive Advertisement

ಮೆಟ್ರೋ - ಬಿಎಂಟಿಸಿ - ಕೆಎಸ್ ಆರ್ ಟಿಸಿ ಸಂಚಾರಕ್ಕೆ ಸರ್ಕಾರ ಅನುಮತಿ

ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸೋಮವಾರದಂದು ಬೆಳಗ್ಗೆ 6 ಗಂಟೆಯಿಂದ ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಸಂಚಾರ ಆರಂಭವಾಗಿದ್ದು, ಪ್ರತಿಶತ 50 ಪ್ರಯಾಣಿಕರಿಗೆ ಮಾತ್ರ ಇಲ್ಲಿ ಸಂಚಾರಕ್ಕೆ ಕಲ್ಪಿಸಲಾಗಿದೆ. ಸಾಮಾನ್ಯ ಸಾರಿಗೆ ಬಸ್‍ಗಳಿಗೆ ಮಾತ್ರ ಅವಕಾಶ. ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ,  ಡ್ರೈವರ್ ಕಂಡಕ್ಟರ್ ಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಎಂದು ಹೇಳಲಾಗಿದೆ. ಈಗಾಗಲೇ ಶೇ.90ರಷ್ಟು ಚಾಲಕ-ನಿರ್ವಾಹಕರಿಗೆ ವ್ಯಾಕ್ಸಿನ್ ಹಾಕಲಾಗಿದೆ. ಇಂದಿನಿಂದ 1500-2000 ಬಿಎಂಟಿಸಿ ಬಸ್‍ಗಳು ಕಾರ್ಯಾಚರಣೆ ನಡೆಸಲಿವೆ.  ಬಿಎಂಟಿಸಿಯಲ್ಲಿ ದಿನದ ಪಾಸ್ ನೀಡಲು ಚಿಂತನೆ ನಡೆಸಲಾಗಿದೆ. ಕ್ಯಾಶ್‍ಲೆಸ್ ಮಾಡುವ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. 

ಇಂದಿನಿಂದ ಬಿಎಂಟಿಸಿ ಬಸ್‍ಗಳು ರಸ್ತೆಗಿಳಿದಿವೆ.  ಬೆಂಗಳೂರು ನಗರ ಹಾಗೂ ಹೊರ ಭಾಗದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ಗಂಟೆಯ ನಂತರ ಬಿಎಂಟಿಸಿ ಓಡಾಟ ಇರಲ್ಲ.  ಸಂಜೆ 7 ಗಂಟೆಗೆ ಬಸ್‍ಗಳು ನಿಲ್ದಾಣದಿಂದ ನಿರ್ಗಮಿಸಲಿವೆ. ಬೆಳ್ಳಂಬೆಳಿಗ್ಗೆ ಹಾಗೂ ತಡರಾತ್ರಿ ಬಸ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ಬಿಎಂಟಿಸಿ ಸಿಬ್ಬಂದಿಗಳ ಅವಧಿಯನ್ನ 8 ಗಂಟೆ ಮೀರದಂತೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಡಿಪೋಗಳಲ್ಲಿ 5 ಹೆಚ್ಚುವರಿ ಬಸ್ ಗಳನ್ನ ಕಾಯ್ದಿರಿಸುವುದು.  ಬಸ್‍ಗಳಲ್ಲಿ ಮಾರ್ಗಸೂಚಿ ಫಲಕ ಕಡ್ಡಾಯವಾಗಿ ಪ್ರದರ್ಶಿಸುವುದು. ಇಂತಹ ಕ್ರಮಗಳನ್ನು ಬಿಎಂಟಿಸಿ ತೆಗೆದುಕೊಂಡಿದೆ.

ಕೆಎಸ್‍ಆರ್‍ಟಿಸಿ ಆರಂಭ : 1500 ಕೆಎಸ್ ಆರ್ ಟಿಸಿ ಬಸ್‍ಗಳ ಸಂಚಾರ ಆರಂಭಗೊಂಡಿದೆ. ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಬಸ್‍ಗಳನ್ನು ಓಡಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸದ್ಯಕ್ಕೆ ಒಂದೊಂದು ಡಿಪೋದಿಂದ ಕೇವಲ 50 ಬಸ್‍ಗಳನ್ನು ಆಪರೇಟ್ ಮಾಡಲು ನಿರ್ಧರಿಸಲಾಗಿದ್ದು,  ಹೆಚ್ಚು ಪ್ರಯಾಣಿಕರೆದ್ದೆಡೆ ಬಸ್ ಸಂಚಾರವೂ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

