Ticker

6/recent/ticker-posts

Ad Code

Responsive Advertisement

ಕೆ.ಎಸ್.ಆರ್.ಟಿ.ಸಿ ಅಂತರ ನಿಗಮ ವರ್ಗಾವಣೆಗೆ ಅವಧಿ ವಿಸ್ತರಣೆ

ಬೆಂಗಳೂರು,  ಜೂನ್ 30  (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರವು ಆದೇಶ ಸಂಖ್ಯೆ: ಟಿಡಿ 45 ಟಿಸಿಎಸ್ 2020, ದಿನಾಂಕ:09-03-2021 ಹಾಗೂ ಟಿಡಿ 45 ಟಿಸಿಎಸ್ 2020, ದಿನಾಂಕ:23-03-2021 ರನ್ವಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂ.ಮ.ಸಾ.ನಿಗಮ, ಈ.ಕ.ರ.ಸಾ.ನಿಗಮ ಮತ್ತು ವಾ.ಕ.ರ.ಸಾ.ನಿಗಮಗಳ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ರ ನೌಕರರಿಗೆ ಅಂತರ ನಿಗಮ ವರ್ಗಾವಣೆಗೆ ದಿನಾಂಕ:30-04-2021 ರ ಸಂಜೆ 5:30 ರವರೆಗೆ ಆನ್-ಲೈನ್ ಮೂಲಕ  www.ksrtc.org/transfer     ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಪ್ರಸ್ತುತ, ಕೋವಿಡ್-19 ರ ಹಿನ್ನೆಲೆಯಲ್ಲಿ ದಿನಾಂಕ:27-04-2021 ರಿಂದ ಲಾಕ್‍ಡೌನ್ ಘೋಷಿಸಿದ್ದರಿಂದ ನೌಕರರಿಗೆ ಅರ್ಜಿ ಸಲ್ಲಿಸಲು ಕಷ್ಟಸಾಧ್ಯವಾಗಿರುವುದನ್ನು ಮನಗಂಡು ನೌಕರರ ಅನುಕೂಲಕ್ಕಾಗಿ ಅಂತರ ನಿಗಮ ವರ್ಗಾವಣೆಗೆ ಆನ್-ಲೈನ್ ಮೂಲಕ  www.ksrtc.org/transfer     ರಲ್ಲಿ ಅರ್ಜಿ ಸಲ್ಲಿಸಲು ದಿನಾಂಕ:01.07.2021 ರ ಬೆಳಿಗ್ಗೆ 10.00ಗಂಟೆಯಿಂದ ದಿನಾಂಕ:15.07.2021 ರÀ ಸಂಜೆ 5:30 ರವರೆಗೆ ವಿಸ್ತರಿಸಲಾಗಿದೆ.  ನೌಕರರು ಸದರಿ ಸೌಲಭ್ಯದ ಉಪಯೋಗವನ್ನು ಪಡೆಯಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement