Ticker

6/recent/ticker-posts

Ad Code

Responsive Advertisement

BELLARY : “ಯಡ್ಯೂರಪ್ಪ ಬಿಜೆಪಿ ಪಕ್ಷಕ್ಕೆ ಆಕ್ಸಿಜನ್ ಇದ್ದಂತೆ”

ಮುಖ್ಯಮಂತ್ರಿ ಸ್ಥಾನ ಯಾರಿಗಾದರು ನೀಡಿ ನಮ್ಮ ಸಹ ಮತ, ಬಳ್ಳಾರಿ ಜಿಲ್ಲಾ ಮಠಾಧೀಶರ ಧರ್ಮಪರೀಷತ್

ಬಳ್ಳಾರಿ ಜೂನ್ 17. ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ  ಬಿ.ಎಸ್.ಯಡಿಯೂರಪ್ಪ ಆಕ್ಸಿಜನ್ ಇದ್ದಂತೆ. ಯಡ್ಯೂರಪ್ಪ ಇಲ್ಲದಿದ್ರೆ ಆಕ್ಸಿಜನ್ ಲೆವೆಲ್, 40ಕ್ಕೆ ಇಳಿಯಲಿದೆ ಎನ್ನುವ ಮೂಲಕ, ಬಳ್ಳಾರಿ ಜಿಲ್ಲೆಯ ಮಠಾಧೀಶರ ಧರ್ಮ ಪರೀಷತ್‌ನ ಇಪ್ಪತ್ತಕ್ಕು ಹೆಚ್ಚು ಸ್ವಾಮೀಜಿಗಳು ಸೇರಿ ಬಿಎಸ್‌ವೈ ಪರ ಪತ್ರಿಕಾಗೋಷ್ಠಿ ನಡೆಸಿದರು.ನಗರದ ಕಲ್ಯಾಣಮಠದ ಆಶ್ರಮದಲ್ಲಿ ಕಲ್ಯಾಣಶ್ರೀಗಳು ಸೇರಿದಂತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 20ಕ್ಕು ಹೆಚ್ಚು ಮಠಾಧೀಶರು, ರಾಜ್ಯದಲ್ಲಿ ತಲೆದೂರಿರುವ ನಾಯಕತ್ವ ಬದಲಾವಣೆ ವಿಚಾರವನ್ನ ಖಂಡಿಸಿದ್ದು. ಲಿಂಗಾಯಿತ ಧರ್ಮದ ವ್ಯೆಕ್ತಿಗಳು ಸಿಎಂ ಆದಾಗಲೆಲ್ಲ ಇಂತಾ ಗೊಂದಲ ಸೃಷ್ಟಿಯಾಗುತ್ತಿದೆ. ಯಡ್ಯೂರಪ್ಪನವರು ವಯಸ್ಸಾಗಿದ್ದರು ಅವರ ಕಾರ್ಯ ವೈಕರಿ, ಯುವಕರನ್ನ ನಾಚಿಸುವಂತಿದೆ. 