50%ರಷ್ಟು ಪ್ರಯಾಣಿಕರಿಗೆ ಮಾತ್ರ ಆದ್ಯತೆ ಹಿನ್ನಲೆ, ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ 230 ಕೆಎಸ್ ಆರ್ ಟಿ ಸಿ ಬಸ್ ಡಿಪೋಗಳಿವೆ. ಕೆಲಸಕ್ಕೆ ಬರುವ ಎಲ್ಲಾ ಚಾಲಕರು, ನಿರ್ವಾಹಕರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರಬೇಕು.ಕೆಎಸ್‍ಆರ್‍ಟಿಸಿಯಲ್ಲೂ ಶೇಕಡಾ 50% ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ನಿಂತು ಪ್ರಯಾಣ ಮಾಡಲು ಅವಕಾಶವಿಲ್ಲ. ಇಬ್ಬರು ಕುಳಿತುಕೊಳ್ಳುವ ಸೀಟ್ ನಲ್ಲಿ ಒಬ್ಬರು, ಮೂವರು ಕುಳಿತುಕೊಳ್ಳುವ ಸೀಟ್ ನಲ್ಲಿ ಇಬ್ಬರಿಗೆ ಅವಕಾಶ ನೀಡಲಾಗಿದೆ.

ಎಸಿ ಬಸ್‍ಗಳ ಸಂಚಾರ ನಿಷೇಧಿಸಿದ್ದು, ಹೊರ ರಾಜ್ಯಗಳಿಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಇರುವುದಿಲ್ಲ.  ಪ್ರಯಾಣಿಕರಿಗೆ ಮಾಸ್ಕ್, ಡ್ರೈವರ್ ಮತ್ತು ಕಂಡಕ್ಟರ್ ಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಎಂದು ಹೇಳಲಾಗಿದೆ.

ಇಂದಿನಿಂದ ಬಸ್ ಗಳ ಸಂಚಾರ ಹಿನ್ನೆಲೆ,  ಈಗಾಗಲೇ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನಿಗಮಗಳು ಬಸ್ ಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿವೆ. ನಿನ್ನೆಯೇ ಏSಖಖಿಅ ಬಸ್ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯ ನಡೆದಿದೆ. ಏSಖಖಿಅ ಬಸ್ ನಿಲ್ದಾಣವನ್ನು ಸ್ಯಾನಿಟೈಸ್ ಮಾಡಿ, ಬಳಿಕ ಸಿಬ್ಬಂದಿ ಸ್ವಚ್ಚತಾ ಕಾರ್ಯ ಮಾಡಿದ್ದಾರೆ.


ಇನ್ನು, ಸರ್ಕಾರ   ಅನ್ಲಾಕ್ ವೇಳೆ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿದೆ. ಹೀಗಾಗಿ ಇಂದಿನಿಂದ ನಮ್ಮ ಮೆಟ್ರೋ ಕೂಡ ಸಂಚಾರ ಆರಂಭಿಸಲಿದೆ. ಬೆಳಗ್ಗೆ 7 ಗಂಟೆಯಿಂದ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ.  ಬೆಳಗ್ಗೆ 7ರಿಂದ ಬೆಳಗ್ಗೆ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಪ್ರತೀ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸೇವೆ ಲಭ್ಯವಾಗಲಿದೆ.

ಹಳದಿ ಬಣ್ಣದ ಪಟ್ಟಿಯಲ್ಲಿ ಮಾತ್ರ ಕುಳಿತು, ನಿಂತುಕೊಂಡು ಪ್ರಯಾಣ ಮಾಡಬೇಕು.  ವೀಕೆಂಡ್ ಕರ್ಫೂ ಹಿನ್ನೆಲೆಯಲ್ಲಿ ಶನಿವಾರ, ಭಾನುವಾರ ಮೆಟ್ರೋ ಸಂಚಾರವಿರುವುದಿಲ್ಲ. ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ಮಾತ್ರ ಸಂಚಾರಿಸಲು ಅವಕಾಶ ನೀಡಲಾಗಿದೆ. ನಿಲ್ದಾಣದಲ್ಲೂ ಸ್ಮಾರ್ಟ್ ಕಾರ್ಡ್ ರಿಚಾರ್ಜ್‍ಗೆ ಅವಕಾಶ ನೀಡಲಾಗಿದೆ. ನಿಲ್ದಾಣದಲ್ಲಿ ಪ್ರಯಾಣಿಕರು ಕೋವಿಡ್ ನಿಯಮಾವಳಿ ಪಾಲಿಸಬೇಕು, ಉಷ್ಣಾಂಶ ಚೆಕ್ ಮಾಡಿಕೊಂಡು, ಹ್ಯಾಂಡ್ ಸ್ಯಾನಿಟೈಜರ್ ಬಳಸಿ ನಿಲ್ದಾಣಕ್ಕೆ ಎಂಟ್ರಿಯಾಗಬೇಕು. ಪ್ರಯಾಣಿಕರು ಫೇಸ್ ಮಾಸ್ಕ್ ಧರಿಸಿದ್ರೆ ಮಾತ್ರ ಮೆಟ್ರೋಗೆ ಪ್ರವೇಶ ಇರುತ್ತದೆ. ರೈಲಿನಲ್ಲಿ ಸಾಮಾಜಿಕ ಅಂತರ ಕಡ್ಡಾಯ ಎಂದು  ಬಿಎಂಆರ್ಸಿಎಲ್ ತಿಳಿಸಿದೆ.

Post a Comment

0 Comments

Ad Code

Responsive Advertisement