ಕೊರೊನಾ ಚಿಕಿತ್ಸೆ ಸಮಯದಲ್ಲೇ ಬ್ಲಾಕ್ ಫಂಗಸ್ ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಿರಿ
-ಡಾ|| ರಾಕೇಶ್ ಮತ್ತು ಡಾ || ಮಲ್ಲಿಕಾರ್ಜುನ ಸಲಹೆ
ಬಳ್ಳಾರಿ ಜೂನ್ 06. ದೇಶದಲ್ಲಿ ಬ್ಲಾಕ್ ಫಂಗಸ್ ಜನತೆಯನ್ನು ಕಾಡುತ್ತಿದೆ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆಯುವಾಗ ಮೂಗಿನ ಸುತ್ತ ಕೆಂಪಾಗುವದು , ತಲೆ ನೋವು , ಕೆಮ್ಮು , ಕಣ್ಣಿನ ಕೆಳಗಡೆ ಉಬ್ಬುವದು ಕಂಡು ಬಂದರೆ ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ತಿಳಿಸಿ ಅವರ ಸಲಹೆ ಮೇರೆಗೆ ಬ್ಲಾಕ್ ಫಂಗಸ್ ಪರೀಕ್ಷಿಸಿಕೊಳ್ಳಲು ಕ್ಲಾರಿಟಿ ಡಯಾಗ್ನೋಸ್ಟಿಕ್ಸ್ನ ಡಾ|| ರಾಕೇಶ್ ಮತ್ತು ರೆಡಿಯಾಲಜಿಸ್ಟ್ ಡಾ|| ಮಲ್ಲಿಕಾರ್ಜುನ ರವರು ಸಾರ್ವಜನಿಕರಿಗೆ ತಿಳಿಸಿದ್ದಾರೆ. ಕಳೆದ 15 ದಿನಗಳಲ್ಲಿ 35 ಕ್ಕೂ ಅಧಿಕ ಜನರಿಗೆ ನಮ್ಮಲ್ಲಿ ಪರೀಕ್ಷೆ ಮಾಡಿದಾಗ ಅವರಿಗೆ ಬ್ಲಾಕ್ ಫಂಗಸ್ ಧೃಡ ಪಟ್ಟಿರುವದು ಆತಂಕಕಾರಿ ವಿಷಯ ವಾಗಿದೆ, ಅಲ್ಲದೇ ಬ್ಲಾಕ್ ಫಂಗಸ್ ಧೃಡ ಪಟ್ಟವರೆಲ್ಲರೂ ಕೊರೊನಾ ಸೋಂಕು ಚಿಕಿತ್ಸೆ ಪಡೆದು ಆರೋಗ್ಯವಾಗಿ ಮನೆಗೆ ಹೋದ ನಂತರ ಅವರು ಪುನಃ ಬ್ಲಾಕ್ ಫಂಗಸ್ ಪರೀಕ್ಷೆಗೆ ಬಂದವರು ಆಗಿರುತ್ತಾರೆ ಎಂದು ತಿಳಿಸಿದ್ದಾರೆ.
ಬ್ಲಾಕ್ ಫಂಗಸ್ ಲಕ್ಷಣಗಳು: ಕೊರೊನಾ ಸೋಂಕಿತರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಅದರಲ್ಲೂ ಸ್ಟೀರಾಯ್ಡ್ ಬಳಸಿದವರಲ್ಲಿ ದೇಹ ಇನ್ನಷ್ಟು ಬಳಲಿರುತ್ತದೆ ಹೀಗಾಗಿ ಬ್ಕಾಕ್ ಫಂಗಸ್ ಮೂಗಿನ ಮೂಲಕ ದೇಹವನ್ನು ಸೇರುತ್ತದೆ ತಕ್ಷಣವೇ ಕಣ್ಣು ,ಮೆದುಳಿಗೆ ಆವರಿಸುತ್ತದೆ. ಬ್ಲಾಕ್ ಫಂಗಸ್ ಮೂಗಿಗೆ ತಗುಲಿದಾಗ ತಕ್ಷಣವೇ ಎಚ್ಚರಗೊಂಡು ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರೆ ಸುಲಭವಾಗಿ ಗುಣಮುಖ ರಾಗಬಹುದು ಇಲ್ಲದಿದ್ದರೆ ಅದು ಕಣ್ಣಿಗೆ ತಗುಲಿದರೆ ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಇದೆ,ಮೆದುಳಿಗೆ ಬ್ಲಾಕ್ ಫಂಗಸ್ ಆವರಿಸಿದರೆ ಇನ್ನೂ ಕಷ್ಟಕರ ಆಗುತ್ತದೆ. ಹೀಗಿರುವಾಗ ಮೇಲಿನ ಲಕ್ಷಣಗಳು ಕಂಡು ಬಂದರೆ ಎಂ ಆರ್ ಐ ಸ್ಕ್ಯಾನ್ ಜೊತೆಗೆ ಕಾಂಟ್ರಾಸ್ಟ್ ಸ್ಡಡಿ ಮೂಲಕ ಬ್ಲಾಕ್ ಫಂಗಸ್ ಕಂಡು ಹಿಡಿಯ ಬಹುದಾಗಿದೆ ಎಂದು, ಕೋವಿಡ್ ಬಗ್ಗೆ ಭಯಪಡದೇ ಎಚ್ಚರದಿಂದಿದಬೇಕೆಂದು, ಸಾಮಾಜಿಕ ಅಂತರ,ಮಾಸ್ಕ್,ಸಾನಿಟೈಜರ್ ಬಳಕೆ ಮಾಡಬೇಕೆಂದು ಡಾ|| ರಾಕೇಶ್ ಮತ್ತು ಡಾ|| ಮಲ್ಲಿಕಾರ್ಜುನ ರವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ವರದಿ : ಬಿ.ಪಂಪನಗೌಡ.ಬಳ್ಳಾರಿ.9886633682


0 Comments