Ticker

6/recent/ticker-posts

Ad Code

Responsive Advertisement

ನನ್ನ ವರ್ಗಾವಣೆ ಹಿಂದಿದೆ ಭೂಮಾಫಿಯಾ ಕರಾಳಹಸ್ತ : ರೋಹಿಣಿ ಸಿಂಧೂರಿ


ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಜೊತೆಗಿನ ಜಟಾಪಟಿ ನಂತರ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ‘ನನ್ನ ವರ್ಗಾವಣೆ ಹಿಂದೆ ಕಣ್ಣಿಗೆ ಕಾಣುವುದಕ್ಕಿಂತ ಬಹುದೊಡ್ಡ ಪಿತೂರಿ ನಡೆದಿದೆ’ ಎಂದು ಆರೋಪ ಮಾಡಿದ್ದಾರೆ. 

ರೋಹಿಣಿ ಸಿಂಧೂರಿ, ‘ನನ್ನ ವರ್ಗಾವಣೆ ಹಿಂದೆ ಭೂ ಮಾಫಿಯಾ ಪಿತೂರಿಯಿದೆ. ಎಲ್ಲಾದಕ್ಕೂ ಜನರು ಸಾಕ್ಷಿಯಾಗಿದ್ದಾರೆ, ಎಲ್ಲಾ ಕಡೆ ಇದು ಸಾಮಾನ್ಯವಾಗಿದೆ. ಏನೇನು ನಡೆದಿದೆ ಎಂಬುದನ್ನು ಅಧಿಕಾರಿಗಳು ಎಲ್ಲವನ್ನು ಹೇಳಲು ಸಾಧ್ಯವಿಲ್ಲ, ಸರ್ಕಾರಿ ಭೂಮಿ ಮತ್ತು ಕೆರೆಗಳನ್ನು ರಕ್ಷಿಸುವುದಷ್ಟೇ ನನ್ನ ಗುರಿ’ ಎಂದು ಹೇಳಿದ್ದಾರೆ.

ಅಯ್ಯಜನಹುಂಡಿ ಮತ್ತು ಕೀರ್ಗಳ್ಳಿ ಕೆರೆಗಳ ಸುತ್ತಲಿನ ಒತ್ತುವರಿಯನ್ನು ತೆರವುಗೊಳಿಸಲು ನಾವು ಕ್ರಮ ಕೈಗೊಂಡಿದ್ದೇವೆ. ಕುರುಬರಹಳ್ಳಿಯಲ್ಲಿ ಸರ್ವೆ ಸಂಖ್ಯೆಯಲ್ಲಿ ಕೆಲವು ಸಮಸ್ಯೆಗಳಿದ್ದು ಅದು ಸುಪ್ರೀಂ ಕೋರ್ಟ್‌ಗೆ ಹೋಯಿತು. ಕೋರ್ಟ್ ನಲ್ಲಿ ಪ್ರಕರಣವನ್ನು ಚೆನ್ನಾಗಿ ಸಮರ್ಥಿಸಿಕೊಂಡಿದ್ದೇವೆ ಎಂದು ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿ ವರ್ಗಾವಣೆಯಾಗಿರುವ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ರೋಹಿಣಿ ಸಿಂಧೂರಿ ಭೂ ಮಾಫಿಯಾವನ್ನು ವಿರುದ್ಧ ಕ್ರಮ ಕೈಗೊಳ್ಳಲು ಎಂಟು ತಿಂಗಳು ಸಮಯ ತೆಗೆದುಕೊಂಡಿದ್ದಾರೆ, ಈ ಬಗ್ಗೆ ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಹೀಗೆ ಯಾವ ಜಿಲ್ಲೆಯಲ್ಲಿ, ಸಂಸ್ಥೆಯಲ್ಲಿ ನಡೆದರೂ ಸಂಸ್ಥೆ ನಡೆಸುವುದು ಕಷ್ಟವಾಗುತ್ತದೆ, ಆದರೆ ನನಗೆ ಶಿಲ್ಪಾ ನಾಗ್ ಅವರ ಹತಾಶೆ, ಅಭದ್ರತೆ ಬಗ್ಗೆ  ಅನುಕಂಪವಿದೆ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.  ಈಗ ಜನರಿಗೆ ಬೇಕಿರುವುದು ಕೋವಿಡ್ ನಿರ್ವಹಣೆ, ಅದು ಆಗಲಿ ಎಂದು ಆಶಿಸುತ್ತೇನೆ ಎಂದರು.

Post a Comment

0 Comments

Ad Code

Responsive Advertisement