ಸಿಎಂ ಮಕ್ಕಳು ರಾಜಕೀಯದಲ್ಲಿ ಭ್ರಷ್ಟಾಚಾರ ನಡೆಸುವ ಮೂಲಕ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಕೆಲ ಸಚಿವರ ಹೇಳಿಕೆಗೆ, ಕಾನೂನು ಕ್ರಮ ಕೈಗೊಳ್ಳಿ ಎಂದು ಮಠಾಧೀಶರು ತಿಳಿಸಿದ್ದಾರೆ.ರಾಜ್ಯದಲ್ಲಿ, ಯಾವ ಬೆಲ್ಲ ಸಕ್ಕರೆಯ ಮಾತಿಗೆ ಬೆಲೆ ಇಲ್ಲ. ಯಡ್ಯೂರಪ್ಪ ಇನ್ನು ಎರಡು ವರ್ಷ ಆಡಳಿತ ನೀಡಲಿ.ಮುಂದಿನ ಚುನಾವಣೆಯಲ್ಲಿ ಯಾರ ನಾಯಕತ್ವದಲ್ಲಿ ಯಶಸ್ಸು ಸಿಗುತ್ತದೊ ಅವರನ್ನ ಬೇಕಾದರೆ ಸಿಎಂ ಮಾಡಲಿ ಎಂದ ಅವರು ರಾಜ್ಯದಲ್ಲಿ ಲಿಂಗಾಯತ ಸಮುಧಾಯದ ನಾಯಕ ಯಡ್ಯೂರಪ್ಪ. ಅವರಿದ್ದರೆ 98℅ ಆಕ್ಸಿಜನ್ ಇದ್ದಂತೆ ಬಿಟ್ಟರೆ ಆಕ್ಸಿಜನ್ ಲೆವೆಲ್ 40℅ ಇಳಿಯಲಿದೆ ಎನ್ನುವ ಮೂಲಕ ಅವರನ್ನ ಬಿಜೆಪಿ ಪಕ್ಷ ಕಡೆಗಣಿಸಿದ್ದೆ ಆದ್ರೆ ಲಿಂಗಾಯತ ಸಮುಧಾಯದ ಶಾಸಕರ ಬಣ ಎದುರಿಸಲು ಸಿದ್ದವಾಗಿದೆ ಎನ್ನವಂತೆ ಮಾರ್ಮಿಕವಾಗಿ ಹೇಳಿದ್ದಾರೆ.ನಾವು ಯಾರು ಸಿಎಂ ಮಕ್ಕಳ ಪರವಾಗಿ ಇಲ್ಲ, ಈಶ್ವರಪ್ಪ ಮುಖ್ಯಮಂತ್ರಿ ಅದ್ರೆ ಕೂಡಾ ಸ್ವಾಗತ ಇದೆ ಅಂದರು.ಇನ್ನು ಯಡ್ಯೂರಪ್ಪ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಹರಿಸಿದ ಆರ್ಥಿಕ ಅನುಧಾನಗಳಿಗೆ ಮಠಾಧೀಶರು ಸ್ವಾಮಿನಿಷ್ಠೆ ತೋರಲು ಪಣತೊಟ್ಟಂತೆ ಬಿಎಸ್‌ವೈ ಪರ ಬ್ಯಾಟಿಂಗ್ ನಡೆಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು. ಮುಂದಿನ ದಿನಗಳಲ್ಲಿ ನಾಯಕತ್ವ ಬದಲಾವಣೆ ಎಲ್ಲಿಗೆ ಬಂದು ನಿಲ್ಲುತ್ತದೆ ಎನ್ನುವುದು ಕಾದುನೋಡಬೇಕಾಗಿದೆ. ಈ ಸಂಧರ್ಭದಲ್ಲಿ ಬಳ್ಳಾರಿಯ ಕಲ್ಯಾಣ ಮಹಾ ಸ್ವಾಮಿ, ನೆರೆಯ ಆಂಧ್ರ ಪ್ರದೇಶದ ಆದೋನಿ ತಾಲೂಕಿನ ಮಠಾಧೀಶರು , ದಾವಣಗೆರೆ ಜಿಲ್ಲೆಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬುಕ್ಕ ಸಾಗರದ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಶಿವಾಚಾರ್ಯ ಸ್ವಾಮೀಜಿ, ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಹಳೇಕೋಟೆ ಮರಿಸ್ವಾಮಿ ಮಠದ ಮರಿಸಿದ್ದ ಮಹಾಸ್ವಾಮೀಜಿ, ಸಿರುಗುಪ್ಪಾದ ಬಸವ ಭೂಷಣ ಮಹಾಸ್ವಾಮೀಜಿ, ಹಿರೇಹಡಗಲಿ ಅಭಿನವ ಹಾಲಸ್ವಾಮಿ ಸೇರಿದಂತೆ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಹಿರೇಹಡಗಲಿ ಅಭಿನವ ಹಾಲಸ್ವಾಮೀಜಿ ಇನ್ನಿತರರು ಉಪಸ್ಥಿತರಿದ್ದರು.

ವರದಿ : ಬಿ.ಪಂಪನಗೌಡ.ಬಳ್ಳಾರಿ.9886633682

Post a Comment

0 Comments

Ad Code

Responsive Advertisement